Published on: November 8, 2021

ಶ್ರೀ ರಾಮಾಯಣ ಯಾತ್ರಾ ರೈಲು

ಶ್ರೀ ರಾಮಾಯಣ ಯಾತ್ರಾ ರೈಲು

ಸುದ್ಧಿಯಲ್ಲಿ ಏಕಿದೆ? ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಐಆರ್‌ಸಿಟಿಸಿ ಶ್ರೀ ರಾಮಾಯಣ ಯಾತ್ರಾ ಪ್ರವಾಸ ಸರಣಿಯನ್ನು ಆರಂಭಿಸಲು ಚಿಂತನೆ ನಡೆಸಿದೆ. ದೇಶದಲ್ಲಿ ಕೋವಿಡ್ 19 ಸನ್ನಿವೇಶದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಆಂತರಿಕ ಪ್ರವಾಸೋದ್ಯಮವನ್ನು ಹಂತ ಹಂತವಾಗಿ ಸ್ಥಾಪಿಸುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಿದೆ.

  • ಈ ಯೋಜನೆಗಳಲ್ಲಿ ಮೊದಲ ಪ್ರವಾಸ ನವೆಂಬರ್ 7ರಂದು ಆರಂಭವಾಗಲಿದೆ ಎಂದು ಭಾರತೀಯ ರೈಲ್ವೆ ಕೆಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ತಿಳಿಸಿದೆ.
  • ರಾಮಾಯಣ ಸರ್ಕ್ಯೂಟ್ ರೈಲಿನ ಮೊದಲ ನಿರ್ಗಮನ ನವೆಂಬರ್ 7ರಂದು ದಿಲ್ಲಿಯಿಂದ ಆರಂಭವಾಗಲಿದೆ. ಉಳಿದ ನಾಲ್ಕು ರೈಲುಗಳು ಮುಂದಿನ ತಿಂಗಳು ಚಲಿಸಲಿವೆ’ ಎಂದು ಐಆರ್‌ಸಿಟಿಸಿ ಹೇಳಿದೆ.
  • 12 ರಾತ್ರಿ/13 ದಿನಗಳ ಶ್ರೀ ರಾಮಾಯಣ ಯಾತ್ರಾ ಎಕ್ಸ್‌ಪ್ರೆಸ್-ಮದುರೆ ನವೆಂಬರ್ 16ರಂದು ಹೊರಡಲಿದೆ. ದಕ್ಷಿಣ ಭಾರತದ ಧಾರ್ಮಿಕ ಪ್ರವಾಸದ ಅಗತ್ಯಗಳನ್ನು ಪೂರೈಸಲು ಐಆರ್‌ಸಿಟಿಸಿ ಸ್ಲೀಪರ್ ದರ್ಜೆ ಕೋಚ್‌ಗಳನ್ನು ಒಳಗೊಂಡ ಮಿತವ್ಯಯದ ಶ್ರೀ ರಾಮಾಯಣ ಯಾತ್ರಾ ಎಕ್ಸ್‌ಪ್ರೆಸ್-ಮದುರೆ ರೈಲನ್ನು ಆರಂಭಿಸಲಿದೆ.
  • ಈ ರೈಲು ಮದುರೆಯಿಂದ ಹೊರಟು, ದಿಂಡಿಗಲ್, ತಿರುಚನಾಪಳ್ಳಿ, ಕರೂರ್, ಈರೋಡು, ಸೇಲಂ, ಜೋಲಾರ್‌ಪೆಟ್ಟೈ, ಕಟ್ಪಾಡಿ, ಚೆನ್ನೈ ಸೆಂಟ್ರಲ್, ರೇಣಿಗುಂಟ ಮತ್ತು ಕುಡಪಾಗಳಲ್ಲಿ ನಿಲ್ಲಲಿದೆ. ಜತೆಗೆ ಅದು ಹಂಪಿ, ನಾಸಿಕ್, ಚಿತ್ರಕೂಟ, ಅಲಹಾಬಾದ್, ವಾರಾಣಸಿಗೆ ತೆರಳು ಬಳಿಕ ಮದುರೆಗೆ ಮರಳಲಿದೆ.
  • 16 ರಾತ್ರಿ/17 ದಿನಗಳ ಪ್ಯಾಕೇಜಿನ ಶ್ರೀ ರಾಮಾಯಣ ಯಾತ್ರಾ ಎಕ್ಸ್‌ಪ್ರೆಸ್-ಶ್ರೀ ಗಂಗಾನಗರ ರೈಲು ಕೂಡ ಸಂಚರಿಸಲಿದ್ದು, ನವೆಂಬರ್ 25ರಂದು ಪ್ರಯಾಣ ಆರಂಭಿಸಲಿದೆ. ಇದು ಉತ್ತರ ಭಾರತದ ಧಾರ್ಮಿಕ ಕೇಂದ್ರಗಳನ್ನು ಸಂಪರ್ಕಿಸಲಿದೆ.
  • ಶ್ರೀ ಗಂಗಾ ನಗರದಿಂದ ಹೊರಟು ಅಬೋಹರ್-ಮಲೌತ್, ಭಟಿಂಡಾ, ಬರ್ನಾಲಾ, ಪಾಟಿಯಾಲ, ರಾಜ್ಪುರ, ಅಂಬಾಲಾ ಕಂಟೋನ್ಮೆಂಟ್, ಕುರುಕ್ಷೇತ್ರ, ಕರ್ನಲ್, ಪಾಣಿಪಟ್, ದಿಲ್ಲಿ ಕಂಟೋನ್ಮೆಂಟ್, ಗುರುಗಾಂವ್, ರೇವಾರಿ, ಅಲ್ವಾರ್, ಜೈಪುರ, ಆಗ್ರಾ ಕೋಟೆ, ಇಟಾವಾ ಮತ್ತು ಕಾನ್ಪುರಗಳನ್ನು ತಲುಪಲಿದೆ.
  • ಇದು ಅಯೋಧ್ಯಾ, ಸೀತಾಮರ್ಹಿ, ಜನಕಪುರ, ವಾರಾಣಸಿ, ಪ್ರಯಾಗರಾಜ್ ಮತ್ತು ಚಿತ್ರಕೂಟ, ನಾಸಿಕ್, ಹಂಪಿ, ರಾಮೇಶ್ವರಂ, ಕಂಚಿಪುರಂಗೆ ತಲುಪಿ ಗಂಗಾನಗರಕ್ಕೆ ಮರಳಲಿದೆ.