Published on: October 14, 2023

ಸಿಕ್ಕಿಂ ಪ್ರವಾಹ

ಸಿಕ್ಕಿಂ ಪ್ರವಾಹ

ಸುದ್ದಿಯಲ್ಲಿ ಏಕಿದೆ? ಸಿಕ್ಕಿಂ ಇತ್ತೀಚೆಗೆ ಗ್ಲೇಶಿಯಲ್ ಲೇಕ್ (ಹಿಮನದಿ ಸರೋವರ) ಹೊರಹರಿವಿನ ಪ್ರವಾಹವನ್ನು (GLOF) ಅನುಭವಿಸಿತು. ರಾಜ್ಯದ ವಾಯುವ್ಯದಲ್ಲಿ 17,000 ಅಡಿ ಎತ್ತರದಲ್ಲಿರುವ ಗ್ಲೇಶಿಯಲ್ ಸರೋವರವಾದ ದಕ್ಷಿಣ ಲೊನಾಕ್ ಸರೋವರವು ನಿರಂತರ ಮಳೆಯ ಪರಿಣಾಮವಾಗಿ ಸ್ಪೋಟಗೊಂಡಿದೆ.

ಮುಖ್ಯಾಂಶಗಳು

 • ಪರಿಣಾಮವಾಗಿ, ನೀರನ್ನು ಕೆಳಭಾಗದ ಪ್ರದೇಶಗಳಿಗೆ ಬಿಡಲಾಯಿತು, ಇದು ತೀಸ್ತಾ ನದಿಯಲ್ಲಿ ಪ್ರವಾಹವನ್ನು ಉಂಟುಮಾಡಿತು ಮಂಗನ್, ಗ್ಯಾಂಗ್ಟಾಕ್, ಪಾಕ್ಯೊಂಗ್ ಮತ್ತು ನಾಮ್ಚಿ, ಮತ್ತು ಸಿಕ್ಕಿಂನ ನಾಲ್ಕು ಜಿಲ್ಲೆಗಳ ಮೇಲೆ ಪರಿಣಾಮ ಬೀರಿತು ಎಂದು ಸಿಕ್ಕಿಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (SSDMA) ವರದಿ ಮಾಡಿದೆ.
 • ಈ ಪ್ರವಾಹವು ಸಿಕ್ಕಿಂನಲ್ಲಿ (ತೀಸ್ತಾ ನದಿಯ ಮೇಲೆ) ಚುಂಗ್ತಾಂಗ್ ಹೈಡ್ರೋ-ಅಣೆಕಟ್ಟು ಒಡೆದು ಒಟ್ಟಾರೆ ಪರಿಸ್ಥಿತಿಯನ್ನು ಹದಗೆಡಿಸಿತು.

ಗ್ಲೇಶಿಯಲ್ ಲೇಕ್ ಪ್ರವಾಹ

 • GLOF (ಹಿಮನದಿ ಸರೋವರ ಸ್ಪೋಟ) ಎಂಬುದು ಹಠಾತ್ ಮತ್ತು ಸಂಭಾವ್ಯ ದುರಂತದ ಪ್ರವಾಹವಾಗಿದ್ದು, ಹಿಮನದಿ ಅಥವಾ ಮೊರೇನ್‌ನ ಹಿಂದೆ ಸಂಗ್ರಹವಾಗಿರುವ ನೀರು (ಐಸ್, ಮರಳು, ಬೆಣಚುಕಲ್ಲುಗಳು ಮತ್ತು ಶಿಲಾಖಂಡರಾಶಿಗಳ ನೈಸರ್ಗಿಕ ಶೇಖರಣೆ) ತ್ವರಿತವಾಗಿ ಬಿಡುಗಡೆಯಾದಾಗ ಸಂಭವಿಸುತ್ತದೆ.
 • ಕರಗುವ ಮಂಜುಗಡ್ಡೆಯಿಂದ ರೂಪುಗೊಂಡ ಹಿಮದ ಸರೋವರಗಳು ನೈಸರ್ಗಿಕ ಸಿಹಿನೀರಿನ ಜಲಾಶಯಗಳು ತುಂಬಾ ದುರ್ಬಲವಾಗಿರುತ್ತವೆ ಇವುಗಳ ನೀರು ಹಿಡಿದಿಡುವ ಸಾಮರ್ಥ್ಯ ಮೀರಿದಾಗ ಇವುಗಳ ಗೋಡೆ ಒಡೆದು ನೀರಿನ ಹರಿವು ಹೆಚ್ಚಾಗಯುತ್ತದೆ. ಇದರಿಂದ ಈ ಹಿಮನದಿಗಳ ಕೆಳಗೆ ಇರುವ ಪ್ರದೇಶಗಳು ವಿನಾಶವನ್ನು ಅನುಭವಿಸುತ್ತವೆ
 • ಗಟ್ಟಿಮುಟ್ಟಾದ ಮಣ್ಣಿನ ಅಣೆಕಟ್ಟುಗಳಿಗಿಂತ ಭಿನ್ನವಾಗಿ, ಈ ನೈಸರ್ಗಿಕ ಜಲಾಶಯಗಳು ಬೇಗನೆ ವಿಫಲಗೊಳ್ಳಬಹುದು, ನಿಮಿಷದಿಂದ ದಿನಗಳಲ್ಲಿ ದೊಡ್ಡ ಪ್ರಮಾಣದ ನೀರನ್ನು ಬಿಡುಗಡೆ ಮಾಡುತ್ತವೆ, ಇದು ವಿನಾಶಕಾರಿ ಪ್ರವಾಹಕ್ಕೆ ಕಾರಣವಾಗುತ್ತದೆ.
 • ಹಿಮಾಲಯದ ಭೂಪ್ರದೇಶ, ಅದರ ಕಡಿದಾದ ಪರ್ವತಗಳು, ವಿಶೇಷವಾಗಿ GLOF ಗಳಿಗೆ ಗುರಿಯಾಗುತ್ತವೆ.

ಇದಕ್ಕೆ  ಕಾರಣ

 • ಹೆಚ್ಚುತ್ತಿರುವ ಜಾಗತಿಕ ತಾಪಮಾನದೊಂದಿಗೆ ಹವಾಮಾನ ಬದಲಾವಣೆಯು ಸಿಕ್ಕಿಂ ಹಿಮಾಲಯದಲ್ಲಿ ಹಿಮನದಿ ಕರಗುವ ಪ್ರಕ್ರಿಯೆಯನ್ನು ವೇಗಗೊಳಿಸಿದೆ.
 • ಹಿಮಾಲಯ-ಕರಕೋರಂ ಪ್ರದೇಶವು ಜಾಗತಿಕ ಸರಾಸರಿಗೆ ಹೋಲಿಸಿದರೆ 0.5 ಡಿಗ್ರಿ ಸೆಂಟಿಗ್ರೇಡ್ ಅನ್ನು ವೇಗವಾಗಿ ಪಡೆಯುತ್ತಿದೆ. ಹಿಮನದಿಗಳ ಕರಗುವ ವೇಗದ ಹೆಚ್ಚಳದಿಂದಾಗಿ ಇದು ವಿಪತ್ತುಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.
 • ಭೂಕಂಪಗಳು, ಅತ್ಯಂತ ಭಾರೀ ಮಳೆ ಮತ್ತು ಐಸ್ ಹಿಮಕುಸಿತಗಳು ಸೇರಿದಂತೆ ಹಲವಾರು ಕಾರಣಗಳಿಂದ GLOF ಪ್ರಚೋದಿಸಬಹುದು.

ಭಾರತದಲ್ಲಿನ ಇತರ ಇತ್ತೀಚಿನ GLOF ಘಟನೆಗಳು ಯಾವುವು?

 • ಜೂನ್ 2013 ರಲ್ಲಿ ಉತ್ತರಾಖಂಡದಲ್ಲಿ ಅಸಾಮಾನ್ಯ ಪ್ರಮಾಣದ ಮಳೆಯಾಗಿತ್ತು ಇದರ ಪರಿಣಾಮವಾಗಿ ಚೋರಬರಿ ಹಿಮನದಿಯ ಕರಗುವಿಕೆ ಮತ್ತು ಮಂದಾಕಿನಿ ನದಿಯ ಸ್ಪೋಟಕ್ಕೆ ಕಾರಣವಾಯಿತು..
 • ಆಗಸ್ಟ್ 2014 ರಲ್ಲಿ, ಹಿಮನದಿಯ ಸರೋವರದ ಪ್ರವಾಹವು ಲಡಾಖ್‌ನ ಗ್ಯಾ (Gya) ಗ್ರಾಮವನ್ನು ಅಪ್ಪಳಿಸಿತು
 • ಫೆಬ್ರವರಿ 2021 ರಲ್ಲಿ, ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯು ಹಠಾತ್ ಪ್ರವಾಹ ಉಂಟಾಯಿತು, ಇದು GLOF ಗಳಿಂದ ಉಂಟಾಗಿದೆ ಎಂದು ಶಂಕಿಸಲಾಗಿದೆ.

ತೀಸ್ತಾ ನದಿ

 • ಇದು ಬ್ರಹ್ಮಪುತ್ರ ನದಿಯ ಬಲದಂಡೆಯ ಪ್ರಮುಖ ಉಪನದಿಯಾಗಿದೆ
 • ಉಗಮ: ಉತ್ತರ ಸಿಕ್ಕಿಂ ಜಿಲ್ಲೆಯಲ್ಲಿ ಸುಮಾರು 5280 ಮೀ ಎತ್ತರದಲ್ಲಿರುವ ತ್ಸೋ ಲಾಮೊ ಸರೋವರ
 • ಭಾರತದ ರಾಜ್ಯಗಳಾದ ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ಮೂಲಕ ಹರಿಯುತ್ತದೆ ಮತ್ತು ನಂತರ ರಂಗ್‌ಪುರ ವಿಭಾಗದ ಮೂಲಕ ಬಾಂಗ್ಲಾದೇಶವನ್ನು ಪ್ರವೇಶಿಸಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ
 • ಇದು ಭಾರತೀಯ ರಾಜ್ಯಗಳಾದ ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಪ್ರವೇಶಿಸುತ್ತದೆ.
 • ಇದು ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ನಡುವಿನ ಗಡಿರೇಖೆಯನ್ನು ರೂಪಿಸುತ್ತದೆ.
 • ಜಲಾನಯನ ಪ್ರದೇಶ : 12,540 km2 (4,840 ಚದರ ಮೈಲಿ)
 • ಚುಂಗ್ತಾಂಗ್ ಅಣೆಕಟ್ಟು ಸಿಕ್ಕಿಂ ರಾಜ್ಯದ ಅತಿ ದೊಡ್ಡ ಜಲ ವಿದ್ಯುತ್ ಯೋಜನೆಯಾಗಿದೆ.