Published on: October 4, 2021

ಸುದ್ಧಿ ಸಮಾಚಾರ 04 ಅಕ್ಟೋಬರ್ 2021

ಸುದ್ಧಿ ಸಮಾಚಾರ 04 ಅಕ್ಟೋಬರ್ 2021

 • ಮೈಸೂರು ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಶೀಘ್ರವೇ ಗೊರಿಲ್ಲಾ ಹಾಗೂ ಒರಾಂಗುಟನ್ ಗಳು ಕಾಣಸಿಗಲಿವೆ. ಇದರೊಂದಿಗೆ, ಮೈಸೂರು ಮೃಗಾಲಯ, ಬಿಳಿ ಘೇಂಡಾಮೃಗ ಮತ್ತು ಆಫ್ರಿಕನ್ ಚಿರತೆಗಳೊಂದಿಗೆ ಗೊರಿಲ್ಲಾಗಳು ಮತ್ತು ಒರಾಂಗುಟನ್ಗಳನ್ನು ಹೊಂದಿರುವ ಭಾರತದ ಏಕೈಕ ಮೃಗಾಲಯ ಎಂಬ ಅಪರೂಪದ ಹೆಗ್ಗಳಿಕೆಗೆ ಪಾತ್ರವಾಗಿದೆ.
 • ಚಿತ್ರದುರ್ಗದ ಮುರುಘಾ ಮಠದ ವತಿಯಿಂದ ಪ್ರದಾನ ಮಾಡುವ ಬಸವಶ್ರೀ ಪ್ರಶಸ್ತಿಯ 2019ರ ಸಾಲಿಗೆ ಪಂಡಿತ್ ರಾಜೀವ್ ತಾರಾನಾಥ್ ಹಾಗೂ 2020ರ ಸಾಲಿನ ಪ್ರಶಸ್ತಿಗೆ ಇಸ್ರೋ ಮಾಜಿ ಅಧ್ಯಕ್ಷರಾದ ಕೆ. ಕಸ್ತೂರಿ ರಂಗನ್ ಅವರು ಆಯ್ಕೆಯಾಗಿದ್ದಾರೆ.
 • ಕೋವಿಡ್ ಸಂದರ್ಭದಲ್ಲಿ ಜನರ ಆರೋಗ್ಯ ರಕ್ಷಣೆಗಾಗಿ ಕೈಗೊಂಡ ಕಾರ್ಯಗಳಿಗಾಗಿ ಕರ್ನಾಟಕಕ್ಕೆ ‘ದಿ ಇಂಡಿಯಾ ಟುಡೇ ಗ್ರೂಪ್’ನಿಂದ ‘ಅತ್ಯುತ್ತಮ ರಾಜ್ಯ’ ಪ್ರಶಸ್ತಿ ಲಭಿಸಿದೆ.
 • 2024ರೊಳಗೆ ದೇಶದ ಪ್ರತಿ ಹಳ್ಳಿಗೂ ನಿರಂತರ ಶುದ್ಧ ಕುಡಿಯುವ ನೀರು ಕಲ್ಪಿಸುವ ಮಹತ್ವಾಕಾಂಕ್ಷಿ ಜಲ್ ಜೀವನ್ ಮಿಷನ್ನ (ಜೆಜೆಎಮ್) ಭಾಗವಾಗಿರುವ ಮೊಬೈಲ್ ಅಪ್ಲಿಕೇಷನ್ ಅನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅನಾವರಣಗೊಳಿಸಿದರು.
 • ಅತಿವೇಗದಿಂದಾಗುವ ಅಪಘಾತಗಳಿಗೆ ಕಡಿವಾಣ ಹಾಕಲು ಆಯ್ದ ಕೆಲವು ರಾಜ್ಯಗಳಲ್ಲಿನ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ನಗರಗಳ ಪ್ರಮುಖ ರಸ್ತೆಗಳಲ್ಲಿ ವೇಗ ನಿರ್ವಹಣಾ ಸಾಧನಗಳನ್ನು (ಎಸ್ಎಂಡಿ) ಅಳವಡಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಪ್ರಸ್ತಾವ ಸಿದ್ಧಪಡಿಸಿದೆ.
 • ಪಾಲ್ಘರ್ ಜಿಲ್ಲೆಯ ವಾಡಾ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯಲಾಗುವ ‘ಕೋಲಂ ಅಕ್ಕಿ‘ಗೆ ‘ಭೌಗೋಳಿಕ ಸೂಚಿ’ (ಜಿಐ ಟ್ಯಾಗ್) ಮಾನ್ಯತೆ ಲಭಿಸಿದೆ.
 • ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ತನ್ನ ‘ಎನ್‌ಎವಿ–ಇಕ್ಯಾಷ್‌’ ಕಾರ್ಡ್‌ಅನ್ನು ಕಾರವಾರದಲ್ಲಿ, ನೌಕಾನೆಲೆಯ ವಿಮಾನ ವಾಹಕ ನೌಕೆ ಐಎನ್‌ಎಸ್‌ ವಿಕ್ರಮಾದಿತ್ಯದಲ್ಲಿ ಈಚೆಗೆ ಬಿಡುಗಡೆ ಮಾಡಿತು. ನೌಕೆಗಳಲ್ಲಿ ಇರುವ ಸಿಬ್ಬಂದಿಗೆ ಆನ್‌ಲೈನ್‌ ಮತ್ತು ಆಫ್‌ಲೈನ್‌ ವಹಿವಾಟು ನಡೆಸಲು ಇದು ಉಪಯುಕ್ತವಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.
 • ಬಾಲಿವುಡ್ ನಟಿ ಕಂಗನಾ ರಣಾವತ್ ಉತ್ತರ ಪ್ರದೇಶ ಸರ್ಕಾರದ ಒಂದು ಜಿಲ್ಲೆ ಒಂದು ಉತ್ಪಾದನೆ ಕಾರ್ಯಕ್ರಮಕ್ಕೆ ರಾಯಭಾರಿಯಾಗಿದ್ದಾರೆ
 • ಅಠಾರಿ-ವಾಘಾ ಗಡಿಯಲ್ಲಿ ನಡೆಯುವ ವಿಶ್ವ ಪ್ರಸಿದ್ಧ ಬೀಟಿಂಗ್ ರೀಟ್ರೀಟ್ ಕಾರ್ಯಕ್ರಮ ಇನ್ನು ಮುಂದೆ ಜಮ್ಮು ಗಡಿಯಲ್ಲೂ ನಡೆಯಲಿದೆ.
 • ಭಾರತ-ಚೀನಾ ಗಡಿಯಿಂದ ಕೇವಲ 50 ಕಿ.ಮೀ. ದೂರದಲ್ಲಿ ಶೆಲ್ ದಾಳಿ ನಡೆಸಿ ಶತ್ರುಪಡೆಯನ್ನು ಛಿದ್ರಗೊಳಿಸುವ ಸಾಮರ್ಥ್ಯದ ಸ್ವಯಂಚಾಲಿತ ಹೊವಿಟ್ಜರ್ ‘ಕೆ9- ವಜ್ರ’ವನ್ನು ಗಡಿ ಭದ್ರತಾ ಪಡೆ ನಿಯೋಜಿಸಿದೆ.
 • ಭಯೋತ್ಪಾದನೆಯನ್ನು ನಿಗ್ರಹಿಸುವ ಕಾರ್ಯಾಚರಣೆಯ ಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತ ಮತ್ತು ಶ್ರಿಲಂಕಾ ನಡುವಿನ ಜಂಟಿ ಸೇನಾ ಅಭ್ಯಾಸ  ಮಿತ್ರ ಶಕ್ತಿ ಶ್ರೀಲಂಕಾದ ಪೂರ್ವ ಭಾಗದ ಅಂಪಾರಾ ಜಿಲ್ಲೆಯ ಕಾಂಬ್ಯಾಟ್ ಟ್ರೈನಿಂಗ್ ಸ್ಕೂಲ್ನಲ್ಲಿ ಆರಂಭವಾಯಿತು.
 • ಜಪಾನ್‌ನ ನೂತನ ಪ್ರಧಾನಿಯಾಗಿ ಮಾಜಿ ವಿದೇಶಾಂಗ ಸಚಿವ ಫುಮಿಯೊ ಕಿಶಿದಾ ಸಂಸತ್‌ನಿಂದ ಆಯ್ಕೆಯಾದರು.
 • ಕ್ರಿಪ್ಟೋಕರೆನ್ಸಿಗಳಿಗೆ ಕಾನೂನುಬದ್ಧ ಮಾನ್ಯತೆ ನೀಡಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಗೆ ಪಡೆದಿರುವ ಎಲ್‌ ಸಾಲ್ವೆಡಾರ್‌ ಇದೀಗ ಕ್ರಿಪ್ಟೋ ನಾಣ್ಯಗಳ ಗಣಿಗಾರಿಕೆಗೆ ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿದೆ. ಜ್ವಾಲಾಮುಖಿಯ ಉಷ್ಣಶಕ್ತಿ ಬಳಸಿಕೊಂಡು 269 ಡಾಲರ್‌ ಮೌಲ್ಯದ ಕ್ರಿಪ್ಟೋಕರೆನ್ಸಿ ಮೈನಿಂಗ್‌ ಮಾಡಲಾಗಿದೆ.
 • ಇದೇ ಮೊದಲ ಬಾರಿಗೆ ಕತಾರ್ ನಾಗರಿಕರು ಶಾಸಕಾಂಗ ಮಂಡಳಿ ಆಯ್ಕೆಗಾಗಿ ಹಮ್ಮಿಕೊಳ್ಳಲಾಗಿದ್ದ ಮತದಾನದಲ್ಲಿ ಪಾಲ್ಗೊಡಿದ್ದಾರೆ. ಕತಾರ್ ಹಿಂದಿನಂದಲೂ ರಾಜನ ಆಳ್ವಿಕೆಗೆ ಒಳಪಟ್ಟಿದೆ.
 • ಜಗತ್ತಿನಲ್ಲೇ ಅತ್ಯಂತ ಕೆಟ್ಟ ಆರ್ಥಿಕ ದುಸ್ಥಿತಿಯನ್ನು ಎದುರಿಸುತ್ತಿರುವ ದೇಶ ಎನ್ನುವ ಕುಖ್ಯಾತಿಗೆ ಪಾತ್ರವಾದ ವೆನಿಜುವೆಲ, 6 ಸೊನ್ನೆಗಳನ್ನು ತೆಗೆದುಹಾಕಿದ ಹೊಸ ಕರೆನ್ಸಿ ನೋಟನ್ನು ಬಿಡುಗಡೆಗೊಳಿಸಿದೆ. ಇದುವರೆಗೂ ವೆನಿಜುವೆಲ ದೇಶದಲ್ಲಿ ಲಭ್ಯವಿದ್ದ ಅತ್ಯಧಿಕ ಮೊತ್ತದ ಕರೆನ್ಸಿ ಎಂದರೆ 10 ಲಕ್ಷ ಬೊಲಿವರ್. ಇದೀಗ ನೂತನ ಕರೆನ್ಸಿ ಅದಕ್ಕೆ ಬದಲಿಯಾಗಿ ರೂಪಿಸಲಾಗಿರುವ ಕರೆನ್ಸಿ 10 ಬೊಲಿವರ್ ಎಂದು ಹೇಳಲಾಗುತ್ತಿದೆ.