Published on: June 7, 2022

ಸುದ್ಧಿ ಸಮಾಚಾರ-07 ಜೂನ್ 2022

ಸುದ್ಧಿ ಸಮಾಚಾರ-07 ಜೂನ್ 2022

  • ಆಧುನಿಕ ವೈದ್ಯಪದ್ಧತಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಆಯುರ್ವೇದ ದತ್ತ ಹೊರಳಲು ಪ್ರಯತ್ನಿಸುತ್ತಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಕೆಎಸ್‌ಆರ್‌ಡಿಪಿಆರ್) ವಿಶ್ವವಿದ್ಯಾನಿಲಯವು ಆಯುರ್ವೇದದ ಪ್ರಯೋಜನಗಳ ಕುರಿತು ಅರಿವು ಮೂಡಿಸಲು ಕಪ್ಪತಗುಡ್ಡದ ಆಯುರ್ವೇದ ಸಸ್ಯಗಳಾಧಾರಿತ ಚಿಕಿತ್ಸೆ ನೀಡುವ ಪರ್ಣಕುಟಿಯನ್ನು ನಿರ್ಮಿಸಿದೆ.

  • ಗುರ್ಗಾವ್ನ್ ಆಕ್ಮೆ ಕ್ಲೀನ್‌ಟೆಕ್‌ ಸಲ್ಯೂಷನ್ಸ್‌ ಕಂಪನಿ ಮಂಗಳೂರಿನಲ್ಲಿ ರೂ.52,000 ಕೋಟಿ ವೆಚ್ಚದಲ್ಲಿ ಹಸಿರು ಹೈಡ್ರೋಜನ್‌– ಅಮೋನಿಯಾ ತಯಾರಿಕಾ ಘಟಕ ಹಾಗೂ ಪೂರಕವಾಗಿ ಸೌರ ವಿದ್ಯುತ್‌ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಿದೆ
  • ಭಾರತ ಜೂ.06 ರಂದು ಒಡಿಶಾದಿಂದ ಮಧ್ಯಮ ವ್ಯಾಪ್ತಿಯ ‘ಅಗ್ನಿ-4’ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ
  • ಗುಜರಾತ್, ಮಹಾರಾಷ್ಟ್ರ ಮತ್ತು ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್ ಹವೇಲಿಯಾದ್ಯಂತ ವ್ಯಾಪಿಸಿರುವ ಮಹತ್ವಾಕಾಂಕ್ಷೆಯ ಅಹಮದಾಬಾದ್-ಮುಂಬೈ ಬುಲೆಟ್ ರೈಲು ಯೋಜನೆಗೆ ಅಗತ್ಯವಿರುವ ಒಟ್ಟು ಭೂಮಿಯಲ್ಲಿ ಶೇ. 90ಕ್ಕೂ ಹೆಚ್ಚು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಯೋಜನೆಯ ಅನುಷ್ಠಾನ ಸಂಸ್ಥೆ ಎನ್‌ಎಚ್‌ಎಸ್‌ಆರ್‌ಸಿಎಲ್ ಸೋಮವಾರ ತಿಳಿಸಿದೆ.
  • IRCTC ಬಳಕೆದಾರರು ತಮ್ಮ ಆಧಾರ್ ಜೊತೆ ಗುರುತಿನ ಐಡಿಯನ್ನು ಲಿಂಕ್ ಮಾಡಿದರೆ ತಿಂಗಳಿಗೆ 12ರ ಬದಲಿಗೆ 24 ಟಿಕೆಗ್ ಗಳನ್ನು ಬುಕ್ ಮಾಡಬಹುದಾಗಿದೆ.
  • ಜೂನ್ 6 ರಂದು, ಆಪರೇಷನ್ ಬ್ಲೂಸ್ಟಾರ್ ನ 38 ನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು
  • ಆಧುನಿಕ ಖಗೋಳಶಾಸ್ತ್ರದ ಅತ್ಯಂತ ಪರಿಣಾಮಕಾರಿ ಬಾಹ್ಯಾಕಾಶ ದೂರದರ್ಶಕ ಯಂತ್ರ ಎಂದೇ ಪರಿಗಣಿಸಲಾಗಿರುವ ನಾಸಾದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್, ಮುಂಬುರವ ಜುಲೈ 12ರಂದು ತನ್ನ ಮೊಟ್ಟಮೊದಲ ವೈಜ್ಞಾನಿಕ ಬಾಹ್ಯಾಕಾಶ ಚಿತ್ರವನ್ನು ಭೂಮಿಗೆ ರವಾನಿಸಲಿದೆ.