Published on: October 13, 2022

ಸುದ್ಧಿ ಸಮಾಚಾರ – 13 ಅಕ್ಟೋಬರ್ 2022

ಸುದ್ಧಿ ಸಮಾಚಾರ – 13 ಅಕ್ಟೋಬರ್ 2022

  • http://theygotodie.com/about/biography/ ಯುವ 2.0 ಇದು ಯುವ ಯೋಜನೆಯ ಎರಡನೇ ಆವೃತ್ತಿ.ಕೇಂದ್ರ ಶಿಕ್ಷಣ ಸಚಿವಾಲಯವು, ಯುವ ಬರಹಗಾರರಿಗೆ ಮಾರ್ಗದರ್ಶನ ನೀಡಲು ಆಜಾದಿ ಕಾ ಅಮೃತ್ ಮಹೋತ್ಸವ ಅಥವಾ ಭಾರತ @75 ಯೋಜನೆಯ ಭಾಗವಾಗಿ ಪ್ರಾರಂಭಿಸಿದೆ.
  • ಜ್ಯೋತಿರ್ಲಿಂಗ ಕಾಶಿ ವಿಶ್ವನಾಥ ಮಂದಿರದ ಕಾರಿಡಾರ್‌ ಅಭಿವೃದ್ಧಿಪಡಿಸಿದಂತೆಯೇ ಮತ್ತೊಂದು ಪ್ರಸಿದ್ಧ ಜ್ಯೋತಿರ್ಲಿಂಗ http://essexprintstudio.co.uk/?msclkid=ebd5d578cf6911ecb06770166b67b5ee ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಲೇಶ್ವರ ದೇಗುಲ ಪ್ರಾಂಗಣ ಅಭಿವೃದ್ಧಿಪಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಹಾಕಾಲ ಲೋಕ ಕಾರಿಡಾರ್‌ ಲೋಕಾರ್ಪಣೆ ಮಾಡಿದ್ದಾರೆ. ಇದು 900 ಮೀಟರ್‌ಗೂ ಅಧಿಕ ಉದ್ದವಿದೆ. ಇದು ಹಳೆಯ ರುದ್ರಸಾಗರ ಸರೋವರದ ಸುತ್ತ ಇದೆ. ಯೋಜನೆಯ ಭಾಗವಾಗಿ ರುದ್ರಸಾಗರ ಸರೋವರವನ್ನೂ ಅಭಿವೃದ್ಧಿಪಡಿಸಲಾಗಿದೆ ದೇಶದಲ್ಲಿಯೇ ಈ ರೀತಿಯ ಅತ್ಯಂತ ದೊಡ್ಡ ಕಾರಿಡಾರ್‌ ಎನ್ನಲಾಗಿದೆ
  • ಭಾರತೀಯ ವಾಯುಪಡೆಯ (ಐಎಎಫ್‌) ಅಧಿಕಾರಿಗಳಿಗಾಗಿ ಶಸ್ತ್ರಾಸ್ತ್ರ ವ್ಯವಸ್ಥೆಯ ಶಾಖೆಯೊಂದನ್ನು ಸ್ಥಾಪಿಸುವುದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ‘ಸ್ವಾತಂತ್ರ್ಯ ನಂತರದಲ್ಲಿ ಇದೇ ಮೊದಲ ಬಾರಿಗೆ ಶಸ್ತ್ರಾಸ್ತ್ರ ವ್ಯವಸ್ಥೆಯ ಶಾಖೆಯೊಂದನ್ನು ಸ್ಥಾಪಿಸಲಾಗುತ್ತಿದೆ. ಖಂಡಾಂತರ ಕ್ಷಿಪಣಿ, ನೆಲದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ, ದೂರ ನಿಯಂತ್ರಿತ ಯುದ್ಧ ವಿಮಾನ ಹಾಗೂ ಅವಳಿ ಹಾಗೂ ಬಹು ಸಿಬ್ಬಂದಿ ವಿಮಾನಗಳನ್ನು ಈ ವ್ಯವಸ್ಥೆಯು ಒಳಗೊಂಡಿರಲಿದೆ’.
  • ಮಹಾತ್ಮಾ ಗಾಂಧಿಯವರ ಜೀವನ ಮತ್ತು ತತ್ವ ಪ್ರಸಾರಕ್ಕೆ ಮೀಸಲಾದ ವಸ್ತುಸಂಗ್ರಹಾಲಯವನ್ನು ಯುಎಸ್‌ನ ಅಟ್ಲಾಂಟಿಕ್ ನಗರದಲ್ಲಿ ತೆರೆಯಲಾಗಿದೆ. ಈ ವಸ್ತುಸಂಗ್ರಹಾಲಯದಲ್ಲಿ ಕಲಾಕೃತಿಗಳು ಮತ್ತು ಡಿಜಿಟಲ್ ಡಿಸ್‌ಪ್ಲೇ ಪರದೆಗಳನ್ನು ಹಾಕಲಾಗಿದೆ. ಸಂದರ್ಶಕರು ಶಾಂತಿದೂತ ಗಾಂಧಿ ಅವರ ಜೀವನಕ್ಕೆ ಸಂಬಂಧಿಸಿದ ಘಟನಾವಳಿಗಳನ್ನು ವೀಕ್ಷಿಸಬಹುದಾಗಿದೆ. ನ್ಯೂಜೆರ್ಸಿ ಮೂಲದ ಗಾಂಧಿ ಸೊಸೈಟಿಯು ಆದಿತ್ಯ ಬಿರ್ಲಾ ಗ್ರೂಪ್‌ ಸಹಭಾಗಿತ್ವದಲ್ಲಿ ವಸ್ತುಸಂಗ್ರಹಾಲಯವನ್ನು ತೆರೆದಿದೆ.