Published on: January 17, 2022

ಸುದ್ಧಿ ಸಮಾಚಾರ 17 ಜನವರಿ 2022

ಸುದ್ಧಿ ಸಮಾಚಾರ 17 ಜನವರಿ 2022

  • ಮನೆ ಮನೆಗೆ ಅನಿಲ ಸಂಪರ್ಕ ಒದಗಿಸುವ ಮೂಲಕ ಸಿಲಿಂಡರ್ ಗೊಡವೆ ತಪ್ಪಿಸುವ ಕೇಂದ್ರ ಸರ್ಕಾರದ ಅನಿಲ ಕೊಳವೆ ಸಂಪರ್ಕ ಯೋಜನೆಯಡಿ ರಾಜ್ಯದ ಚಿಕ್ಕಬಳ್ಳಾಪುರ ಮತ್ತು ಯಾದಗಿರಿ ಆಯ್ಕೆಯಾಗಿದೆ.
  • ನವೋದ್ಯಮಗಳ ಉತ್ತೇಜನಕ್ಕಾಗಿ ಕೇಂದ್ರ ಸರಕಾರ ನೀಡುವ ‘ಸ್ಟಾರ್ಟ್‌ಅಪ್ ಅವಾರ್ಡ್’ನಲ್ಲಿ ಕರ್ನಾಟಕ ಅಗ್ರ ಸ್ಥಾನ ಪಡೆದಿದೆ. ಈ ಬಾರಿ ಘೋಷಿಸಲಾದ 46 ‘ರಾಷ್ಟ್ರೀಯ ಸ್ಟಾರ್ಟ್‌ಅಪ್ ಅವಾರ್ಡ್’ಗಳ ಪೈಕಿ 14 ಪ್ರಶಸ್ತಿಗಳು ರಾಜ್ಯದ ಪಾಲಾಗಿವೆ.
  • ಡಬಲ್ಡ್ ಹ್ಯಾಪ್ಲಾಯ್ಡ್’ ವಿಧಾನದ ಮೂಲಕ ಮೆಕ್ಕೆ ಜೋಳದ ಹೈಬ್ರಿಡ್ ತಳಿಗಳ ಅಭಿವೃದ್ಧಿಗೆ ಅಗತ್ಯ ಪೋಷಕ ಸಾಲುಗಳನ್ನು (ಪೇರೆಂಟಲ್ ಲೈನ್ಸ್) ಕೃತಕವಾಗಿ ಉತ್ಪಾದಿಸುವ ಕೇಂದ್ರವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಕುಣಿಗಲ್‌ನಲ್ಲಿ ಆರಂಭಿಸಲಾಗಿದೆ.
  • ಭಾರತೀಯ ಸೇನೆ ವಿನೂತನ ಯುದ್ಧ ಸಮವಸ್ತ್ರವನ್ನು ಅನಾವರಣಗೊಳಿಸಿದೆ. ಇದು ಯೋಧರಿಗೆ ಹಿತಕರವಾದ, ಹವಾಮಾನ ಸ್ನೇಹಿ ಮತ್ತು ಡಿಜಿಟಲ್ ಡಿಸ್ರಪ್ಟಿವ್ ಮಾದರಿಯ ವೈಶಿಷ್ಟ್ಯವನ್ನು ಒಳಗೊಂಡಿದೆ.
  • ವಿಶ್ವದ ಅತ್ಯಂತ ವೇಗದ ಸೂಪರ್ಸಾನಿಕ್ ಕ್ಷಿಪಣಿ ಎಂದೇ ಹೆಸರಾದ ಬ್ರಹ್ಮೋಸ್ ಖರೀದಿಸಲು ಫಿಲಿಪ್ಪೀನ್ಸ್ ಬೇಡಿಕೆ ಸಲ್ಲಿಸಿದೆ. ಈ ಸಂಬಂಧ ಭಾರತ ಮತ್ತು ಫಿಲಿಪೈನ್ಸ್ ನಡುವೆ ಒಪ್ಪಂದವಾಗಲಿದೆ.
  • ಭಾರತದಿಂದ ಕಾಣೆಯಾಗಿದ್ದ 10ನೇ ಶತಮಾನದ ಬೆಲೆಬಾಳುವ ಯೋಗಿನಿ ವಿಗ್ರಹ ಇಂಗ್ಲೆಂಡ್‌ನಲ್ಲಿ ಪತ್ತೆಯಾಗಿದ್ದು, ಅದನ್ನು ಮಕರ ಸಂಕ್ರಾಂತಿಯ ಹಬ್ಬದಂದು ಭಾರತಕ್ಕೆ ಹಸ್ತಾಂತರಿಸಲಾಗಿದೆ
  • ಪೆಸಿಫಿಕ್ ದ್ವೀಪ ರಾಷ್ಟ್ರ ಟೊಂಗಾದಲ್ಲಿ ನೀರಿನಡಿಯ ಹಂಗಾ ಟೊಂಗಾ-ಹಂಗಾ ಹಾಪೈ ಅಗ್ನಿಪರ್ವತ ಸ್ಫೋಟಗೊಂಡ ಪರಿಣಾಮ ಉಂಟಾಗಿರುವ ಸುನಾಮಿ ಭೀತಿ ಉಂಟಾಗಿದೆ. ಅಮೆರಿಕ, ಜಪಾನ್ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ.
  • ಜನವರಿ 16ರ ದಿನವನ್ನು ರಾಷ್ಟ್ರೀಯ ನವೋದ್ಯಮ ದಿನ (ಸ್ಟಾರ್ಟ್‌ಅಪ್ ಡೇ) ಎಂದು ಆಚರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.