Published on: November 17, 2022

ಸುದ್ಧಿ ಸಮಾಚಾರ – 17 ನವೆಂಬರ್ 2022

ಸುದ್ಧಿ ಸಮಾಚಾರ – 17 ನವೆಂಬರ್ 2022

  • ಜಾಗತಿಕವಾಗಿ ಮಹತ್ವ ಪಡೆದಿರುವ 25ನೇ ಆವೃತ್ತಿ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ (ಬೆಂಗಳೂರು ಟೆಕ್ ಸಮ್ಮಿಟ್) ಪ್ರಧಾನಮಂತ್ರಿ ನರೇಂದ್ರಮೋದಿ ಅವರು ವರ್ಚುವಲ್ ಚಾಲನೆ ನೀಡಿದರು.
  • ಕರ್ನಾಟಕದ ಗದಗ ಜಿಲ್ಲೆಯ ಗಜೇಂದ್ರಗಡ ಬಳಿಯ ಭೈರಾಪುರ ಗುಡ್ಡದ ಮೇಲೆ ‘ಹಿಟ್ಲರ್ ಮುಖ’ ಹೋಲುವ ಅಪರೂಪದ ಕೀಟಗಳು ಪತ್ತೆಯಾಗಿದೆ.ಜಾತಿ :ಪೆಂಟ್ಯಾಟೊಮಿಡೆ , ವೈಜ್ಞಾನಿಕ ಹೆಸರು : ‘ಕೆಟಾಕ್ಯಾಂಥಸ್ ಇನ್ಕಾರ್ನೇಟಸ್’ , ಸಾಮಾನ್ಯ ಭಾಷೆಯಲ್ಲಿ ಇದಕ್ಕೆ ‘ಹಿಟ್ಲರ್ ಕೀಟ’ ಎಂದೇ ಹೆಸರು, ಗಾತ್ರ: 30ಎಂ.ಎಂ, ಜೀವಿತಾವಧಿ: 7 ರಿಂದ 9 ತಿಂಗಳ
  • ಇಸ್ರೊ ಮುಂದಿನ ಯೋಜನೆ: ಲೂನಾರ್‌ ರೋವರ್‌ :ಚಂದ್ರನಲ್ಲಿರುವ ಶಾಶ್ವತ ನೆರಳಿನಂಥ ಪ್ರದೇಶದ ಕುರಿತು ಸಂಶೋಧನೆ ನಡೆಸುವ ನಿಟ್ಟಿನಲ್ಲಿ ಲೂನಾರ್‌ ರೋವರ್‌ (ಚಂದ್ರನ ಮೇಲ್ಮೈ ಅನ್ವೇಷಣೆಗೆ ಅನುಕೂಲವಾಗುವಂತೆ ಅಭಿವೃದ್ಧಿಗೊಳಿಸಲಾಗಿರುವ ಬಾಹ್ಯಾಕಾಶ ಪರಿಶೋಧನಾ ವಾಹನ) ಉಡಾವಣೆ ಮಾಡುವಂತೆ ಜಪಾನ್‌ನ ಜಪಾನೀಸ್‌ ಏರೊಸ್ಪೇಸ್‌ ಎಕ್ಸ್‌ಪ್ಲೊರೇಷನ್‌ ಏಜನ್ಸಿ (ಜೆಎಎಕ್ಸ್‌ಎ) ಜೊತೆ ಮಾತುಕತೆ ನಡೆಯುತ್ತಿದೆ. ಪ್ರಾಥಮಿಕ ಯೋಜನೆಗಳ ಪ್ರಕಾರ, ಇಸ್ರೊ ಅಭಿವೃದ್ಧಿಪಡಿಸಿರುವ ಲೂನಾರ್‌ ರೋವರ್‌ರನ್ನು ಜಪಾನ್‌ನ ರಾಕೆಟ್‌ ಬಳಸಿ ಚಂದ್ರನ ದಕ್ಷಿಣ ಧ್ರುವಕ್ಕೆ ಕಳಿಸಲಾಗುವುದು. ನಂತರ ಸೂರ್ಯನ ಕಿರಣವೇ ಬೀಳದ ಶಾಶ್ವತ ನೆರಳಿನಂಥ ಪ್ರದೇಶಕ್ಕೆ ರೋವರ್‌ ಚಲಿಸಲಿದೆ.
  • ಬ್ರಿಟನ್‌–ಭಾರತ ವಲಸೆ ಮತ್ತು ಪ್ರಯಾಣ ಪಾಲುದಾರಿಕೆ ಬಲವರ್ಧನೆ ನಿಟ್ಟಿನಲ್ಲಿ ಭಾರತವು ವೀಸಾ ಯೋಜನೆಯ ಲಾಭ  ಪಡೆಯುತ್ತಿರುವ ಮೊದಲ ರಾಷ್ಟ್ರವೆಂದು ಬ್ರಿಟನ್‌ ಪ್ರಧಾನಿ ಕಚೇರಿಯ ಪ್ರಕಟಣೆ ತಿಳಿಸಿದೆ. ಉಭಯ ರಾಷ್ಟ್ರಗಳು ಹಿಂದಿನ ವರ್ಷ ಈ ಒಪ್ಪಂದಕ್ಕೆ ಸಹಿ ಹಾಕಿದ್ದವು. ಈ ಯೋಜನೆಯಡಿ ಭಾರತದ 3000 ಸಾವಿರ ಯುವಕರು ಪ್ರತಿ ವರ್ಷ ಯುಕೆಯಲ್ಲಿ ಕೆಲಸ ಮಾಡುವ ಅವಕಾಶ ಪಡೆಯಲಿದ್ದಾರೆ.
  • ಆಫ್ಘಾನಿಸ್ಥಾನದಲ್ಲಿ ಉದ್ಯಾನ ಮತ್ತು ಜಿಮ್‌ಗಳಿಗೆ ಪ್ರವೇಶಿಸದಂತೆ ಮಹಿಳೆಯರಿಗೆ ನಿಷೇಧ ಹೇರಲಾಗಿದೆ. ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಅಫ್ಗಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನಿಗಳು, ಹೆಣ್ಣು ಮಕ್ಕಳು ಮಾಧ್ಯಮಿಕ ಮತ್ತು ಪ್ರೌಢಶಾಲೆಗೆ ಹೋಗುವುದಕ್ಕೆ ತಡೆ ಹಾಕಿದ್ದರು. ಔದ್ಯೋಗಿಕ ವಲಯಗಳಲ್ಲಿ ಮಹಿಳೆಯರಿಗೆ ನಿಷೇಧ ಹೇರಿದಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಅನ್ನು ಕಡ್ಡಾಯಗೊಳಿಸಿದ್ದರು. ಜನರು ಲಿಂಗ ಪ್ರತ್ಯೇಕತೆಯ ಆದೇಶಗಳನ್ನು ನಿರ್ಲಕ್ಷಿಸುತ್ತಿರುವ ಕಾರಣ ನಿಷೇಧವನ್ನು ಪರಿಚಯಿಸಲಾಗಿದೆ. ಮಹಿಳೆಯರು ಅಗತ್ಯವಿರುವ ಹಿಜಾಬ್ ಅಥವಾ ತಲೆ ಹೊದಿಕೆಯನ್ನು ಧರಿಸುತ್ತಿರಲಿಲ್ಲ. ಹಾಗಾಗಿ, ಕಠಿಣ ನಿಯಮ ಜಾರಿಗೆ ತರಲಾಗಿದೆ.
  • ಇಂಡಿಯನ್ ಪ್ರೀಮಿಯರ್ ಲೀಗ್‌ನ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುತ್ತಿದ್ದ ವೆಸ್ಟ್ ಇಂಡೀಸ್‌ನ ಖ್ಯಾತ ಕ್ರಿಕೆಟಿಗ ಕೀರನ್ ಪೊಲಾರ್ಡ್ ಐಪಿಎಲ್‌ಗೆ ವಿದಾಯ ಹೇಳಿದ್ದಾರೆ. ಅವರನ್ನು ಮುಂಬೈ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ.