Published on: September 18, 2021

ಸುದ್ಧಿ ಸಮಾಚಾರ 18 ಸೆಪ್ಟೆಂಬರ್ 2021

ಸುದ್ಧಿ ಸಮಾಚಾರ 18 ಸೆಪ್ಟೆಂಬರ್ 2021

  • ಅಶೋಕ ಟ್ರಸ್ಟ್ ಫಾರ್ ರೀಸರ್ಚ್ ಇನ್ ಇಕಾಲಜಿ ಆ್ಯಂಡ್ ಎನ್ವಿರಾನ್ಮೆಂಟ್ (ಎಟಿಆರ್ಇಇ) ಸಂಶೋಧನಾ ಕೇಂದ್ರದ ಕೀಟಶಾಸ್ತ್ರಜ್ಞರು, ಪೂರ್ವ ಹಿಮಾಲಯದಲ್ಲಿ ಪತ್ತೆ ಮಾಡಿರುವ ಅಪರೂಪದ ಇರುವೆಯೊಂದಕ್ಕೆ ಕೀಟತಜ್ಞ ಹಾಗೂ ಸಾಹಿತಿ ಪ್ರೊ.ಕೆ.ಎನ್.ಗಣೇಶಯ್ಯ ಅವರ ಹೆಸರಿಡಲಾಗಿದೆ. ಜಿನಸ್ ಪ್ಯಾರಸಿಸ್ಸಿಯಾ ಮತ್ತು ಸಿಸ್ಸಿಯಾ ಪ್ರಭೇದಕ್ಕೆ ಸೇರಿದ ಎರಡು ಅಪರೂಪದ ತಳಿಯ ಇರುವೆಗಳನ್ನು ಈಗಲ್ನೆಸ್ಟ್ ವನ್ಯಜೀವಿ ಅಭಯಾರಣ್ಯದಲ್ಲಿ ಪತ್ತೆ ಹಚ್ಚಿದೆ.
  • ಅಲಹಾಬಾದ್ ಹೈಕೋರ್ಟ್ನ ಲಖನೌ ಪೀಠದ ಹಿರಿಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಅವರನ್ನು ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲು ಶಿಫಾರಸು ಮಾಡಲಾಗಿದೆ.
  • ‘ರೈಲು ಕೌಶಲ ವಿಕಾಸ ಯೋಜನೆ’ಯಡಿ (ಆರ್ಕೆವಿವೈ) ಮುಂದಿನ ಮೂರು ವರ್ಷಗಳಲ್ಲಿ 18 ರಿಂದ 35 ವರ್ಷದೊಳಗಿನ 50,000 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಆತ್ಮನಿರ್ಭರ ಭಾರತಕ್ಕೆ ಆರ್ಕೆವಿವೈ ಕೊಡುಗೆಯಾಗಿದೆ. ಅಲ್ಲದೆ, ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸರಣಿ ಯೋಜನೆಗಳ ಭಾಗವೂ ಆಗಿದೆ. ಎಲೆಕ್ಟ್ರಾನಿಕ್ಸ್ನ ಯುಗದಲ್ಲಿ ಈ ಕೌಶಲಗಳು ಹೆಚ್ಚು ಪ್ರಸ್ತುತವಾಗಿವೆ. ಈ ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲೂ ಲಭ್ಯವಾಗಲಿದೆ.