Published on: November 24, 2022

ಸುದ್ಧಿ ಸಮಾಚಾರ – 24 ನವೆಂಬರ್ 2022

ಸುದ್ಧಿ ಸಮಾಚಾರ – 24 ನವೆಂಬರ್ 2022

  • ಚಿತ್ರ ಕಲಾವಿದ ಕೆ. ಸೋಮಶೇಖರ್ ಸಿದ್ಧಪಡಿಸಿರುವ ರಾಜ್ಯದ ಸಾಂಪ್ರದಾಯಿಕ ಕಲೆ ಹಾಗೂ ನಾಡಗೀತೆಯಲ್ಲಿರುವ ಕೆಲವು ಅಂಶಗಳನ್ನು ಸಾಂಕೇತಿಕವಾಗಿ ಬಿಂಬಿಸುವ ‘ನಾಡದೇವತೆ’ಯ ಚಿತ್ರವನ್ನು ಅಧಿಕೃತವೆಂದು ಪರಿಗಣಿಸುವಂತೆ ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಿ. ಮಹೇಂದ್ರ ಅಧ್ಯಕ್ಷತೆಯ ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಿದೆ.
  • ಹುಬ್ಬಳ್ಳಿ ಏರ್ಪೋರ್ಟ್ ರಾಜ್ಯದ ಮೊದಲ ಹಸಿರು ವಿಮಾನ ನಿಲ್ದಾಣವಾಗಿ ರೂಪುಗೊಂಡಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಅಳವಡಿಸಿರುವ 8 ಮೆ.ವ್ಯಾ. ಗ್ರಿಡ್-ಸಂಪರ್ಕಿತ ಸೌರ ವಿದ್ಯುತ್ ಸ್ಥಾವರದಿಂದಾಗಿ ಏರ್ಪೋರ್ಟ್ ಶೇ.100ರಷ್ಟು ಹಸಿರು ವಿಮಾನ ನಿಲ್ದಾಣವಾಗಿದೆ.
  • ರಾಷ್ಟ್ರೀಯ ಮಹಿಳಾ ಆಯೋಗ (NCW) ಡಿಜಿಟಲ್ ಶಕ್ತಿ ಅಭಿಯಾನದ ನಾಲ್ಕನೇ ಹಂತವನ್ನು ಪ್ರಾರಂಭಿಸಿದ್ದು, ಇದು ಸೈಬರ್ಸ್ಪೇಸ್ನಲ್ಲಿ ಮಹಿಳೆಯರ ಡಿಜಿಟಲ್ ಸಬಲೀಕರಣ ಮತ್ತು ಕೌಶಲ್ಯಕ್ಕಾಗಿ ಪ್ಯಾನ್ ಇಂಡಿಯಾ ಯೋಜನೆಯಾಗಿದೆ.
  • ಫೇಸ್ಬುಕ್ನ ಮಾತೃಸಂಸ್ಥೆ ಮೆಟಾದ ಭಾರತ ಮುಖ್ಯಸ್ಥೆಯಾಗಿ ಸಂಧ್ಯಾ ದೇವನಾಥನ್ ಅವರನ್ನು ನೇಮಕ ಮಾಡಲಾಗಿದೆ. ಸಂಧ್ಯಾ ದೇವನಾಥನ್ ಅವರು, ಬ್ಯಾಂಕಿಂಗ್, ಪಾವತಿ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಅಗಾಧ ಪರಿಣತಿ ಹೊಂದಿದ್ದಾರೆ. 2000ನೇ ಇಸವಿಯಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿರುವ ಅವರು, 2016ರಲ್ಲಿ ಫೇಸ್ಬುಕ್ ಸೇರಿದ್ದರು. ಸಿಂಗಾಪುರ ಹಾಗೂ ವಿಯೇಟ್ನಾಂನಲ್ಲಿ ಫೇಸ್ಬುಕ್ನ ಉದ್ಯಮ ವಿಸ್ತರಿಸುವಲ್ಲಿ ಸಂಧ್ಯಾ ಪ್ರಮುಖ ಪಾತ್ರ ವಹಿಸಿದ್ದರು. 2020ರಲ್ಲಿ ಏಷ್ಯಾ ಪೆಸಿಫಿಕ್ ವಲಯದಲ್ಲಿ ಉದ್ಯಮ ವಿಸ್ತರಣೆ ಮಾಡುವ ಮೆಟಾದ ಯೋಜನೆಯಲ್ಲಿ ಸಂಧ್ಯಾ ಪ್ರಮುಖ ಪಾತ್ರ ವಹಿಸಿದ್ದರು.