Published on: November 25, 2022

ಸುದ್ಧಿ ಸಮಾಚಾರ – 25 ನವೆಂಬರ್ 2022

ಸುದ್ಧಿ ಸಮಾಚಾರ – 25 ನವೆಂಬರ್ 2022

  • ಮಣ್ಣು ಇಲ್ಲದೇ ಬೆಳೆ ಊಹಿಸಲು ಆಸಾಧ್ಯ ಆದರೆ, ಮಣ್ಣು ರಹಿತವಾಗಿ ತರಕಾರಿ, ಸಾಂಬಾರ ಪದಾರ್ಥಗಳು, ಹೂವು ಹಣ್ಣುಗಳನ್ನು ಬೆಳೆಯುವ ಹೊಸ ತಂತ್ರಜ್ಞಾನ ಉತ್ತೇಜಿಸಲು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್ಆರ್) ಮುಂದಾಗಿದೆ. ಐಸಿಎಆರ್ ಮತ್ತು ಐಐಎಚ್ಆರ್ ಈ ನಿಟ್ಟಿನಲ್ಲಿ ಆಸ್ಟ್ರೇಲಿಯಾದ ವೆಸ್ಟರ್ನ್ ಸಿಡ್ನಿ ವಿಶ್ವವಿದ್ಯಾಲಯದೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಲಿವೆ.
  • ತಮಿಳುನಾಡು ಸರ್ಕಾರ ಐತಿಹಾಸಿಕ ಮಧುರೈ ಜಿಲ್ಲೆಯ 2 ಗ್ರಾಮಗಳನ್ನು ಅರಿಟ್ಟಪಟ್ಟಿ ಮತ್ತು ಮೀನಾಕ್ಷಿಪುರಂ ಗ್ರಾಮಗಳನ್ನು ಜೀವವೈವಿಧ್ಯ ಪರಂಪರೆಯ ಸಂಕೇತದ ಪಟ್ಟಿಗೆ ಅಧಿಕೃತವಾಗಿ ಸೇರಿಸಿ ಘೋಷಣೆ ಮಾಡಿದೆ.
  • ಹಲವು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾರ್ವತ್ರಿಕ ಚುನಾವಣೆಯ ವರ್ಷವಾಗಿದ್ದು ಈ ನಡುವೆಯೇ ಸರ್ಕಾರ ಅಧಿಸೂಚನೆಯ ಮೂಲಕ ಚುನಾವಣಾ ಬಾಂಡ್ ಗಳ ಮಾರಾಟವನ್ನು 15 ದಿನಗಳ ಕಾಲ ವಿಸ್ತರಿಸಿದೆ, ಸರ್ಕಾರದ ಅಧಿಸೂಚನೆಯ ವಿರುದ್ಧ ನಾಯಕರೊಬ್ಬರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
  • ಅಗ್ನಿ–3’ ಕ್ಷಿಪಣಿ: ಒಡಿಶಾ ಕರಾವಳಿ ಬಳಿಯ ಎ.ಪಿ.ಜೆ.ಅಬ್ದುಲ್‌ ಕಲಾಂ ದ್ವೀಪದಿಂದ ಮಧ್ಯಂತರ ವ್ಯಾಪ್ತಿಯ ಬ್ಯಾಲಿಸ್ಟಿಕ್‌ ಕ್ಷಿಪಣಿ ‘ಅಗ್ನಿ–3’ರ ಉಡಾವಣೆ ಯಶಸ್ವಿಯಾಯಿತು ಎಂದು ಡಿಆರ್‌ಡಿಒ ಮೂಲಗಳು ಹೇಳಿವೆ.

ತರಬೇತಿ ಉದ್ದೇಶದಿಂದ ಈ ಕ್ಷಿಪಣಿ ಉಡಾವಣೆ ಪರೀಕ್ಷೆಯನ್ನು ನೆರವೇರಿಸಲಾಯಿತು. ಪೂರ್ವ ನಿರ್ಧರಿತ ಗುರಿಯನ್ನು ಧ್ವಂಸಗೊಳಿಸುವ ಮೂಲಕ ಕ್ಷಿಪಣಿ ವ್ಯವಸ್ಥೆಯ ಕಾರ್ಯಾಚರಣೆಗೆ ಸಂಬಂಧಿಸಿದ ಎಲ್ಲ ಅಂಶಗಳು ಕ್ರಮಬದ್ಧವಾಗಿವೆ ಎಂಬುದನ್ನು ಈ ಪರೀಕ್ಷೆ ಸಾಬೀತುಪಡಿಸಿತು.

  • ನೇಪಾಳದಿಂದ ಕಣ್ಮರೆಯಾಗಿದ್ದ ಅಳಿವಿನಂಚಿನಲ್ಲಿರುವ ಅಪರೂಪದ ರಣಹದ್ದು ಬಿಹಾರದ ದರ್ಭಾಂಗ ಸಮೀಪದ ಪಕ್ಷಿಧಾಮವೊಂದರಲ್ಲಿ ರಣಹದ್ದು ಪತ್ತೆಯಾಗಿದೆ.
  • ವಿದೇಶಗಳಿಂದ ವಿಮಾನದಲ್ಲಿ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಕೋವಿಡ್ ಸಮಯದಲ್ಲಿ ಕಡ್ಡಾಯ ಮಾಡಲಾಗಿದ್ದ ‘ಏರ್‌ ಸುವಿಧಾ’ ನಿಯಮಗಳನ್ನು ಕೇಂದ್ರ ಸರಕಾರ ಜಾರಿಯಾಗುವಂತೆ ರದ್ದುಗೊಳಿಸಿದೆ. ವಿದೇಶದಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ ವ್ಯಾಕ್ಸಿನ್ ಪಡೆದಿರಬೇಕು ಎಂಬ ನಿಯಮವನ್ನೂ ಕೈಬಿಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ‘ಅಂತಾರಾಷ್ಟ್ರೀಯ ಆಗಮನದ ಮಾರ್ಗಸೂಚಿ’ಯನ್ನು ಪರಿಷ್ಕರಣೆ ಮಾಡಿದೆ”.
  • ಅಮೆರಿಕದ ಕಾನ್ಸಾಸ್ ಸ್ಟೇಟ್ ಯೂನಿವರ್ಸಿಟಿಯ ಭಾರತೀಯ ಮೂಲದ ಕಂಪ್ಯೂಟರ್‌ ಸೈನ್ಸ್‌ ಪ್ರಾಧ್ಯಾಪಕಿ ಪವಿತ್ರಾ ಪ್ರಭಾಕರ್‌ ಅವರು ಬಳಕೆದಾರರ ನಕಾರಾತ್ಮಕ ಅನುಭವಗಳನ್ನು ಕಡಿಮೆ ಮಾಡುವ ತಂತ್ರಾಂಶವನ್ನು ವಿನ್ಯಾಸಗೊಳಿಸಿದ್ದಕ್ಕಾಗಿ ಅಮೆಜಾನ್ ಸಂಶೋಧನಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.
  • ಭಾರತೀಯ ವನ್ಯಜೀವಿ ತಜ್ಞೆ, ಅಸ್ಸಾಂನ ಡಾ. ಪೂರ್ಣಿಮಾ ದೇವಿ ಬರ್ಮನ್‌ ಅವರಿಗೆ ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವ ಪ್ರಶಸ್ತಿ ಎನಿಸಿರುವ ‘ಈ ವರ್ಷದ ಚಾಂಪಿಯನ್ಸ್‌ ಆಫ್‌ ಅರ್ಥ್‌’ ಪ್ರಶಸ್ತಿ ಲಭಿಸಿದೆ.