Published on: September 27, 2021

ಸುದ್ಧಿ ಸಮಾಚಾರ 27 ಸೆಪ್ಟೆಂಬರ್ 2021

ಸುದ್ಧಿ ಸಮಾಚಾರ 27 ಸೆಪ್ಟೆಂಬರ್ 2021

  • ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ವಿಧಾನಸಭೆಯಿಂದ ನೀಡಲಾಗುವ ಮೊದಲ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಲೋಕಸಭೆ ಸ್ಪೀಕರ್ ಓ ಬಿರ್ಲಾ ಅವರು ಪ್ರಶಸ್ತಿ ಪ್ರಧಾನ ಮಾಡಿದರು.
  • ಚಾಮರಾಜನಗರವು ಮೂರು ಹುಲಿ ಅಭಯಾರಣ್ಯಗಳನ್ನು ಹೊಂದಿರುವ ದೇಶದ ಮೊದಲ ಜಿಲ್ಲೆಯಾಗಲಿದೆ. ಸುಮಾರು ಶೇಕಡಾ 51 ರಷ್ಟು ಅರಣ್ಯವನ್ನು ಹೊಂದಿರುವ ಇದು ಈಗಾಗಲೇ ಬಂಡೀಪುರ ಮತ್ತು ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯದ ವನ್ಯಜೀವಿ ಧಾಮಗಳನ್ನು ಹೊಂದಿದೆ. ಇದಕ್ಕೆ ಎಂಎಂ ಹಿಲ್ಸ್ ಟೈಗರ್ ಪ್ರಾಜೆಕ್ಟ್ ಸೇರ್ಪಡೆಯಾಗಿದೆ. ಇದು 200 ಹುಲಿಗಳನ್ನು ಹೊಂದಿದೆ.
  • ಜವಾಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ಡ್ಸೈಂಟಿಫಿಕ್ ರೀಸರ್ಚ್ನ (ಜೆಎನ್ಸಿಎಎಸ್ಆರ್) ಪ್ರಾಧ್ಯಾಪಕ ಕಾನಿಷ್ಕ ವಿಶ್ವಾಸ್ ಅವರು 2021ನೇ ಸಾಲಿನ ‘ಶಾಂತಿ ಸ್ವರೂಪ್ ಭಟ್ನಾಗರ್’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
  • ಆರೋಗ್ಯ ಕುರಿತ ಸಮಗ್ರ ವಿವರಗಳುಳ್ಳ ಡಿಜಿಟಲ್ ಆರೋಗ್ಯ ಕಾರ್ಡ್ ವಿತರಿಸುವ ‘ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
  • ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ‘ಗುಲಾಬ್‌’ ಚಂಡಮಾರುತ (Gulab cyclone) ಉಂಟಾಗಿದ್ದು, ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿ ಪ್ರದೇಶಗಳಿಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
  • ಕೇಂದ್ರ ಸರ್ಕಾರ 56 C-295 ಸರಕು ಸಾಗಣೆ ವಿಮಾನ ಸ್ವಾಧೀನ ಒಪ್ಪಂದವನ್ನು ಅಧಿಕೃತಗೊಳಿಸಿದೆ. •         ಭಾರತೀಯ ಭೂಸೇನೆಗೆ 118 ಅರ್ಜುನ ಎಂಕೆ-1 ಯುದ್ಧ ಟ್ಯಾಂಕರ್ ನಿರ್ಮಿಸಲು ಆದೇಶ ನೀಡಿದ್ದ ಕೇಂದ್ರ ಸರ್ಕಾರ, ಈಗ ವಾಯುಪಡೆಗಾಗಿ 20 ಸಾವಿರ ಕೋಟಿ ರೂ. ಮೌಲ್ಯದ 56 ಮಧ್ಯಮ ಪ್ರಮಾಣದ ಸರಕು ಸಾಗಣೆ ವಿಮಾನ, “ಸಿ-295′ ಖರೀದಿಗೆ ಅನುಮತಿ ನೀಡಿದೆ
  • ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಬಾಹ್ಯ ಲೆಕ್ಕ ಪರಿಶೋಧಕರ ಹುದ್ದೆಯ ಆರು ವರ್ಷಗಳ ಅವಧಿಗೆ ಭಾರತದ ಸಿಎಜಿ ಜಿಸಿ ಮುರ್ಮು ಅವರು ಆಯ್ಕೆಯಾಗಿದ್ದಾರೆ. ಮತದಾನದಲ್ಲಿ ಜರ್ಮನಿ, ಬ್ರಿಟನ್, ಟರ್ಕಿಯಂತಹ ದೇಶಗಳನ್ನು ಭಾರತ ಮಣಿಸಿದೆ.
  • ವಿಶ್ವ ಪ್ರವಾಸೋದ್ಯಮ ದಿನವನ್ನು ವಿಶ್ವಸಂಸ್ಥೆಯ ಸಂಸ್ಥೆಗಳು (UNO) ಪ್ರತಿ ವರ್ಷ ಸೆಪ್ಟೆಂಬರ್ 27 ರಂದು ಆಚರಿಸಲಾಗುತ್ತದೆ.