Published on: December 5, 2022

ಸುದ್ಧಿ ಸಮಾಚಾರ: 5 ಡಿಸೆಂಬರ್ 2022

ಸುದ್ಧಿ ಸಮಾಚಾರ: 5 ಡಿಸೆಂಬರ್ 2022

  • ಕರ್ನಾಟಕ ರಾಜ್ಯದ ರೈತರು ಸಂಪೂರ್ಣ ಡಿಜಿಟಲೀಕರಣಗೊಳ್ಳುತ್ತಿದ್ದು, 2023ರ ವೇಳೆಗೆ ಆನ್’ಲೈನಲ್ಲಿಯೇ ಬೆಳೆಗಳ ವಿತರಣೆ ಹಾಗೂ ಖರೀದಿ ಮಾಡಲಿದ್ದಾರೆ. ರೈತರು ಸಂಪೂರ್ಣ ಡಿಜಿಟಲೀಕರಣಗೊಳ್ಳುತ್ತಿರುವುದು ದೇಶದಲ್ಲಿಯೇ ಮೊದಲಾಗಿದೆ. ರಾಜ್ಯದ ಕೃಷಿ ಇಲಾಖೆ ರೈತರನ್ನು ಡಿಜಿಟಲೀಕರಣಗೊಳಿಸುತ್ತಿದ್ದು , 2023ರ ಏಪ್ರಿಲ್ 1 ರಿಂದ ರೈತರು ಸಂಪೂರ್ಣ ಕಾಗದರಹಿತ ಹಾಗೂ ಪಾರದರ್ಶಕ ರೀತಿಯಲ್ಲಿ ಖರೀದಿ ಮತ್ತು ವಿತಾರಣಾ ಪ್ರಕ್ರಿಯೆ ಮಾಡುವುದು ಕಡ್ಡಾಯ ಮಾಡಿದೆ.

  • ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾಆಸ್ತಿಗಳ ತೆರಿಗೆ ಪಾವತಿ ಇನ್ನು ಮುಂದೆ ಸುಲಭವಾಗಲಿದೆ. ಇದಕ್ಕಾಗಿ ಪಂಚತಂತ್ರ ಮೊಬೈಲ್ ಆ್ಯಪ್ ಸಿದ್ಧಗೊಳ್ಳುತ್ತಿದ್ದು, ಸಿಬ್ಬಂದಿ ಮನೆ- ಮನೆಗೆ ಭೇಟಿ ನೀಡಿ ತೆರಿಗೆ ಸಂಗ್ರಹಿಸಲಿದ್ದಾರೆ.ಗ್ರಾಮ ಪಂಚಾಯಿತಿ ಆಸ್ತಿ ತೆರಿಗೆಯಲ್ಲಿ ಪಾರದರ್ಶಕತೆ ತರುವುದು ಮತ್ತು ಉತ್ತರದಾಯಿತ್ವ ಕಾಪಾಡುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸುತ್ತಿದೆ. ಎಲ್ಲಾಬಗೆಯ ಆಸ್ತಿಗಳಿಗೂ ಇದರಲ್ಲಿ ನಿಖರವಾದ ತೆರಿಗೆ ದರದ ಮಾಹಿತಿಯಿರುತ್ತದೆ.
  • ನೌಕಾಪಡೆ ದಿನ ಅಂಗವಾಗಿ ಡಿಸೆಂಬರ್4 ರಂದು ಭಾರತೀಯ ನೌಕಾಪಡೆಯು ತನ್ನ ಕಾರ್ಯಾಚರಣೆ  ಪ್ರಾತ್ಯಕ್ಷಿಕೆ ಮೂಲಕ ಪ್ರಬಲ ಯುದ್ಧ ಸಾಮರ್ಥ್ಯ ಪ್ರದರ್ಶಿಸಿತು. ವಿಶಾಖಪಟ್ಟಣದ ರಾಮಕೃಷ್ಣ ಬೀಚ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಮತ್ತು ಸಶಸ್ತ್ರ ಪಡೆಗಳ ಮುಖಸ್ಥರೂ ಆದ ದ್ರೌಪದಿ ಮುರ್ಮು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.  ಮೊದಲ ಬಾರಿಗೆ ನೌಕಾಪಡೆ ದಿನವನ್ನು ನವದೆಹಲಿಯ ಹೊರಗೆ ಆಚರಿಸಲಾಯಿತು. 2022 ರ ಥೀಮ್ ಸ್ವರ್ಣಿಮ್ ವಿಜಯ್ ವರ್ಷ್ ಅಂದರೆ 50 ನೇ ವಿಜಯೋತ್ಸವ
  • ಗೂಗಲ್ ಸಿಇಓ ಸುಂದರ್ ಪಿಚೈ ಅವರಿಗೆ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯನ್ನು ಅಮೆರಿಕಾದ ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರು ಹಸ್ತಾಂತರ ಮಾಡಿದರು. ಮುಧುರೈನಲ್ಲಿ ಹುಟ್ಟಿ ಅಮೆರಿಕಾದಲ್ಲಿ ಬೆಳೆದ ಭಾರತೀಯ ಮೂಲದ ಸುಂದರ್ ಪಿಚೈ ಅವರಿಗೆ 2022 ರಲ್ಲಿ ವ್ಯಾಪಾರ ಮತ್ತು ಕೈಗಾರಿಕೆ ವಿಭಾಗದಲ್ಲಿನ ಅವರ ಸಾಧನೆಯನ್ನು ಗುರುತಿಸಿ ಅವರಿಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಪದ್ಮ ಭೂಷಣ ಪ್ರಶಸ್ತಿಯನ್ನು ಘೋಷಿಸಲಾಗಿತ್ತು.
  • ಬೃಹತ್ ಹಿಜಾಬ್ ವಿರೋಧಿ ಪ್ರತಿಭಟನೆಗೆ ಮಣಿದು ಇರಾನ್ ಸರ್ಕಾರ ತನ್ನ ದೇಶದಲ್ಲಿನ ‘ನೈತಿಕತೆ ಪೋಲೀಸ್’ ವ್ಯವಸ್ಥೆಯನ್ನು ವಿಸರ್ಜಿಸಿದೆ. ನೈತಿಕತೆಯ ಪೋಲೀಸ್ — ಔಪಚಾರಿಕವಾಗಿ ಗಶ್ಟ್-ಇ ಇರ್ಷಾದ್ ಅಥವಾ “ಮಾರ್ಗದರ್ಶನ ಪ್ಯಾಟ್ರೋಲ್” ಎಂದು ಕರೆಯಲ್ಪಡುತ್ತದೆ. ಇರಾನ್ ಅಧ್ಯಕ್ಷ ಮಹಮ್ಮದ್ ಅಹ್ಮದಿನೆಜಾದ್ ಅವರು ಈ “ಮಾರ್ಗದರ್ಶನ ಮತ್ತು ಹಿಜಾಬ್ ಸಂಸ್ಕೃತಿಯನ್ನು ಹರಡಲು” ಕಠಿಣವಾದ ನೈತಿಕತೆಯ ಪೋಲೀಸ್ ಸ್ಥಾಪಿಸಿದ್ದರು