Published on: April 7, 2022

ಸುದ್ಧಿ ಸಮಾಚಾರ 7 ಏಪ್ರಿಲ್ 2022

ಸುದ್ಧಿ ಸಮಾಚಾರ 7 ಏಪ್ರಿಲ್ 2022

  • ಬೆಂಗಳೂರು ಮೂಲದ ಸಂಗೀತ ನಿರ್ದೇಶಕ ರಿಕಿ ಕೇಜ್ ಅವರು 2022ನೇ ಸಾಲಿನ ಪ್ರತಿಷ್ಟಿತ ಅಂತಾರಾಷ್ಟ್ರೀಯ ಪ್ರಶಸ್ತಿಯಾದ ಗ್ರ್ಯಾಮಿಯನ್ನು ಗೆದ್ದುಕೊಂಡಿದ್ದಾರೆ. ಇದು ಅವರ ಎರಡನೇ ಗೆಲುವಾಗಿದೆ. ಈ ಹಿಂದೆ ‘ವಿಂಡ್ಸ್ ಆಫ್ ಸಂಸಾರ’ ಎನ್ನುವ ಆಲ್ಬಂಗೆ ಗ್ರ್ಯಾಮಿ ಗೆದ್ದುಕೊಂಡಿದ್ದರು.
  • ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನೀಡುವ 2020-21ನೇ ಸಾಲಿನ ಏಕಲವ್ಯ ಪ್ರಶಸ್ತಿ, ಜೀವಮಾನ ಸಾಧನೆ, ಕ್ರೀಡಾರತ್ನ ಹಾಗೂ ಕ್ರೀಡಾ ಪೋಷಕ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಘೋಷಿಸಲಾಗಿದೆ.
  • ದೇಶದಲ್ಲಿಯೇ ಮೊದಲ ಬಾರಿಗೆ ಸಾವಯವ ಕೃಷಿಯತ್ತ  ಗಮನ ಹರಿಸಿರುವ ರಾಜ್ಯ ಸರ್ಕಾರ, ಯಾವುದೇ ರಾಸಾಯನಿಕ ಮತ್ತು ಕ್ರಿಮಿನಾಶಕ ಬಳಸದೆ ರಾಜ್ಯದ ನಾಲ್ಕು ವಿಜ್ಞಾನ ವಿಶ್ವವಿದ್ಯಾಲಯಗಳಲ್ಲಿ ತಲಾ 1, 000 ಎಕರೆಯಂತೆ 4,000 ಎಕರೆ  ಭೂಮಿಯಲ್ಲಿ ಬೆಳೆ ಬೆಳೆಯಲು ಮುಂದಾಗಿದೆ.
  • ಸಾಮೂಹಿಕ ನಾಶ ಶಸ್ತ್ರಾಸ್ತ್ರಗಳು ಹಾಗೂ ಅವುಗಳ ವಿತರಣಾ ವ್ಯವಸ್ಥೆಗಳ (ಕಾನೂನುಬಾಹಿರ ಚಟುವಟಿಕೆಗಳ ನಿಷೇಧ) ಕಾಯ್ದೆ’ ತಿದ್ದುಪಡಿಗೆ ಸಂಬಂಧಿಸಿದ ಮಸೂದೆಯನ್ನು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಲೋಕಸಭೆಯಲ್ಲಿ ಮಂಡಿಸಿದರು.
  • ಭಾರತ 122 ವರ್ಷಗಳಲ್ಲೇ 2022 ರ ಮಾರ್ಚ್ ತಿಂಗಳು ಅತಿ ಹೆಚ್ಚು ಉಷ್ಣಾಂಶ ದಾಖಲಾದ ಮಾಸವಾಗಿದೆ ಎಂದು ಭಾರತದ ಹವಾಮಾನ ಇಲಾಖೆ ಹೇಳಿದೆ.
  • ಭಾರತವು  ರಷ್ಯಾ-ವಿನ್ಯಾಸಗೊಳಿಸಿದ 12 ಸುಖೊಯ್-30 ಎಮ್ ಕೆ ಐ ಗಳ ಖರೀದಿಯ ವ್ಯವಹಾರಕ್ಕೆ ಸಹಿ ಹಾಕಲಿದೆ ಎಂದು ವರದಿಯಾಗಿದ್ದು, ಈ ವ್ಯವಹಾರ ರೂ 10,000 ಕೋಟಿ ಮೊತ್ತದ್ದಾಗಿದೆ.
  • ನೇಪಾಳ ಮತ್ತು ಭಾರತದ ನಡುವಿನ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವುದರ ಭಾಗವಾಗಿ ಪ್ರಥಮ ಬ್ರಾಡ್‌ಗೇಜ್‌ ಪ್ಯಾಸೆಂಜರ್ ರೈಲು ಸೇವೆಗೆ ಚಾಲನೆ ನೀಡಲಾಯಿತು.ಜಯನಗರ –ಕುರ್ತಾ ಸೆಕ್ಷನ್‌ ರೈಲು ಸೇವೆಯು ಜಯನಗರ –ಬಿಜಲ್ಪುರ–ಬರ್ದಿಬಾಸ್‌ ನಡುವಣ ರೈಲು ಸೇವೆಯ ಭಾಗವಾಗಿದೆ
  • ರೂಪೆ ಕಾರ್ಡ್ ಹೊಂದಿರುವವರು ಇನ್ನು ಮುಂದೆ ನೇಪಾಳದಲ್ಲಿ ಪಾವತಿ ವಹಿವಾಟು ನಡೆಸಬಹುದು. ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರು ನೇಪಾಳದಲ್ಲಿ ರೂಪೆ ವಹಿವಾಟು ಆರಂಭಕ್ಕೆ ಚಾಲನೆ ನೀಡಿದ್ದಾರೆ.
  • ಈ ಬಾರಿಯ ವಿಶ್ವ ಆರೋಗ್ಯ ದಿನದ (ಏ. 7) ಧ್ಯೇಯ‘Our planet, our health’- ‘ನಮ್ಮ ಗ್ರಹ, ನಮ್ಮ ಆರೋಗ್ಯ’