Published on: December 7, 2022

ಸುದ್ಧಿ ಸಮಾಚಾರ 7 ಡಿಸೆಂಬರ್ 2022

ಸುದ್ಧಿ ಸಮಾಚಾರ 7 ಡಿಸೆಂಬರ್ 2022

  • buy generic Latuda ಕಬ್ಬಿನ ಉಪ ಉತ್ಪನ್ನ ಎಥೆನಾಲ್ ಮೇಲಿನ ಲಾಭಾಂಶವನ್ನು ರೈತರಿಗೆ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಮೊದಲ ಹಂತದಲ್ಲಿ ಕಬ್ಬು ಬೆಳೆಗಾರರಿಗೆ 204.47 ಕೋಟಿ ರೂ. ಕೊಡುಗೆ ಘೋಷಿಸಿದೆ. ಇಲ್ಲಿವರೆಗೆ Zanesville ಸಕ್ಕರೆಯ ಉಪ ಉತ್ಪನ್ನಗಳ ಮೇಲೆ ಲಾಭಾಂಶ ನೀಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಕಬ್ಬಿನ ಉಪ ಉತ್ಪನ್ನದ ಮೇಲೆ ರೈತರಿಗೆ ಲಾಭಾಂಶ ನೀಡಲು ಕಬ್ಬು ನಿಯಂತ್ರಣ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

  • ರಾಜ್ಯ ಸರ್ಕಾರದಿಂದ ಕ್ರೀಡಾ ಸಾಧಕರಿಗೆ ನೀಡುವ 2021ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ, 36ನೇ ರಾಷ್ಟ್ರೀಯ ಕ್ರೀಡಾಕೂಟ ಪದಕ ವಿಜೇತರಿಗೆ ನಗದು ಪುರಸ್ಕಾರ ಹಾಗೂ 2022-23ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗಿದೆ.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕೊಡಮಾಡುವ ಈ ಪ್ರಶಸ್ತಿಗೆ ರಾಜ್ಯದ ಹಲವು ಕ್ರೀಡಾ ಸಾಧಕರು ಆಯ್ಕೆಯಾಗಿದ್ದಾರೆ.
  • ದಿವ್ಯಾಂಗರಿಗೆ ವಸತಿ ಯೋಜನೆಯಲ್ಲಿ ಶೇ.3 ರಷ್ಟು ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
  • ಡ್ರೋನ್ ಬಳಸಿ ಔಷಧಗಳ ತಲುಪಿಸುವ ಕಾರ್ಯ ಆರಂಭಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಮೇಘಾಲಯ ಪಾತ್ರವಾಗಿದೆ.ವಿಶ್ವಬ್ಯಾಂಕ್ ನಿಂದ ಆರ್ಥಿಕ ನೆರವು ಪಡೆದು ಚಾಲ್ತಿಯಲ್ಲಿರುವ ಡ್ರೋಣ್ ಸೇವೆಗಳು ಮೇಘಾಲಯ ಆರೋಗ್ಯ ವ್ಯವಸ್ಥೆ ಸದೃಢ ಯೋಜನೆ ಹಾಗೂ ಸ್ಟಾರ್ಟ್ ಅಪ್ ಟೆಕ್ಕೀಗಲ್ ಎಂಬ ಜಂಟಿ ಸಹಯೋಗದ್ದಾಗಿದ್ದು, ಇದು ಏಷ್ಯಾದ ಮೊದಲ, ಆರೋಗ್ಯ ವಿತರಣಾ ವ್ಯವಸ್ಥೆಯಗಾಗಿಯೇ ಇರುವ ಡ್ರೋಣ್ ಸ್ಟೇಷನ್ ಆಗಿದೆ.
  • ಆರೋಗ್ಯದ ಸಂಬಂಧಿ ಉತ್ಪನ್ನಗಳು ಹಾಗೂ ಔಷಧಗಳನ್ನು ಗ್ರಾಹಕರಿಗೆ ತಲುಪಿಸಲು ಡ್ರೋನ್ ಡೆಲಿವರಿಯ ಪ್ರಾಯೋಗಿಕ ಯೋಜನೆಯನ್ನು ಡೆಹ್ರಾಡೂನ್ನಲ್ಲಿ ಟಾಟಾ ಗ್ರೂಪ್ನ ಡಿಜಿಟಲ್ ಹೆಲ್ತ್ ಪ್ಲಾಟ್ಫಾರ್ಮ್ ‘1ಎಂಜಿ’ ಪ್ರಾರಂಭಿಸಿದೆ.ಈ ಸೇವೆಗಾಗಿ ಟಾಟಾ ಸಂಸ್ಥೆ ಪ್ರಮುಖ ಡ್ರೋನ್ ಲಾಜಿಸ್ಟಿಕ್ಸ್ ಸೇವಾ ಪೂರೈಕೆದಾರ ಕಂಪನಿ ಟಿಸಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ.
  • ಭಾರತ ಮತ್ತು ಜರ್ಮನಿ ವಲಸೆ ಮತ್ತು ಮೊಬಿಲಿಟಿ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿವೆ ಇದರಿಂದ ಪರಸ್ಪರ ದೇಶದ ಜನರು ಎರಡೂ ದೇಶಗಳಲ್ಲಿ ಅಧ್ಯಯನ, ಸಂಶೋಧನೆ ಹಾಗೂ ಉದ್ಯೋಗ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.