Published on: December 9, 2022

ಸುದ್ಧಿ ಸಮಾಚಾರ: 9 ಡಿಸೆಂಬರ್ 2022

ಸುದ್ಧಿ ಸಮಾಚಾರ: 9 ಡಿಸೆಂಬರ್ 2022

  • ಎಲ್ಲ ಕ್ಷೇತ್ರಗಳಲ್ಲಿ ಯುವಕರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಯುವ ನೀತಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಯುವ ಜನರ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಪ್ರತ್ಯೇಕ ಯುವ ಸಬಲೀಕರಣ ನಿರ್ದೇಶನಾಲಯ, ಯುವ ಬಜೆಟ್‌, ಯುವ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಮೇಲ್ವಿಚಾರಣೆ ವ್ಯವಸ್ಥೆ ಒಳಗೊಂಡಿದೆ

  • ಕರ್ನಾಟಕದಲ್ಲಿ ಅಭಿವೃದ್ಧಿ ಹಾಗೂ ನಾವಿನ್ಯತೆಯ ಪಯಣ, ಇದಕ್ಕೆ ಕಾರಣವಾಗಿರುವ ಸಾಧಕರು, ಇವರ ಸಾಧನೆಗಳನ್ನು ಬಿಂಬಿಸುವ (ಇನ್ನೋವೇಷನ್ ಎಕ್ಸ್ಪೀರಿಯನ್ಸ್ ಮ್ಯೂಸಿಯಂ) ನಾವಿನ್ಯತಾ ಅನುಭವ ವಸ್ತು ಸಂಗ್ರಹಾಲಯವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.·
  • ಈ ಬಾರಿ ಪಕ್ಷಿ ಉತ್ಸವ ಕೊಲ್ಲೂರಿನ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದಲ್ಲಿ ಜನವರಿ 6ರಿಂದ 8ರವರೆಗೆ     ನಡೆಯಲಿದೆ.
  • ಭಾರತೀಯ ವಿಜ್ಞಾ ನಸಂಸ್ಥೆ ಮತ್ತು ಸೆಲ್ಲಿಂಕ್ ಕಂಪನಿಗಳ ಸಹಯೋಗದಲ್ಲಿ ಐಐಎಸ್ಸಿ ಯಲ್ಲಿ ಸ್ಥಾಪಿಸಿರುವ ಭಾರತದ ಪ್ರ ಪ್ರ ಥಮ 3ಡಿ ಬಯೋಪ್ರಿಂ ಟಿಂಗ್ ಉತ್ಕೃ ಷ್ಟ ತಾ ಕೇಂದ್ರ ವನ್ನು ವಿಜ್ಞಾ ನ ಮತ್ತು ತಂತ್ರಜ್ಞಾ ನ ಸಚಿವ ಡಾ.ಸಿ.ಎನ್ ಅಶ್ವ ತ್ಥ ನಾರಾಯಣ ಅವರು ಉದ್ಘಾ ಟಿಸಿದರು. ಅಂಗಾಂಶಗಳು ಮತ್ತು ಜೀವಕೋಶಗಳನ್ನು ಆಧರಿಸಿದ ಚಿಕಿತ್ಸೆಗಳು ಮುಂಚೂಣಿಗೆ ಬರುತ್ತಿದ್ದು, ಇವು ಕ್ರಾಂತಿಕಾರಕ ಬದಲಾವಣೆಗಳನ್ನು ತರುತ್ತಿವೆ. ಮುಂಬರುವ ವರ್ಷಗಳಲ್ಲಿ ಆಯಾ ವ್ಯಕ್ತಿಗಳ ಶರೀರ ಸ್ವಭಾವವನ್ನು ಆಧರಿಸಿ, ರೋಗಗಳನ್ನು ಗುಣಪಡಿಸುವಂತಹ ನಿರ್ದಿಷ್ಟ ಬಗೆಯ ಚಿಕಿತ್ಸಾ ಕ್ರಮಗಳು ಜನಪ್ರಿಯವಾಗಲಿದೆ. ಇದರಲ್ಲಿ 3ಡಿ ಬಯೋಪ್ರಿಂಟಿಂಗ್‌ ಮಹತ್ತರ ಪಾತ್ರ ವಹಿಸಲಿದೆ
  • ಬಂಗಾಳ ಕೊಲ್ಲಿಯ ನೈರುತ್ಯ ಭಾಗದಲ್ಲಿ ವಾಯುಭಾರ ಕುಸಿತದಿಂದಾಗಿ ಸೃಷ್ಟಿಯಾಗಿರುವ ‘ಮ್ಯಾಂದೊಸ್‌’ ಚಂಡಮಾರುತದ ಪರಿಣಾಮ ಪುದುಚೆರಿ, ತಮಿಳುನಾಡು, ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಸಂಪ್ರದಾಯದಂತೆ ಚಂಡಮಾರುತಕ್ಕೆ ಈ ಬಾರಿ ಯುಎಇಯಿಂದ ಹೆಸರು ಸೂಚಿಸಿಲಾಗಿದೆ. ಅರೇಬಿಕ್‌ ಪದವಾಗಿರುವ ‘ಮ್ಯಾಂದೊಸ್‌’ ಎಂದರೆ ‘ಖಜಾನೆ’ ಎಂದರ್ಥ.