Published on: March 6, 2023

ಸೇಫ್ ಸಿಟಿ ಯೋಜನೆ

ಸೇಫ್ ಸಿಟಿ ಯೋಜನೆ


ಸುದ್ದಿಯಲ್ಲಿ ಏಕಿದೆ?  ಹೊಸದಿಲ್ಲಿಯಲ್ಲಿ 2012ರಲ್ಲಿ ನಡೆದಿದ್ದ ಭೀಕರ ಅತ್ಯಾಚಾರ ಘಟನೆಯ ನಂತರ ರಚಿಸಲಾದ ‘ನಿರ್ಭಯಾ ಯೋಜನೆ’ ಅಡಿಯಲ್ಲಿ ದೇಶದಾದ್ಯಂತ ಅನೇಕ ನಗರಗಳಲ್ಲಿ ಜಾರಿಗೊಳಿಸಲಾಗುತ್ತಿರುವ ಸೇಫ್ ಸಿಟಿ ಯೋಜನೆ ಇದೀಗ ಕರ್ನಾಟಕದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಾಲನೆ ದೊರಕಿದೆ. ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಈ ಯೋಜನೆಗೆ ಚಾಲನೆ ನೀಡಿದ್ದಾರೆ.


ಮುಖ್ಯಾಂಶಗಳು

 • 8 ನಗರಗಳಲ್ಲಿ ವೇಗವಾಗಿ ಕಾರ್ಯಗತ ಮಾಡಿರುವುದು ಬೆಂಗಳೂರು ಮಾತ್ರ. ಬೆಂಗಳೂರಿನಲ್ಲಿ ಚೈನ್ ಸ್ನಾಚಿಂಗ್ ಆಗುವುದನ್ನ ತಪ್ಪಿಸಬೇಕಿದೆ. ಇದಕ್ಕಾಗಿ 7,500 ಕ್ಯಾಮೆರಾ ಅಳವಡಿಸಲಾಗಿದೆ.
 • ಪೊಲೀಸ್ ವ್ಯವಸ್ಥೆಯನ್ನ ಕರ್ನಾಟಕದಲ್ಲಿ ಹೆಚ್ಚಿಸುವುದರ ಜೊತೆಗೆ ಪೊಲೀಸರಿಗೆ ವಸತಿ ಸೌಲಭ್ಯ ನೀಡಲಾಗುತ್ತಿದೆ. ಸೀನ್ ಆಫ್ ಕ್ರೈಮ್ ಆಫೀಸರ್ ನೇಮಕ ಮಾಡಿ ಅಪಾರಾಧ ನಡೆದ ಕೂಡಲೇ ತಡೆಯುವ ಉದ್ದೇಶ ಇದೆ.
 • ವಿಧಿ ವಿಜ್ಞಾನ ಪ್ರಯೋಗಾಲಯ (FSL) ಸಂಸ್ಥೆ ತಂದು ಅಪರಾಧ ತಡೆಯಲಾಗುತ್ತಿದೆ.
 • ಎಫ್​ಎಸ್​ಎಲ್ ವಿಶ್ವವಿದ್ಯಾಲಯ ಕೂಡ ಸ್ಥಾಪಿಸಲಾಗುವುದು.
 • ಇದರಲ್ಲಿ ಅತ್ಯಾಧುನಿಕ ಕ್ಯಾಮರಾ, ಎಫ್‌ಎಸ್‌ಎಲ್‌, ತಂತ್ರಜ್ಞಾನ ಸೇರಿದಂತೆ ಹಲವು ಅಂಶಗಳು ಒಳಗೊಂಡಿವೆ. ಸೇಫ್‌ ಸಿಟಿ ಯೋಜನೆ ಮುಂದಿನ 20 ವರ್ಷದ ನೀಲನಕ್ಷೆ ರೂಪಿಸಲಾಗಿದೆ.
 • ತಂತ್ರಜ್ಞಾನ ಬಳಸಿಕೊಂಡು ಸೈಬರ್‌ ಕ್ರೈಂ, ಮಾದಕವಸ್ತು ದಂಧೆ, ಅಪರಾಧ ನಿಯಂತ್ರಣಕ್ಕೆ ಒತ್ತು ನೀಡಬೇಕು ಕೋಮು ಸಂಘರ್ಷ ಮಟ್ಟಹಾಕಬೇಕಿದೆ

ಏನಿದು ಸೇಫ್‌ ಸಿಟಿ ಯೋಜನೆ?

 • ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಯೋಜನೆ ಇದಾಗಿದೆ.
 • 60:40 ಅನುಪಾತದಲ್ಲಿ ನಿರ್ಭಯ ನಿಧಿಯಿಂದ ಒಟ್ಟು .667 ಕೋಟಿಯನ್ನು ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ.
 • ಈ ಯೋಜನೆಯಡಿ ಬೆಂಗಳೂರು ನಗರದ ಸಾರ್ವಜನಿಕರ ಸುರಕ್ಷತೆಗೆ ಹಾಗೂ ದೌರ್ಜನ್ಯಕ್ಕೊಳಗಾದ ಮಹಿಳೆ ಮತ್ತು ಮಕ್ಕಳ ಸಂರಕ್ಷಣೆಗೆ ಬೇಕಾದ ಅಗತ್ಯ ಪೊಲೀಸ್‌, ವೈದ್ಯಕೀಯ ಹಾಗೂ ಕಾನೂನು ನೆರವುಗಳನ್ನು ಒದಗಿಸುವ ನಿಟ್ಟಿನಲ್ಲಿ ತಾಂತ್ರಿಕ ವಿಧಾನಗಳನ್ನು ಬಳಸಿಕೊಂಡು ಶೀಘ್ರ ಮತ್ತು ಸುಧಾರಿತ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಯೋಜನೆ ಒಳಗೊಂಡಿರುವ ಅಂಶಗಳು

 • ಸೇಫ್ ಸಿಟಿ ಬೆಂಗಳೂರು ಯೋಜನೆಯ ಮೊದಲ ಹಂತದಲ್ಲಿ ನಗರದಾದ್ಯಂತ 1,640 ಸ್ಥಳಗಳಲ್ಲಿ 4,100 ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು ಇವು ನಿರಂತರ 24 ಗಂಟೆಗಳು ಕಾರ್ಯನಿರ್ವಹಿಸಲಿವೆ. ಇದರ ಕಮಾಂಡ್ ಸೆಂಟರ್ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿದ್ದು ಪೊಲೀಸರು ವೀಕ್ಷಣೆ ಮಾಡುತ್ತಿರುತ್ತಾರೆ.
 • ನಗರದ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಗಳ ಕಚೇರಿ ಮತ್ತು 96 ಪೊಲೀಸ್‌ ಠಾಣೆಗಳಿಗೆ ಕ್ಯಾಮರಾ ದೃಶ್ಯಾವಳಿಗಳ ನೇರ ವೀಕ್ಷಣೆ
 • ನಗರದ ಆಯ್ದ 30 ಸ್ಥಳಗಳಲ್ಲಿ ಸೇಫ್ಟಿಐಲ್ಯಾಂಡ್‌ ಸ್ಥಾಪನೆ
 • ಎಲ್‌ ಆ್ಯಂಡ್‌ ಓ ಮೇಲೆ ನಿಗಾವಹಿಸಲು 8 ಡ್ರೋನ್‌
 • 400 ಬಾಡಿವೋರ್ನ್‌ ಕ್ಯಾಮರಾ ಅಳವಡಿಕೆ
 • ಶೋಷಿತ ಮಹಿಳೆ ಮತ್ತು ಮಕ್ಕಳಿಗೆ ಒಂದೇ ಸೂರಿನಡಿ ವೈದ್ಯಕೀಯ ಚಿಕಿತ್ಸೆ, ಆಪ್ತಸಮಾಲೋಚನೆ, ಕಾನೂನು ನೆರವು ನೀಡುವ ‘ನಿರ್ಭಯ ಕೇಂದ್ರ’
 • ನಗರದ 8 ಆಸ್ಪತ್ರೆಗಳಲ್ಲಿ ಕ್ರಿಟಿಕಲ್‌ ಕೇರ್‌ ರೆಸ್ಪಾನ್ಸ್‌ ಯೂನಿಟ್‌(ಸಿಸಿಆರ್‌ಯು) ಸ್ಥಾಪನೆ
 • ಫೋರಾನ್ಸಿಕ್‌ ವಾಹನಗಳ ಖರೀದಿ