Published on: October 17, 2023

ಹುಲಿ ಉಗುರಿನ ಆಯುಧ (ವಾಘ್ ನಖ್):

ಹುಲಿ ಉಗುರಿನ ಆಯುಧ (ವಾಘ್ ನಖ್):

ಸುದ್ದಿಯಲ್ಲಿ ಏಕಿದೆ? ಮಹಾರಾಷ್ಟ್ರದ ಸಾಂಸ್ಕೃತಿಕ ವ್ಯವಹಾರಗಳ ಸಚಿವಾಲಯವು ಲಂಡನ್ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನೊಂದಿಗೆ ಛತ್ರಪತಿ ಶಿವಾಜಿ ಮಹಾರಾಜ್ ಅವರದ್ದು ಎನ್ನಲಾದ 17ನೇ ಶತಮಾನದ ಪೌರಾಣಿಕ “ವಾಘ್ ನಖ್”  ಮಧ್ಯಕಾಲೀನ ಅಸ್ತ್ರವನ್ನು ರಾಜ್ಯಕ್ಕೆ ಮರಳಿ ತರಲು ತಿಳುವಳಿಕೆ ಪತ್ರ (MOU) ಕ್ಕೆ ಸಹಿ ಹಾಕಿದೆ.

ಮುಖ್ಯಾಂಶಗಳು

 • ಮೂರು ವರ್ಷಗಳ ಅವಧಿಗೆ ಪುರಾತನ ಆಯುಧವನ್ನು ಸಾಲದ ಆಧಾರದ ಮೇಲೆ ಮಹಾರಾಷ್ಟ್ರ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು, ಈ ಸಮಯದಲ್ಲಿ ಅದನ್ನು ರಾಜ್ಯದಾದ್ಯಂತದ ವಸ್ತು ಸಂಗ್ರಹಾಲಯಗಳಲ್ಲಿ ಪ್ರದರ್ಶಿಸಲಾಗುತ್ತದೆ.
 • ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ 350ನೇ ವಾರ್ಷಿಕೋತ್ಸವ ಅಂಗವಾಗಿ ‘ಹುಲಿ ಉಗುರಿನ’ ಆಯುಧವನ್ನು ಭಾರತಕ್ಕೆ ನೀಡಲಾಗುತ್ತಿದೆ.

ಹಿನ್ನೆಲೆ

 • 1659ರಲ್ಲಿ ಮರಾಠ ನಾಯಕ ಶಿವಾಜಿ ಮಹಾರಾಜ್ ಹುಲಿ ಉಗುರಿನ ರೀತಿಯ ಆಯುಧವನ್ನು (ವಾಘ್ ನಖ್) ಕೈಗೆ ಧರಿಸಿ ಬಿಜಾಪುರ ಸೇನೆಯ ಕಮಾಡರ್ ಅಫ್ಝಲ್ ಖಾನ್ನನ್ನು ಕೊಂದು ಹಾಕಿದ್ದರು. ಈ ಆಯುಧವು, ಸತಾರ ಜಿಲ್ಲೆಯಲ್ಲಿ ಅಧಿಕಾರಿಯಾಗಿದ್ದ ಈಸ್ಟ್ ಇಂಡಿಯಾ ಕಂಪನಿಯ ಜೇಮ್ಸ್ ಗ್ರಾಂಟ್ ಡಫ್ ವಶಕ್ಕೆ ಸೇರಿತ್ತು. ನಂತರ ಅವರ ವಂಶಸ್ಥರು ಅದನ್ನು ವಿಕ್ಟೋರಿಯಾ ಮತ್ತು ಆಲ್ಬರ್ಟ್ ವಸ್ತು ಸಂಗ್ರಹಾಲಯಕ್ಕೆ ಉಡುಗೊರೆಯಾಗಿ ನೀಡಿದ್ದರು ಎಂದು ನಂಬಲಾಗಿದೆ.

ಶಿವಾಜಿ ಮಹಾರಾಜ್

 • ಮಹಾರಾಷ್ಟ್ರದ ಪುಣೆ ಜಿಲ್ಲೆಯ ಶಿವನೇರಿ ಕೋಟೆಯಲ್ಲಿ ಫೆಬ್ರವರಿ 19, 1630 ರಂದು ಜನಿಸಿದರು
 • ಅವರು ಶಹಾಜಿ ಭೋಂಸ್ಲೆ ಮತ್ತು ಜಿಜಾಬಾಯಿ ಅವರ ಮಗ
 • ಗುರು: ರಾಮದಾಸ್‌
 • ಪಟ್ಟಾಭಿಷೇಕ: ಜೂನ್‌ 6, 1674 ರಂದು ನಡೆಯಿತು.
 • ಆಳ್ವಿಕೆ: ಜೂನ್‌ 6, 1674 ರಿಂದ ಎಪ್ರಿಲ್‌ 3, 1680 ರವರೆಗೆ ಆಳ್ವಿಕೆಯನ್ನು ಮಾಡಿದ್ದರು
 • ಇವರ ಸಮಯದಲ್ಲಿ ರಾಯಗಢ ಕೋಟೆಯನ್ನು ಇಡೀ ಮಹಾರಾಷ್ಟ್ರದ ರಾಜಧಾನಿಯನ್ನಾಗಿ ಮಾಡಲಾಯಿತು.
 • ಇವರು ಭಾರತದಲ್ಲಿ ಮೊದಲ ಬಾರಿಗೆ ಗೆರಿಲ್ಲಾ ಯುದ್ಧವನ್ನು ಪ್ರಾರಂಭಿಸಿದರು ಸಾಮಾನ್ಯವಾಗಿ ಗೆರಿಲ್ಲಾ ಯುದ್ಧವನ್ನು ಅರೆಸೈನಿಕ ಅಥವಾ ಅನಿಯಮಿತ ಪಡೆಗಳ ಘಟಕಗಳು ಶತ್ರು ಸೇನೆಯ ಹಿಂದಿನಿಂದ ದಾಳಿ ಮಾಡುತ್ತವೆ.
 • ಶಿವಾಜಿ ಮಹಾರಾಜರು ತಮ್ಮ ಆಡಳಿತಾವಧಿಯಲ್ಲಿ ಪಶ್ಚಿಮ ಮಹಾರಾಷ್ಟ್ರದ ಕೊಂಕಣ, ಸಹ್ಯಾದ್ರಿ ಬೆಟ್ಟಗಳಿಂದ ಪಶ್ಚಿಮ ಮಹಾರಾಷ್ಟ್ರದ ದಕ್ಷಿಣ ಭಾರತದ ತಂಜಾವರ್‌ವರೆಗೆ ತನ್ನ ಸಾಮ್ರಾಜ್ಯವನ್ನು ವಿಸ್ತಿರಿಸಿದ್ದರು.
 • ಶಿವಾಜಿ ಮಹಾರಾಜರು ಎಪ್ರಿಲ್‌3, 1680 ರಂದು ರಾಯಗಢ ಕೋಟೆಯಲ್ಲಿ ನಿಧನರಾದರು.