Published on: October 23, 2021

ಅಭ್ಯಾಸ್’ ಏರ್ಕ್ರಾಫ್ಟ್

ಅಭ್ಯಾಸ್’ ಏರ್ಕ್ರಾಫ್ಟ್

ಸುದ್ಧಿಯಲ್ಲಿ ಏಕಿದೆ? ದೇಶೀಯವಾಗಿ ಅಭಿವೃದ್ಧಿಪಡಿಸಿರುವ ವೇಗದ ವಾಯು ಗುರಿ ಭೇದಿಸುವ ‘ಅಭ್ಯಾಸ್’ಫ್ಲೈಟ್ ಪರೀಕ್ಷೆಯನ್ನು ಡಿಆರ್‌ಡಿಒ ಯಶಸ್ವಿಯಾಗಿ ಪೂರೈಸಿದೆ.

  • ವಿವಿಧ ಕ್ಷಿಪಣಿ ವ್ಯವಸ್ಥೆಗಳ ಮೌಲ್ಯಮಾಪನಕ್ಕಾಗಿ ಈ ವಾಹನವನ್ನು ವೈಮಾನಿಕ ಗುರಿಯಾಗಿ ಬಳಸಬಹುದು.
  • ಏರ್‌ಕ್ರಾಫ್ಟ್‌ನ ಕಾರ್ಯಕ್ಷಮತೆಯನ್ನು ಟೆಲಿಮೆಟ್ರಿ, ರಾಡಾರ್‌ಗಳು ಮತ್ತು ಎಲೆಕ್ಟ್ರೋ ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್ (ಇಒಟಿಎಸ್) ಸೇರಿದಂತೆ ವಿವಿಧ ಟ್ರ್ಯಾಕಿಂಗ್ ಸೆನ್ಸಾರ್‌ಗಳ ಮೂಲಕ ಮೇಲ್ವಿಚಾರಣೆ ಮಾಡಲಾಗಿದೆ.
  • ಪ್ರಸ್ತುತ ಪರೀಕ್ಷೆಯು ಯುದ್ಧ ವಿಮಾನಗಳ ಅಭಿವೃದ್ಧಿ ಪ್ರಯೋಗಗಳ ಭಾಗವಾಗಿ ನಡೆಸಲಾಯಿತು. ಈಗಾಗಲೇ ಭಾರತೀಯ ಕಂಪನಿಗಳಿಂದ ಈ ಏರ್‌ಕ್ರಾಫ್ಟ್ ತಯಾರಿಕೆಗೆ ಬಿಡ್ಡಿಂಗ್‌ ಕರೆಯಲಾಗಿದೆ. ಈ ದೇಶೀಯ ತಂತ್ರಜ್ಞಾನದ ವಿಮಾನ ಉತ್ಪಾದನೆ ಆರಂಭವಾದ ಬಳಿಕ ಭಾರತೀಯ ಸಶಸ್ತ್ರ ಪಡೆಗಳಿಗೆ ಹೈ-ಸ್ಪೀಡ್ ಎಕ್ಸ್‌ಪೆಂಡಬಲ್ ಏರಿಯಲ್ ಟಾರ್ಗೆಟ್‌ಗಳ (ಎಚ್‌ಇಎಟಿ) ಅವಶ್ಯಕತೆಗಳನ್ನು ಪೂರೈಸುತ್ತದೆ.

ಅಭ್ಯಾಸ್ ನ ವೈಶಿಷ್ಟ್ಯಗಳು

  • ಅಭ್ಯಾಸ್ ಗ್ಯಾಸ್ ಟರ್ಬೈನ್ ಎಂಜಿನ್‌ನಿಂದ ಚಾಲಿತವಾಗಿದೆ, ಇದರಿಂದಾಗಿ ವಿಮಾನವು ಶಬ್ದದ ವೇಗಕ್ಕಿಂತ ಕಡಿಮೆ ವೇಗದಲ್ಲಿ ದೀರ್ಘ ಸಹಿಷ್ಣುತೆಯ ಹಾರಾಟವನ್ನು ನಿರ್ವಹಿಸುತ್ತದೆ. ಮಾರ್ಗದರ್ಶನ ಮತ್ತು ನಿಯಂತ್ರಣಕ್ಕಾಗಿ ಫ್ಲೈಟ್ ಕಂಟ್ರೋಲ್ ಕಂಪ್ಯೂಟರ್ (ಎಫ್‌ಸಿಸಿ) ಜೊತೆಗೆ ಸಂಚರಣೆ ಮಾಡಲು ಈ ಉದ್ದೇಶಿತ ವಿಮಾನವನ್ನು ಎಂಇಎಂಎಸ್ ಆಧಾರಿತ ಜಡತ್ವ ಸಂಚರಣೆ ವ್ಯವಸ್ಥೆ (ಐಎನ್ಎಸ್) ಅಳವಡಿಸಲಾಗಿದೆ. ಸಂಪೂರ್ಣ ಸ್ವಾಯತ್ತ ಹಾರಾಟಕ್ಕಾಗಿ ಇದನ್ನು ಪ್ರೋಗ್ರಾಮ್ ಮಾಡಲಾಗಿದೆ. ಲ್ಯಾಪ್ಟಾಪ್ ಆಧಾರಿತ ಗ್ರೌಂಡ್ ಕಂಟ್ರೋಲ್ ಸ್ಟೇಷನ್ (ಜಿಸಿಎಸ್) ಮೂಲಕ ವಾಯು ವಾಹನದ ಪರಿಶೀಲನೆಯನ್ನು  ಪೂರ್ಣಗೊಳಿಸಲಾಗಿದೆ.

ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ADA)

  • ರಕ್ಷಣಾ ಸಚಿವಾಲಯದ ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ (ಡಿಆರ್ & ಡಿ) ಅಡಿಯಲ್ಲಿ 1984 ರಲ್ಲಿ ಎಡಿಎ ಸ್ಥಾಪಿಸಲಾಯಿತು. ಇದು ಭಾರತದ ಲಘು ಯುದ್ಧ ವಿಮಾನ (LCA) ಕಾರ್ಯಕ್ರಮದ ಅಭಿವೃದ್ಧಿಯನ್ನು ನೋಡಿಕೊಳ್ಳುತ್ತದೆ. ಇದು ಈಗಾಗಲೇ HAL ತೇಜಸ್ ಅನ್ನು ಅಭಿವೃದ್ಧಿಪಡಿಸಿದೆ ಮತ್ತು ಪ್ರಸ್ತುತ HAL AMCA, DRDO ಘಟಕ್ ಮತ್ತು HAL TEDBF ಅನ್ನು ಅಭಿವೃದ್ಧಿಪಡಿಸುತ್ತಿದೆ.