Published on: January 2, 2024

ಅಮೃತ್‌ ಭಾರತ್‌ ರೈಲು

ಅಮೃತ್‌ ಭಾರತ್‌ ರೈಲು

ಸುದ್ದಿಯಲ್ಲಿ ಏಕಿದೆ? ಪುನರಾಭಿವೃದ್ಧಿಗೊಳಿಸಿದ ಅಯೋಧ್ಯೆ ಧಾಮ ಜಂಕ್ಷನ್ ರೈಲು ನಿಲ್ದಾಣದಿಂದ   ಅಮೃತ್ ಭಾರತ್ ಎಕ್ಸ್‌ಪ್ರೆಸ್‌ ನ ಎರಡು ರೈಲುಗಳಿಗೆ ಭಾರತದ ಪ್ರಧಾನಮಂತ್ರಿ ಅವರು ಚಾಲನೆ ನೀಡಿದರು. ಎರಡು ಅಮೃತ್ ಭಾರತ್ ರೈಲುಗಳು ದರ್ಭಾಂಗ-ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ ಮತ್ತು ಪಶ್ಚಿಮ ಬಂಗಾಳದ ಮಾಲ್ಡಾ ಟೌನ್- ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ಗೆ ಇವು ಸಂಪರ್ಕ ಕಲ್ಪಿಸುತ್ತವೆ.

ಮುಖ್ಯಾಂಶಗಳು

  • ಇದನ್ನು ಹಿಂದೆ ವಂದೇ ಸಾಧಾರಣ ಎಂದು ಕರೆಯಲಾಗುತ್ತಿತ್ತು.
  • ಇದನ್ನು ಹೈ-ಸ್ಪೀಡ್ ವಂದೇ ಭಾರತ್ ರೈಲುಗಳ ಸ್ಲೀಪರ್ ಆವೃತ್ತಿ ಎಂದು ವಿವರಿಸಲಾಗಿದೆ.
  • ಇದು ಕೇಸರಿ-ಬೂದು ಬಣ್ಣವನ್ನು ಹೊಂದಿದೆ.
  • ರೈಲು ಕೋಚ್ ಗಳನ್ನು ಚೆನ್ನೈನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ನಲ್ಲಿ ತಯಾರಿಸಲಾಗುತ್ತದೆ.
  • ಈ ರೈಲು ಗಂಟೆಗೆ 130 ಕಿಲೋಮೀಟರ್ ವೇಗದಲ್ಲಿ ಚಲಿಸಲಿದೆ.
  • ವಂದೇ ಭಾರತ್ ರೈಲಿನ ಮಾದರಿಯಲ್ಲಿ ವಿನ್ಯಾಸಗೊಳಿಸಲಾದ ಇದು ದೇಶದ ಮೊದಲ ಪುಲ್-ಪುಶ್ ರೈಲು ಆಗಿದ್ದು, ಇದು ಎರಡು ಎಂಜಿನ್‌ಗಳನ್ನು ಹೊಂದಿರುತ್ತದೆ. ಇದರಲ್ಲಿ, ಎರಡನೇ ಎಂಜಿನ್ ರೈಲಿನ ಕೊನೆಯ ಕೋಚ್ ನಂತರ ಇರುತ್ತದೆ.

ಸೌಲಭ್ಯಗಳು

  • ಆಕರ್ಷಕ ಒಳ ವಿನ್ಯಾಸ, ಉತ್ತಮ ಎಲ್ ಇ ಡಿ ಬೆಳಕು, ಸಿಸಿಟಿವಿ, ವಿವಿಧ ಬಗೆಯ ಮೊಬೈಲ್ ಫೋನ್ ಚಾರ್ಜಿಂಗ್ ಪಾಯಿಂಟ್‌, ಉನ್ನತೀಕರಿಸಿದ ಶೌಚಾಲಯ ಇದೆ. ದೇಶದ ಸೂಪರ್‌ಫಾಸ್ಟ್ ಪ್ಯಾಸೆಂಜರ್ ರೈಲುಗಳ ಹೊಸ ಮಾದರಿಯ ರೈಲು ಈ ಅಮೃತ್ ಭಾರತ್ ಎಕ್ಸ್‌ಪ್ರೆಸ್‌. ಇದು ಹವಾನಿಯಂತ್ರಿತವಲ್ಲದ (AC) ಕೋಚ್‌ಗಳನ್ನು ಹೊಂದಿರುವ ಎಲ್‌ಎಚ್‌ಬಿ ಪುಶ್ ಪುಲ್ ಆಗಿದೆ. ಜೀರೋ ಡಿಸ್ಚಾರ್ಜ್ FRP ಮಾಡ್ಯುಲರ್ ಶೌಚಾಲಯಗಳನ್ನು ಹೊಂದಿವೆ.

ಉದ್ದೇಶ

ಸಾಮಾನ್ಯ ವರ್ಗದ ಆರಾಮದಾಯಕ ಪ್ರಯಾಣವನ್ನು ಗಮನದಲ್ಲಿ ಇರಿಸಿಕೊಂಡು ಈ ರೈಲುಗಳನ್ನು ನಿರ್ಮಿಸಲಾಗಿದೆ. ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದು, ಬಿಹಾರ, ಉತ್ತರ ಪ್ರದೇಶ ಮತ್ತು ದೆಹಲಿಯನ್ನು ಸಂಪರ್ಕಿಸುವುದು ಮತ್ತು ಪವಿತ್ರವಾದ ಶ್ರೀ ರಾಮಜನ್ಮ ಭೂಮಿ ತೀರ್ಥ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಪ್ರವೇಶವನ್ನು ಸುಧಾರಿಸುವುದು ಈ ರೈಲು ಸೇವೆಗಳ ಉದ್ದೇಶವಾಗಿದೆ. ಈ ರೈಲುಗಳ ಮೂಲಕ ಈಗ ಸಾಮಾನ್ಯ ವರ್ಗದವರೂ ಕಡಿಮೆ ವೆಚ್ಚದಲ್ಲಿ ಸೂಪರ್ ಸೀಟುಗಳನ್ನು ಪಡೆದು ಆರಾಮವಾಗಿ ಪ್ರಯಾಣಿಸುವಂತಾಗಿದೆ.