Published on: January 1, 2024

ಚುಟುಕು ಸಮಾಚಾರ : 1 ಜನವರಿ 2024

ಚುಟುಕು ಸಮಾಚಾರ : 1 ಜನವರಿ 2024

  • ಮೈಸೂರು ತಾಲೂಕಿನ ವರುಣಾ ಗ್ರಾಮದಲ್ಲಿ ಒಳಚರಂಡಿ ಕಾಮಗಾರಿ ವೇಳೆ 11ನೇ ಶತಮಾನಕ್ಕೆ ಸೇರಿದ ಎರಡು ಜೈನ ಶಿಲ್ಪಗಳು ಪತ್ತೆಯಾಗಿವೆ. ಈ ಶಿಲ್ಪಗಳು ಮುರಿದ ಸ್ಥಿತಿಯಲ್ಲಿ ಲಭ್ಯವಾಗಿದ್ದು,ಕೈ ಹಾಗೂ ಕಾಲುಗಳಲ್ಲಿ ಗೊಮ್ಮಟ್ಟನ ಶಿಲ್ಪ, ಕೇವಲ ತಲೆ ಮಾತ್ರ ಇರುವ ಒಂದು ಶಿಲ್ಪ ಹಾಗೂ ಹೆಣ್ಣು ದೇವರ ಒಂದು ಶಿಲ್ಪ ಪತ್ತೆಯಾಗಿವೆ. ಇವುಗಳನ್ನು ಇಂದಿರಾ ಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯದಲ್ಲಿರುವ ASI ವಸ್ತುಸಂಗ್ರಹಾಲಯಕ್ಕೆ ಸ್ಥಳಾಂತರಿಸಲಾಯಿತು. ಇನ್ನು ಈ ಶಿಲ್ಪಗಳು 11ನೇ ಶತಮಾನದ್ದು ಎನ್ನಲಾಗುತ್ತಿದ್ದು, ಗಂಗರು ಹಾಗೂ ಹೊಯ್ಸಳರ ಆಳ್ವಿಕೆಯಲ್ಲಿ ವರುಣ, ವಾಜಮಂಗಲ ಹಾಗೂ ವರಕೋಡು ದೊಡ್ಡ ಜೈನ ಕೇಂದ್ರಗಳಾಗಿದ್ದವು.
  • 2023ನೇ ಸಾಲಿನ ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಬಂಗಾಳಿ ಭಾಷೆಯ ಖ್ಯಾತ ಸಾಹಿತಿ ಶೀರ್ಷೆಂಧು ಮುಖ್ಯೋಪಾಧ್ಯಾಯ ಅವರನ್ನು ಆಯ್ಕೆ ಮಾಡಲಾಗಿದೆ. ಮುಖ್ಯೋಪಾಧ್ಯಾಯ ಅವರು ಈ ಪ್ರಶಸ್ತಿಯನ್ನು ಪಡೆದ 11 ನೇ ಪುರಸ್ಕೃತರು ಮತ್ತು ಮೊದಲ ಬಂಗಾಳಿ ಬರಹಗಾರರಾದರು.
  • ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವರು ಭಾರತದ ಮೊದಲ ‘ಶೂನ್ಯ ತ್ಯಾಜ್ಯ ಬೀದಿ ಆಹಾರ ಉತ್ಸವ ಅನ್ನು ಉದ್ಘಾಟಿಸಿದರು, ಇದು ಬೀದಿ ವ್ಯಾಪಾರಿಗಳ ಸಬಲೀಕರಣದಲ್ಲಿ ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ (ಪಿಎಂ ಸ್ವನಿಧಿ) ಯೋಜನೆಯ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುತ್ತದೆ.
  • ಕಪ್ಪು ಕುಳಿಗಳ ಅಧ್ಯಯನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾಯ ಸಂಸ್ಥೆ ಹೊಸ ವರ್ಷದ ಮೊದಲ ದಿನವೇ ಎಕ್ಸ್ಪೋಸ್ಯಾಟ್ (XPoSat) ಉಪಗ್ರಹ ಉಡಾವಣೆ ಯಶಸ್ವಿಯಾಗಿದೆ. XPoSAT ನ ಯಶಸ್ವಿ ಉಡಾವಣೆಯು ಭಾರತವನ್ನು ಗಣ್ಯ ವರ್ಗಕ್ಕೆ ಸೇರಿಸಿದೆ, ಏಕೆಂದರೆ ಕಪ್ಪು ಕುಳಿಗಳು, ನ್ಯೂಟ್ರಾನ್ ನಕ್ಷತ್ರಗಳು ಮುಂತಾದ ಖಗೋಳ ಮೂಲಗಳನ್ನು ಅಧ್ಯಯನ ಮಾಡಲು ವೀಕ್ಷಣಾಲಯವನ್ನು ಕಳುಹಿಸುವ ಎರಡನೇ ರಾಷ್ಟ್ರವಾಗಿದೆ. ಉಡಾವಣಾ ವಾಹಕ: PSLV ಸಿ58, ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ. ದೇಶದ ಮೊದಲ ಎಕ್ಸ್-ರೇ ಪೋಲರಿಮೀಟರ್ (X-Ray Polarimeter Satellite) ಉಪಗ್ರಹ ಎಕ್ಸ್ಪೋಸ್ಯಾಟ್ (XPoSat) ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು, ಇದರ ಜೊತೆಗೆ ಪಿಎಸ್ಎಲ್ವಿ ಇತರ ಹತ್ತು ಉಪಗ್ರಹಗಳನ್ನು ಹೊತ್ತೊಯ್ದಿದೆ.
  • ಅಯೋಧ್ಯೆಯಲ್ಲಿ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ನವೀಕೃತ ರೈಲು ನಿಲ್ದಾಣಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಅಯೋಧ್ಯೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಹೆಸರು ನಾಮಕರಣ ಮಾಡಲಾಗಿದೆ. ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು 1450 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. GRIHA 4-Star ಪ್ರಮಾಣಿತ ವಿಮಾನ ನಿಲ್ದಾಣ ಇದಾಗಿದ್ದು, ವಾರ್ಷಿಕ 10 ಲಕ್ಷ ಮಂದಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ.