Published on: July 28, 2023

ಅವಿಶ್ವಾಸ ನಿರ್ಣಯ

ಅವಿಶ್ವಾಸ ನಿರ್ಣಯ

ಸುದ್ದಿಯಲ್ಲಿ ಏಕಿದೆ? ಭಾರತ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿಕೂಟಕ್ಕೆ (I.N.D.I.A) ಸೇರಿದ ವಿಪಕ್ಷಗಳು ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಪ್ರಸ್ತಾಪವನ್ನು ಸಭಾಧ್ಯಕ್ಷರಿಗೆ ಒಪ್ಪಿಸಿವೆ.

ಮುಖ್ಯಾಂಶಗಳು

  • ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದ ಕುರಿತು ತುರ್ತು ಚರ್ಚೆಗಳ ಅಗತ್ಯವನ್ನು ಉಲ್ಲೇಖಿಸಿ ವಿಪಕ್ಷಗಳು ಈ ನಿರ್ಧಾರ ಕೈಗೊಂಡಿವೆ
  • ಲೋಕಸಭಾಧ್ಯಕ್ಷರು ಅದನ್ನು ಸ್ವೀಕರಿಸಿ, ಚರ್ಚೆಗೆ ದಿನಾಂಕ ನಿಗದಿಪಡಿಸುವುದಾಗಿಯೂ ಹೇಳಿದ್ದಾರೆ.
  • ಲೋಕಸಭಾ ಸದಸ್ಯ ಇದನ್ನು ಮಂಡಿಸುತ್ತಾರೆ ಮತ್ತು ಸರ್ಕಾರವು ಇದಕ್ಕೆ ಪ್ರತಿಕ್ರಿಯೆ ನೀಡುತ್ತದೆ.

ಅವಿಶ್ವಾಸ ನಿರ್ಣಯ ಅಥವಾ ಅವಿಶ್ವಾಸ ಗೊತ್ತುವಳಿ ಎಂದರೇನು?

  • ಸರ್ಕಾರಕ್ಕೆ ಬಹುಮತವನ್ನು ಹಾಗೂ ಆಡಳಿತ ನಡೆಸುವ ಸಾಮರ್ಥ್ಯವನ್ನು ಪ್ರಶ್ನಿಸಲು ವಿಪಕ್ಷಕ್ಕೆ ಅವಕಾಶವಿರುವ ಸಂಸದೀಯ ಪ್ರಕ್ರಿಯೆಯೇ ಅವಿಶ್ವಾಸ ಗೊತ್ತುವಳಿ. ಈ ಗೊತ್ತುವಳಿಯನ್ನು ಸದನಗಳು ಬಹುಮತದಿಂದ ಅಂಗೀಕರಿಸಿದರೆ, ಸರ್ಕಾರವು ರಾಜೀನಾಮೆ ನೀಡಬೇಕಾಗುತ್ತದೆ.

ಅವಿಶ್ವಾಸ ಗೊತ್ತುವಳಿಯನ್ನು ಯಾರು ಸಲ್ಲಿಸಬಹುದು?

  • ಲೋಕಸಭೆಯ ಯಾವುದೇ ಸದಸ್ಯ ಕೂಡ ಅವಿಶ್ವಾಸ ಗೊತ್ತುವಳಿ ಮಂಡಿಸಬಹುದು.
  • ಈ ಗೊತ್ತುವಳಿಗೆ ಸದನದಲ್ಲಿರುವ ಕನಿಷ್ಠ 50 ಮಂದಿ ಬೆಂಬಲಿಸಬೇಕಾಗುತ್ತದೆ.
  • ಇದನ್ನು ಲೋಕಸಭೆಯಲ್ಲಿ ಮಾತ್ರ ಮಂಡಿಸಬಹುದು ರಾಜ್ಯಸಭೆಗೆಯಲ್ಲಿ ಮಂಡಿಸಲಾಗುವುದಿಲ್ಲ

ಅವಿಶ್ವಾಸ ಗೊತ್ತುವಳಿಯ ಮಂಡನೆ, ಚರ್ಚೆ,  ನಿರ್ಣಯ ಮತ್ತು ಮತದಾನ

  • ಅವಿಶ್ವಾಸ ಗೊತ್ತುವಳಿಯು ಲಿಖಿತ ರೂಪದಲ್ಲಿರಬೇಕು ಮತ್ತು ಅದನ್ನು ಮಂಡಿಸುವವರು ಸಹಿ ಹಾಕಿರಬೇಕು. ಸದನದ ಕಲಾಪವಿರುವ ಯಾವುದೇ ದಿನ, ಈ ಗೊತ್ತುವಳಿಯನ್ನು ಸ್ಪೀಕರ್ ಅಥವಾ ಸಭಾಧ್ಯಕ್ಷರಿಗೆ ಸಲ್ಲಿಸಬೇಕಾಗುತ್ತದೆ.
  • ಈ ಅವಿಶ್ವಾಸ ಗೊತ್ತುವಳಿಯನ್ನು ಚರ್ಚೆಗೆ ಸದನದ ಮುಂದಿಡಬೇಕೇ ಅಥವಾ ಬೇಡವೇ ಎಂಬುದನ್ನು ಸ್ಪೀಕರ್ ನಿರ್ಣಯಿಸುತ್ತಾರೆ. ಗೊತ್ತುವಳಿಯನ್ನು ಸ್ವೀಕರಿಸಿದರೆ, ಇದರ ಕುರಿತ ಚರ್ಚೆಗಾಗಿ ದಿನಾಂಕ ಮತ್ತು ಸಮಯವನ್ನು ಸ್ಪೀಕರ್ ನಿರ್ಧರಿಸುತ್ತಾರೆ. ಸಂಸದೀಯ ನಿಯಮಾವಳಿಯ ಅನುಸಾರ ಸ್ಪೀಕರ್ ಅವರು ಸಮಯಾವಕಾಶವನ್ನು ನೀಡಬಹುದಾಗಿದೆ.
  • ಅವಿಶ್ವಾಸ ನಿರ್ಣಯದ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಈ ಗೊತ್ತುವಳಿ ಕುರಿತು ವಿಪಕ್ಷ ಸದಸ್ಯರಿಗೆ ಮಾತನಾಡುವುದಕ್ಕೆ ಅವಕಾಶ ನೀಡಲಾಗುತ್ತದೆ.
  • ಸಮಗ್ರವಾಗಿ ಚರ್ಚೆ ನಡೆದ ಬಳಿಕ, ಅವಿಶ್ವಾಸ ಗೊತ್ತುವಳಿಯನ್ನು ಲೋಕಸಭೆಯಲ್ಲಿ ಮತಕ್ಕೆ ಹಾಕಲಾಗುತ್ತದೆ. ಸದನದಲ್ಲಿರುವವರಲ್ಲಿ ಬಹುಮತದ ಬೆಂಬಲ ದೊರೆತರೆ ಅವಿಶ್ವಾಸ ನಿರ್ಣಯಕ್ಕೆ ಜಯವಾಗುತ್ತದೆ.
  • ಅವಿಶ್ವಾಸ ನಿರ್ಣಯಕ್ಕೆ ಜಯ ದೊರೆತರೆ ಅಧಿಕಾರದಲ್ಲಿರುವ ಸರ್ಕಾರವು ತಕ್ಷಣ ರಾಜೀನಾಮೆ ನೀಡಬೇಕಾಗುತ್ತದೆ.

ಹಿಂದಿನ ಅವಿಶ್ವಾಸ ನಿರ್ಣಯಗಳ ಬಗ್ಗೆ ಒಂದು ಹಿನ್ನೋಟ

  • ಸ್ವಾತಂತ್ರ್ಯ ಬಂದಂದಿನಿಂದ ಇದುವರೆಗೆ 27 ಬಾರಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗಿತ್ತು.
  • 1999ರ ಏಪ್ರಿಲ್ ತಿಂಗಳಲ್ಲಿ ಎನ್ಡಿಎ ಸರ್ಕಾರದ ನೇತೃತ್ವ ವಹಿಸಿದ್ದಅಟಲ್ ಬಿಹಾರಿ ವಾಜಪೇಯಿ ಅವರು ಒಂದು ಮತದ ಅಂತರದಿಂದ (269- 270) ಸೋತು, ಅವರ ಸರ್ಕಾರ ರಾಜೀನಾಮೆ ನೀಡಬೇಕಾಯಿತು.
  • 2018ರಲ್ಲಿಯೂ ವಿಪಕ್ಷಗಳು ನರೇಂದ್ರ ಮೋದಿ ಸರ್ಕಾರದ ವಿರುದ್ಧಅವಿಶ್ವಾಸ ನಿರ್ಣಯ ಮಂಡಿಸಿದ್ದವು ಮತ್ತುಅದಕ್ಕೆ ಸೋಲಾಗಿತ್ತು.
  • 1963ರಲ್ಲಿಅಂದಿನ ಪ್ರಧಾನಿ ಜವಾಹರಲಾಲ್ ನೆಹರು ವಿರುದ್ಧ ಮೊದಲ ಬಾರಿ ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅತ್ಯಧಿಕ ಅವಿಶ್ವಾಸ ಗೊತ್ತುವಳಿ ಎದುರಿಸಿದವರು. ಅವರು 15 ಬಾರಿ ಎದುರಿಸಿದ್ದರೆ, ಲಾಲ್ ಬಹಾದುರ್ ಶಾಸ್ತ್ರಿ ಮತ್ತು ಪಿ.ವಿ.ನರಸಿಂಹ ರಾವ್ ತಲಾ ಮೂರು ಬಾರಿ ಅವಿಶ್ವಾಸ ಗೊತ್ತುವಳಿ ಎದುರಿಸಿದ್ದರು