Published on: September 15, 2023

ಆರೋಗ್ಯ ಮೈತ್ರಿ ಕ್ಯೂಬ್

ಆರೋಗ್ಯ ಮೈತ್ರಿ ಕ್ಯೂಬ್

ಸುದ್ದಿಯಲ್ಲಿ   ಏಕಿದೆ? ಒಂದು ಸ್ಥಳದಿಂದ ಮತ್ತೊಂದು  ಸ್ಥಳಕ್ಕೆ ಏರ್ಲಿಫ್ಟ್ ಮಾಡಬಹುದಾದ ಜಗತ್ತಿನ ಮೊದಲ ವಿಪತ್ತು ನಿರ್ವಹಣೆ ಆಸ್ಪತ್ರೆಯನ್ನು ಭಾರತ ಸಿದ್ಧಪಡಿಸಿದೆ.

ಮುಖ್ಯಾಂಶಗಳು

  • ಭೀಷ್ಮ್ (ಭಾರತ್ ಹೆಲ್ತ್ ಇನಿಶಿಯೇಟಿವ್ ಫಾರ್ ಸಹಯೋಗ್ ಹಿತ ಆ್ಯಂಡ್ ಮೈತ್ರಿ) ಯೋಜನೆಯಡಿ “ಆರೋಗ್ಯ ಮೈತ್ರಿ ಕ್ಯೂಬ್’ ಅನ್ನು ಭಾರತ ಸಿದ್ಧಪಡಿಸಿದೆ.
  • 2022ರ ಫೆಬ್ರವರಿಯಲ್ಲಿ “ಭೀಷ್ಮ್ ‘ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದರು. ಅನಂತರ ಇದಕ್ಕೆ ಸಂಬಂಧಿಸಿದಂತೆ ರಕ್ಷಣ ಸಚಿವಾಲಯವು ಕಾರ್ಯಪಡೆಯನ್ನು ರಚಿಸಿತು.
  • ಜಿ20 ಆರೋಗ್ಯ ಸಚಿವರ ಸಮಾವೇಶದ ನೇಪಥ್ಯದಲ್ಲಿ ಗುಜರಾತ್ನ ಗಾಂಧಿನಗರದಲ್ಲಿ ಆಗಸ್ಟ್ನಲ್ಲಿ ನಡೆದ ಮೆಡ್ಟೆಕ್ ಎಕ್ಸ್ಪೋದಲ್ಲಿ ಪ್ರಧಾನಿ ಮೋದಿ ಈ ಯೋಜನೆಗೆ ಚಾಲನೆ ನೀಡಿದ್ದರು.

ಏನೇನು ಸೌಲಭ್ಯ?

  • ಇದರಲ್ಲಿ ಶಸ್ತ್ರಚಿಕಿತ್ಸಾ ಕೊಠಡಿ, ಸಣ್ಣ ಐಸಿಯು, ವೆಂಟಿಲೇಟರ್, ರಕ್ತ ಪರೀಕ್ಷಾ ಸಾಧನ, ಎಕ್ಸ್ ರೇ ಮೆಷಿನ್, ಅಡುಗೆ ಮನೆ ಸೌಲಭ್ಯ, ಆಹಾರ, ನೀರು, ವಸತಿ, ಪವರ್ ಜನರೇಟರ್ ಮತ್ತು ಇತರ ಸೌಲಭ್ಯಗಳು “ಆರೋಗ್ಯ ಮೈತ್ರಿ ಕ್ಯೂಬ್’ನಲ್ಲಿ ಇರಲಿವೆ. ಇವುಗಳನ್ನು ಒಟ್ಟು 72 ಕ್ಯೂಬ್ಗಳಲ್ಲಿ ಪ್ಯಾಕ್ ಮಾಡಿ, ತಲಾ 12 ಕ್ಯೂಬ್ಗಳಂತೆ ಅವುಗಳನ್ನು ಮೂರು ಫ್ರೇಮಗಳಲ್ಲಿ ಇಟ್ಟು, ಬೇರೆಡೆ ಸಾಗಿಸಬಹುದಾಗಿದೆ.
  • ಚಿಕಿತ್ಸೆ: “ಆರೋಗ್ಯ ಮೈತ್ರಿ ಕ್ಯೂಬ್’ನಲ್ಲಿ ಒಟ್ಟು 200 ಮಂದಿ ಗಾಯಾಳುಗಳಿಗೆ ನಿರಂತರ 48 ಗಂಟೆಗಳವರೆಗೆ ಚಿಕಿತ್ಸೆ ನೀಡಬಹುದಾಗಿದೆ.

 “ಆರೋಗ್ಯ ಮೈತ್ರಿ’ ಯೋಜನೆ

  • ನೈಸರ್ಗಿಕ ವಿಕೋಪಗಳು ಅಥವಾ ಮಾನವೀಯ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಭಾರತವು ಅಗತ್ಯ ವೈದ್ಯಕೀಯ ನೆರವು ಒದಗಿಸುವ ‘ಆರೋಗ್ಯ ಮೈತ್ರಿ’ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇದೇ ವರ್ಷದ ಜನವರಿಯಲ್ಲಿ ನಡೆದ ಜಾಗತಿಕ ದಕ್ಷಿಣ ಶೃಂಗಸಭೆಯಲ್ಲಿ ಘೋಷಿಸಿದರು.
  • ಜುಲೈಯಲ್ಲಿ ಮೊದಲ ಬಾರಿಗೆ “ಆರೋಗ್ಯ ಮೈತ್ರಿ ಕ್ಯೂಬ್’ ಅನ್ನು ಮ್ಯಾನ್ಮಾರ್ ಅಧಿಕಾರಿಗಳಿಗೆ ಪ್ರದರ್ಶಿಸ ಲಾಯಿತು. ಈ ಕ್ಯೂಬ್ಗಳನ್ನು ಮ್ಯಾನ್ಮಾರ್ಗೆ ಭಾರತ ದೇಣಿಗೆ ನೀಡಿದೆ. ಇದೇ ವೇಳೆ ಶ್ರೀಲಂಕಾಕ್ಕೆ ಒಂದು ಕ್ಯೂಬ್ ನೀಡಲು ಸಿದ್ಧತೆ ನಡೆದಿದೆ