Published on: September 15, 2023

ಜಾಗತಿಕ ಜೈವಿಕ ಇಂಧನ ಮೈತ್ರಿ(ಜಿಬಿಎ)

ಜಾಗತಿಕ ಜೈವಿಕ ಇಂಧನ ಮೈತ್ರಿ(ಜಿಬಿಎ)

ಸುದ್ದಿಯಲ್ಲಿ   ಏಕಿದೆ? ನವ ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಪರಿಸರ ಸಂರಕ್ಷಣೆಯ ಆಶಯದ ‘ಅಂತರರಾಷ್ಟ್ರೀಯ ಜೈವಿಕ ಇಂಧನ ಮೈತ್ರಿಗೆ ನರೇಂದ್ರ ಮೋದಿಯವರು ಚಾಲನೆ ನೀಡಿದರು.

ಮುಖ್ಯಾಂಶಗಳು

  • ‘ಅಂತರರಾಷ್ಟ್ರೀಯ ಜೈವಿಕ ಇಂಧನ ಮೈತ್ರಿ’ ರಚನೆಯು ಭಾರತ, ಅಮೆರಿಕ ಹಾಗೂ ಬ್ರೆಜಿಲ್ನ ಆಲೋಚನೆಯಾಗಿದ್ದು, ಅಧಿಕ ಪ್ರಮಾಣದ ಜೈವಿಕ ಇಂಧನ ಉತ್ಪಾದನೆ ಹಾಗೂ ಬಳಕೆಯಲ್ಲಿ ಈ ಮೂರು ದೇಶಗಳು ಮುಂಚೂಣಿಯಲ್ಲಿವೆ. ಇತರೆ 19 ದೇಶಗಳು ಕೂಡ ಈ ಮೈತ್ರಿ ಬಗ್ಗೆ ಆಸಕ್ತಿ ವಹಿಸಿದ್ದು, ಜಿ20 ವ್ಯಾಪ್ತಿಗೆ ಬರದ ಕೆಲವು ದೇಶಗಳು ಕೂಡ ಬೆಂಬಲ ಸೂಚಿಸಿವೆ.
  • ಚೀನಾ ಹಾಗೂ ತೈಲ ಸಮೃದ್ಧ ರಾಷ್ಟ್ರಗಳಾದ ಸೌದಿ ಅರೇಬಿಯಾ ಮತ್ತು ರಷ್ಯಾ ಈ ಮೈತ್ರಿಯಿಂದ ದೂರವುಳಿಯಲು ನಿರ್ಧರಿಸಿವೆ.
  • ತೈಲಕ್ಕಾಗಿ ಇತರೆ ದೇಶಗಳನ್ನು ಅವಲಂಬಿಸಿರುವ ಭಾರತದಂಥ ದೇಶಗಳ ಆಮದು ಅವಲಂಬನೆಯನ್ನು ಮತ್ತು ಇಂಗಾಲ ಹೊರಸೂಸುವಿಕೆಯನ್ನು ತಗ್ಗಿಸುವ ನಿಟ್ಟಿನಲ್ಲೂ ಇದು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.

ಉದ್ದೇಶಗಳು

  • ಸುಸ್ಥಿರ ಜೈ ವಿಕ ಇಂಧನಗಳ ಬಳಕೆ ಹೆಚ್ಚಳ ಹಾಗೂ ಸಹಕಾರ ವೃದ್ಧಿಗೆ ನೆರವು ಒದಗಿಸುವುದು
  • ಜೈವಿಕ ಇಂಧನಗಳ ಜಾಗತಿಕ ಮಾರಾಟಕ್ಕೆ ಒತ್ತು, ಮಾರುಕಟ್ಟೆ ಬಲಪಡಿಸುವುದು
  • ಜೈವಿಕ ಇಂಧನಗಳಿಗೆ ಸಂಬಂಧಿಸಿ ಸಮರ್ಪಕ ನೀತಿ ರೂಪಿಸುವುದು. ರಾಷ್ಟ್ರಗಳು ತಮ್ಮದೇ ಆದ ಕಾರ್ಯ ಕ್ರಮಹೊಂದುವುದಕ್ಕೆ ಉತ್ತೇಜನ ನೀಡುವುದು

ಏನಿದು ಜೈವಿಕ ಇಂಧನ?

  • ಸಸ್ಯಗಳು, ಧಾನ್ಯಗಳು, ಕೃಷಿ ತ್ಯಾಜ್ಯ, ಆಲ್ಗೆ, ಪ್ರಾಣಿಗಳು ಮತ್ತು ಆಹಾರದ ತ್ಯಾಜ್ಯಗಳಿಂದ ಪಡೆಯಲಾಗುವ ದಹನಶೀಲ ದ್ರವ ಅಥವಾ ಅನಿಲವನ್ನು ಜೈವಿಕ ಇಂಧನಗಳು ಎನ್ನುತ್ತಾರೆ. ಮೊದಲು ಪರಿಚಯವಾಗಿದ್ದು 1890ರಲ್ಲಿ ಪ್ಯಾರಿಸ್ ನಿವಾಸಿ ರುಡಾಲ್ಫ್ ಡೀಸೆಲ್ ಎಂಬವರು ಒಂದು ಎಂಜಿನ್ ಅನ್ನು ಅಭಿವೃದ್ಧಿಪಡಿಸಿದರು. ಕೃಷಿ ಬಳಕೆಗೆಂದು ಅಭಿವೃದ್ಧಿಪಡಿಸಲಾದ ಈ ಆಂತರಿಕ ದಹನಕಾರಿ ಎಂಜಿನ್ ಸಸ್ಯಜನ್ಯ ತೈಲದಿಂದ ಕಾರ್ಯನಿರ್ವಹಿಸುತ್ತಿತ್ತು.
  • ಸಾಮಾನ್ಯ ಜೈವಿಕ ಇಂಧನಗಳು ಯಾವುವು? ಜೈವಿಕ ಡೀಸೆಲ್, ಎಥನಾಲ್, ಬಯೋಗ್ಯಾಸ್ ಮತ್ತು ಸಂಕ್ಷೇಪಿತ ಬಯೋಗ್ಯಾಸ್.
  • ಜೈವಿಕ ಇಂಧನ ಉತ್ಪಾದನೆ ಹೇಗೆ? ಕಚ್ಚಾ ಸಾಮಗ್ರಿಗೆ ಅನುಗುಣವಾಗಿ ವಿಶೇಷ ಸಂಸ್ಕ ರಣಾಗಾರಗಳನ್ನು ಈ ರೀತಿ ವಿಂಗಡಿಸಲಾಗಿದೆ: ಮೊದಲ ತಲೆಮಾರಿನ(1ಜಿ) ಘಟಕಗಳು ಕಬ್ಬು ಬೆಳೆ ಮತ್ತು ಧಾನ್ಯಗಳ ಪಿಷ್ಟವನ್ನು ಸಂಸ್ಕರಿಸುತ್ತವೆ. ಖಾದ್ಯೆàತರ ಸಸ್ಯಗಳು, ಕೃಷಿ ತ್ಯಾಜ್ಯಗಳನ್ನು 2ನೇ ತಲೆಮಾರಿನ ಘಟಕಗಳು(2ಜಿ) ಸಂಸ್ಕರಿಸುತ್ತವೆ. ಮೂರನೇ ತಲೆಮಾರಿನ ಘಟಕಗಳು(3ಜಿ) ಆಲ್ಗೆ ಮತ್ತು ಸೂಕ್ಷ್ಮ ಜೀವಿಗಳಿಂದ ಜೈವಿನ ಇಂಧನವನ್ನು ತಯಾರಿಸುತ್ತವೆ.
  • ಬಳಕೆ ಯಾಕೆ ಮುಖ್ಯ? ಇಂಧನದ ಸುಸ್ಥಿರ ಮೂಲಗಳು ಜಗತ್ತಿನ ಎಲ್ಲ ಪ್ರದೇಶಗಳಲ್ಲೂ ಲಭ್ಯವಿರುತ್ತವೆ. ಅಲ್ಲದೇ, ಜೈವಿಕ ಇಂಧನಗಳು ವಾಹನಗಳ ಇಂಗಾಲ ಹೊರಸೂಸುವಿಕೆಯನ್ನು ತಗ್ಗಿಸುತ್ತವೆ, ರೈತರ ಆದಾಯ ಹೆಚ್ಚಿಸುತ್ತವೆ ಮತ್ತು ಭಾರತದಂಥ ದೇಶಗಳು ಆಮದು ಮಾಡಿದ ತೈಲವನ್ನೇ ನೆಚ್ಚಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.
  • ಜಗತ್ತಿನ ಪ್ರಮುಖ ಜೈವಿಕ ಇಂಧನ ಉತ್ಪಾದಕರು – 2022ರ ಟಾಪ್ ಎಥನಾಲ್ ಉತ್ಪಾದಕರು: ಅಮೆರಿಕ (57.5 ಶತಕೋಟಿ ಲೀ.) ಮತ್ತು ಬ್ರೆಜಿಲ್ (35.6 ಶತಕೋಟಿ ಲೀ.) – ಟಾಪ್ ಬಯೋಡೀಸೆಲ್ ಉತ್ಪಾದಕರು: ಯುರೋಪ್(17.7 ಶತಕೋಟಿ ಲೀ.), ಅಮೆರಿಕ (14.5 ಶತಕೋಟಿ ಲೀ.), ಇಂಡೋನೇಷ್ಯಾ (9.3 ಶತಕೋಟಿ ಲೀ.)
  • ಭಾರತದ ಉತ್ಪಾದನೆ :2022ರಲ್ಲಿ ಭಾರತವು ಸುಮಾರು 3 ಶತಕೋಟಿ ಲೀ. ಎಥನಾಲ್ ಉತ್ಪಾದಿಸಿದೆ. ಅಮೆರಿಕ, ಯುರೋಪ್, ಬ್ರೆಜಿಲ್ ಅನ್ನು ಹೊರತುಪಡಿಸಿದರೆ ಜಗತ್ತಿನ ಒಟ್ಟಾರೆ ಉತ್ಪಾದನೆಯ ಶೇ.16ರಷ್ಟು.
  • ಭಾರತದಲ್ಲಿ ಬಳಸಲಾಗುತ್ತಿರುವ ಜೈವಿಕ ಇಂಧನಗಳು :ಎಥನಾಲ್, ಜೈವಿಕ ಡೀಸೆಲ್, ಸಂಕ್ಷೇಪಿತ ಜೈವಿಕ ಅನಿಲ, ಜೈವಿಕ-ವೈಮಾನಿಕ ಇಂಧನ ಇತ್ಯಾದಿ.
  • ಭಾರತದಲ್ಲಿ ಜೈವಿಕ ಇಂಧನ ಕಾರ್ಯಕ್ರಮ ಆರಂಭವಾಗಿದ್ದು ಯಾವಾಗ? ರಾಷ್ಟ್ರೀಯ ಜೈವಿಕ ಇಂಧನ ನೀತಿ ಮೊದಲು ಜಾರಿಯಾಗಿದ್ದು 2009ರಲ್ಲಿ. ಇದನ್ನು 2022ರಲ್ಲಿ ಪರಿಷ್ಕರಿಸಲಾಯಿತು. ಪೆಟ್ರೋಲ್ ಜತೆ ಶೇ.20 ಎಥನಾಲ್ ಮಿಶ್ರಗೊಳಿಸುವ ಗುರಿಯನ್ನು 2025ರವರೆಗೆ ವಿಸ್ತರಿಸುವ ನಿಟ್ಟಿನಲ್ಲಿ ಈ ಪರಿಷ್ಕರಣೆ ನಡೆಯಿತು. 2023-24ರ ವೇಳೆಗೆ ವರ್ಷಕ್ಕೆ 15 ದಶಲಕ್ಷ ಟನ್ ಅನಿಲ ಉತ್ಪಾದನೆಗಾಗಿ 5 ಸಾವಿರ ಸಿಬಿಜಿ(ಸಂಕ್ಷೇಪಿತ ಜೈವಿಕ ಅನಿಲ) ಸ್ಥಾವರ ನಿರ್ಮಿಸುವ ಯೋಜನೆಯನ್ನು 2018ರಲ್ಲಿ ಅನಾವರಣಗೊಳಿಸಲಾಯಿತು.