Published on: November 26, 2021

ಉತ್ತರ ಪ್ರದೇಶಕ್ಕೆ 5ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಉತ್ತರ ಪ್ರದೇಶಕ್ಕೆ 5ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಸುದ್ಧಿಯಲ್ಲಿ ಏಕಿದೆ ?  ಉತ್ತರ ಪ್ರದೇಶದಲ್ಲಿ ಐದನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾದ ನೋಯ್ಡಾ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದರು.

ಮುಖ್ಯಾಂಶಗಳು

  • ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಉತ್ತರ ಪ್ರದೇಶದಲ್ಲಿ ಪ್ರವಾಸೋದ್ಯಮ ಹಾಗೂ ಕೃಷಿ ವಲಯ ಅಭಿವೃದ್ಧಿಗೆ ನೆರವಾಗಲಿದೆ.
  • ಹಾಗೆಯೇ ರಾಜ್ಯದಲ್ಲಿರುವ ದೇವಸ್ಥಾನಗಳು ಮತ್ತು ಯಾತ್ರಾ ಸ್ಥಳಗಳಿಗೆ ತೆರಳಲು ಭಕ್ತರಿಗೆ ಅನುಕೂಲ ಮಾಡಿಕೊಡಲಿದೆ
  • ‘ಉತ್ತರ ಪ್ರದೇಶದಂತಹ ಭೂಚ್ಛಾದಿತ ರಾಜ್ಯದಲ್ಲಿನ ಪ್ರವಾಸೋದ್ಯಮಕ್ಕೆ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾರಿ ಲಾಭ ತಂದುಕೊಡಲಿದೆ.
  • ಪಶ್ಚಿಮ ಉತ್ತರ ಪ್ರದೇಶದಲ್ಲಿನ ಕೃಷಿ ಉತ್ಪಾದಕತೆಯ ಸಾಮರ್ಥ್ಯವು ಗಣನೀಯವಾಗಿ ಏರಿಕೆಯಾಗಲಿದೆ. ಸಣ್ಣ ರೈತರು ಸರಕುಗಳನ್ನು ಸುಲಭವಾಗಿ, ದಕ್ಷತೆಯೊಂದಿಗೆ ಹಾಗೂ ಕೂಡಲೇ ರಫ್ತು ಮಾಡಲು ಅನುಕೂಲವಾಗಲಿದೆ
  • ಉತ್ತರ ಪ್ರದೇಶವು ಇನ್ನು ಮುಂದೆ ‘ಉತ್ತಮ್ ಸುವಿಧಾ ಮತ್ತು ನಿರಂತರ ನಿವೇಶ್’ ಎಂದು ಹೆಸರಾಗಲಿದೆ. ಈ ಹೊಸ ವಿಮಾನ ನಿಲ್ದಾಣವು ನೋಯ್ಡಾ ಮತ್ತು ಪಶ್ಚಿಮ ಉತ್ತರ ಪ್ರದೇಶಗಳನ್ನು ಜಾಗತಿಕ ನಕಾಶೆಯಲ್ಲಿ ಮೂಡಿಸಲಿವೆ
  • ಈ ವಿಮಾನ ನಿಲ್ದಾಣವು ಉತ್ತರ ಭಾರತದ ಲಾಜಿಸ್ಟಿಕ್ ಪ್ರವೇಶ ದ್ವಾರವಾಗಲಿದೆ.
  • ಇದು ಉತ್ತರ ಪ್ರದೇಶದ ಹತ್ತನೇ ವಿಮಾನ ನಿಲ್ದಾಣ ಮತ್ತು ಐದನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದೆ. ಭಾರತದಲ್ಲಿ ಯಾವ ರಾಜ್ಯವೂ ಇಷ್ಟು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿಲ್ಲ. ಅಲ್ಲದೆ ಈ ಹಸಿರು ವಿಮಾನ ನಿಲ್ದಾಣವು ದೇಶದ ಮೊದಲ ಮಾಲಿನ್ಯಮುಕ್ತ ಏರ್‌ಪೋರ್ಟ್ ಎನಿಸಿಕೊಳ್ಳಲಿದೆ.
  • ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಹಾಗೂ ಜಗತ್ತಿನಲ್ಲಿಯೇ ನಾಲ್ಕನೇ ಅತಿ ದೊಡ್ಡ ಏರ್‌ಪೋರ್ಟ್ ಆಗಲಿದೆ. ಎನ್‌ಸಿಆರ್ ವ್ಯಾಪ್ತಿಯಲ್ಲಿ ಬರುತ್ತಿರುವ ಎರಡನೇ ಅಂತಾರಾಷ್ಟ್ರೀಯ ನಿಲ್ದಾಣವಾಗಲಿದೆ.
  • ವಿಮಾನ ನಿಲ್ದಾಣ ಪ್ರದೇಶವು ಏರೋ ಮತ್ತು ನಾನ್ ಏರೋ ಚಟುವಟಿಕೆಗಳನ್ನು ಹಾಗೂ ಎಂಆರ್‌ಒ (ನಿರ್ವಹಣೆ, ದುರಸ್ತಿ ಮತ್ತು ಕಾರ್ಯಾಚರಣೆ) ಸೌಲಭ್ಯಗಳೊಂದಿಗೆ ಸಂಪೂರ್ಣ ಕಾರ್ಯಾಚರಣೆ ನಡೆಸುವ ಆರಂಭಿಸುವ ನಿರೀಕ್ಷೆಯಿದೆ.