Published on: June 6, 2022

ಒಮಿಕ್ರಾನ್ ಉಪತಳಿ BA4 ಮತ್ತು BA5

ಒಮಿಕ್ರಾನ್ ಉಪತಳಿ BA4 ಮತ್ತು BA5

ಸುದ್ಧಿಯಲ್ಲಿ ಏಕಿದೆ?

ತಮಿಳುನಾಡಿನಲ್ಲಿ ಸಂಗ್ರಹಿಸಿದ ಕೋವಿಡ್ ಮಾದರಿಗಳಲ್ಲಿ 12 ಮಂದಿಗೆ ಒಮಿಕ್ರಾನ್ ಉಪತಳಿಯ ಹೊಸ ರೂಪಾಂತರಗಳಾದ ಬಿಎ4 ಮತ್ತು ಬಿಎ5 ಪತ್ತೆಯಾಗಿದೆ.

ಮುಖ್ಯಾಂಶಗಳು

  • ಕೇಂದ್ರ ಸರ್ಕಾರದ ವೈರಾಣು ಸಂರಚನೆ ವಿಶ್ಲೇ ಷಣೆ ಸಂಸ್ಥೆ ಐಎನ್ಎಸ್ಎಸಿಒಜಿ (INSACOG) ಭಾರತದಲ್ಲಿ ಕೊರೊನಾವೈರಸ್ ಕಾಯಿಲೆಯ (COVID-19) BA.4 ಮತ್ತು BA.5 ಉಪತಳಿಗಳ ಪ್ರಕರಣ ಪತ್ತೆಯಾಗಿದೆ ಎಂದು ದೃಢಪಡಿಸಿದೆ.
  • ಇವೆರಡೂ ವೇಗವಾಗಿ ಹರಡುವ ಒಮಿಕ್ರಾನ್ರೂಪಾಂತರದ ತಳಿಗಳಾಗಿದ್ದು ಇದು ಈ ವರ್ಷದ ಆರಂಭದಲ್ಲಿ ದೇಶದಲ್ಲಿ ವೈರಸ್ನ ಬೃಹತ್ ಹರಡುವಿಕೆಗೆ ಕಾರಣವಾಯಿತು.ಕೇಂದ್ರ ಸರ್ಕಾರವು ಸ್ಥಾಪಿಸಿದ ಜಂಟಿ ಸಂಸ್ಥೆ ಇಂಡಿಯನ್ SARS-CoV2 ಜೀನೋಮಿಕ್ಸ್ ಕನ್ಸೋರ್ಟಿಯಂ ತಮಿಳುನಾಡಿನಲ್ಲಿ 19 ವರ್ಷದ ಮಹಿಳೆಯೊಬ್ಬ ರು BA.4 ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಹೇಳಿದೆ
  • ತೆಲಂಗಾಣದಲ್ಲಿ 80 ವರ್ಷದ ವ್ಯ ಕ್ತಿಯೊಬ್ಬ ರು BA.5 ರೂಪಾಂತರಕ್ಕೆ ಧನಾತ್ಮ ಕ ಪರೀಕ್ಷೆ ನಡೆಸಿದ್ದ ರು. ಈ ರೋಗಿಯು ಸಹ ಸೌಮ್ಯ ವಾದ ಕ್ಲಿನಿಕಲ್ರೋಗಲಕ್ಷಣಗಳನ್ನು ತೋರಿಸಿದ್ದಾರೆ.