Published on: June 6, 2022

ಮಂಕಿಪಾಕ್ಸ್

ಮಂಕಿಪಾಕ್ಸ್

ಸುದ್ಧಿಯಲ್ಲಿ ಏಕಿದೆ?

ಮಂಕಿಪಾಕ್ಸ್ ಅಪರೂಪದ ಕಾಯಿಲೆಯಾಗಿದ್ದು, ಸಿಡುಬಿಗಿಂತ ಕಡಿಮೆ ತೀವ್ರತೆ ಹೊಂದಿದೆ. ಸಾಮಾನ್ಯವಾಗಿ ಪಶ್ಚಿಮ ಮತ್ತು ಮಧ್ಯ ಆಫ್ರಿಕಾಕ್ಕೆ ಸೀಮಿತವಾಗಿದ್ದ ಈ ಕಾಯಿಲೆ ಮೇ ತಿಂಗಳಿನಿಂದ ಯುರೋಪ್ ನಲ್ಲಿಯೂ ಕಂಡುಬರುತ್ತಿದೆ. 

ಮುಖ್ಯಾಂಶಗಳು

  • ಅಮೆರಿಕಾದಲ್ಲಿ 21 ಸೇರಿದಂತೆ ವಿಶ್ವಾದ್ಯಂತ 700ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿರುವುದಾಗಿ ಅಮೆರಿಕಾದ ಕಾಯಿಲೆಗಳ ನಿಯಂತ್ರಣ ಮತ್ತು ತಡೆ ಸೆಂಟರ್ ಹೇಳಿದೆ.

ಮಂಕಿಪಾಕ್ಸ್ ರೋಗ 

  • ಮಂಕಿಪಾಕ್ಸ್ ರೋಗ ಪ್ರಾಣಿಗಳಿಂದ ಮನುಷ್ಯನಿಗೆ ಹರಡುವ ಖಾಯಿಲೆಯಾಗಿದ್ದು, ರಕ್ತ ಅಥವಾ ದೇಹದಲ್ಲಿನ ವೈರಾಣುಯುಕ್ತ ದ್ರವದ ಮೂಲಕ ಹರಡುವ ಸಮಸ್ಯೆಯಾಗಿದೆ.
  • ಮೊದಲ ಜನರೇಷನ್ ಸಿಡುಬು ಲಸಿಕೆಗಳು ಸಾರ್ವಜನಿಕವಾಗಿ 2019 ರಲ್ಲಿ ಲಭ್ಯವಿರಲಿಲ್ಲ. ಆದರೆ ಹೊಸ ಲಸಿಕೆಗಳನ್ನು ಸಿಡುಬು ಹಾಗೂ ಮಂಕಿಪಾಕ್ಸ್ ತಡೆಗೆ ಒಪ್ಪಿಕೊಳ್ಳಲಾಯಿತಾದರೂ, ಅವು ವ್ಯಾಪಕವಾಗಿ ಲಭ್ಯವಿಲ್ಲ.

ಸಿಡುಬು ಸಮಸ್ಯೆ ಕಾಣಿಸಿಕೊಳ್ಳಲು ಕಾರಣವಾದ ವೈರಾಣುವಿನ ಮಾದರಿ 

  • ಮಂಕಿಪಾಕ್ಸ್ ವೈರಾಣು ಸಿಡುಬು ಉಂಟುಮಾಡುವ ವೈರಾಣುವಿಗೆ ಸಂಬಂಧಿಸಿದ್ದಾಗಿದ್ದು, ಸಿಡುಬು ವೈರಾಣುವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಆದರೆ ಇವೆರಡೂ ಪೋಕ್ಸ್ವಿರಿಡೆ ಎಂಬ ತಳಿಯ ಪೈಕಿ ಆರ್ಥೋಪಾಕ್ಸ್ ವೈರಸ್ ಕುಲಕ್ಕೆ ಸೇರಿದ್ದಾಗಿದ್ದು ಮಂಕಿಪಾಕ್ಸ್ ನ ಮೊದಲ ಪ್ರಕರಣವನ್ನು 1958 ರಲ್ಲಿ ಸಂಶೋಧನೆಗಾಗಿ ಹಿಡಿದಿಟ್ಟಿದ್ದ ಮಂಗಗಳಿಂದ ಪತ್ತೆ ಮಾಡಲಾಗಿತ್ತು.
  • 1970 ರಲ್ಲಿ ಪಶ್ಚಿಮ ಆಫ್ರಿಕಾದಲ್ಲಿ ಮೊದಲ ಬಾರಿಗೆ ಮಾನವರಲ್ಲಿ ಈ ಖಾಯಿಲೆ ಪತ್ತೆಯಾಗಿತ್ತು. 2020 ರಲ್ಲಿ ಡಬ್ಲ್ಯುಹೆಚ್ಒ ನೀಡಿದ ಮಾಹಿತಿಯ ಪ್ರಕಾರ 4,594 ಶಂಕಿತ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿದ್ದು, 171 ಸಾವು ಸಂಭವಿಸಿದೆ (ಮರಣ ಪ್ರಮಾಣ ಶೇ.3.7 ರಷ್ಟಿದೆ) ಈ ಪ್ರಣಗಳು ಪತ್ತೆಯಾದಲ್ಲಿ ಪಿಸಿಆರ್ ಪರೀಕ್ಷೆ ಸೌಲಭ್ಯಗಳು ಲಭ್ಯವಿಲ್ಲದ ಕಾರಣ ಇವುಗಳನ್ನು ಶಂಕಿತ ಪ್ರಕರಣಗಳೆಂದು ಗುರುತಿಸಲಾಗಿದೆ.

ಲಕ್ಷಣಗಳು 

  • ಸೋಂಕು ತಗುಲಿದ 5-13 ದಿನಗಳಲ್ಲಿ ಲಕ್ಷಣಗಳು ಗೋಚರಿಸುತ್ತದೆ, ಲಕ್ಷಣ ಗೋಚರಿಸಲು 21 ದಿನಗಳಾದರೂ ಅದರಲ್ಲಿ ಅಚ್ಚರಿ ಇಲ್ಲ.  ಜ್ವರ, ತಲೆ ನೋವು, ಬೆನ್ನು ನೋವು, ಸ್ನಾಯು ನೋವು, ಚಳಿ ಹಾಗೂ ಬಳಲಿಕೆ, ಜ್ವರದೊಂದಿಗೆ ದೇಹದ ಬೇರೆ ಭಾಗಗಳಿಗೆ ಹರಡುವುದಕ್ಕೂ ಮುನ್ನ,  ಮುಖ, ಕೈ ಕಾಲುಗಳಲ್ಲಿ ದದ್ದು ಹೊರಹೊಮ್ಮುತ್ತದೆ. ಬಳಿಕ ಬಾಯಿಯ ಒಳಗೆ, ಕಾರ್ನಿಯಾ, ಜನನಾಂಗಗಳಲ್ಲೂ ಕಾಣಿಸಿಕೊಳ್ಳಬಹುದಾಗಿದೆ. ಹಲವು ಪ್ರಕರಣದಲ್ಲಿ ದೇಹದ ಚರ್ಮದ ದೊಡ್ಡ ಭಾಗಗಳು ಕಳಚಿ ಬೀಳುವ ಸಾಧ್ಯತೆ ಇದೆ.

ಮನುಷ್ಯರಿಂದ ಮನುಷ್ಯರಿಗೆ ಹರಡುವುದೂ ಸಾಧ್ಯ 

  • ಸೋಂಕು ತಗುಲಿರುವ ವನ್ಯ ಜೀವಿಗಳಿಂದ ಈ ವೈರಾಣು ಹರಡುತ್ತದೆ. ಆದರೆ ನಿಕಟ ಸಂಪರ್ಕ ಹೊಂದಿರುವ ಮನುಷ್ಯನಿಂದ ಮನುಷ್ಯನಿಗೂ ಇದು ಹರಡುವ ಸಾಧ್ಯತೆ ಇದ್ದು, ಎಬೋಲಾ ಮಾದರಿಯಲ್ಲಿ ನಿಕಟ ಸಂಪರ್ಕ, ದೇಹದ ಬೆವರು, ಕಲುಶಿತ ವಸ್ತುಗಳ ಮೂಲಕವೂ ಹರಡುವ ಸಾಧ್ಯತೆ ಇದೆ.
  • ಹಳೆಯ ಲಸಿಕೆಯನ್ನು ಹೊರತುಪಡಿಸಿದರೆ, ಸಧ್ಯಕ್ಕೆ ಇದಕ್ಕೆ ಯಾವುದೇ ಚಿಕಿತ್ಸೆಯೂ ಇಲ್ಲ, ಡಬ್ಲ್ಯುಹೆಚ್ಒ ಈ ವರೆಗೂ ಮಂಕಿಪಾಕ್ಸ್ ಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆಯನ್ನೂ ಸಲಹೆ ನೀಡಿಲ್ಲ. ಆದರೆ ಆರ್ಥೋಪಾಕ್ಸ್‌ ವೈರಸ್‌ಗಳ ವಿರುದ್ಧ ರಕ್ಷಿಸಲು ಪರವಾನಗಿ ಪಡೆದ ಟೆಕೊವಿರಿಮಾಟ್‌ನಂತಹ ಆಂಟಿವೈರಲ್‌ಗಳಿವೆ.