Published on: September 27, 2023

‘ಕದ್ರಾ’ ತೇಲುವ ಸೌರ ವಿದ್ಯುತ್ ಉತ್ಪಾದನಾ ಘಟಕ

‘ಕದ್ರಾ’ ತೇಲುವ ಸೌರ ವಿದ್ಯುತ್ ಉತ್ಪಾದನಾ ಘಟಕ

ಸುದ್ದಿಯಲ್ಲಿ ಏಕಿದೆ? ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ತೇಲುವ ಸೌರ ವಿದ್ಯುತ್ ಉತ್ಪಾದನಾ ಘಟಕ (ಸೋಲಾರ್ ಪಾರ್ಕ್) ಸ್ಥಾಪನೆಗೆ ಕರ್ನಾಟಕ ವಿದ್ಯುತ್ ನಿಗಮ (ಕೆ.ಪಿ.ಸಿ.ಎಲ್) ನಿರ್ಧರಿಸಿದೆ.

ಮುಖ್ಯಾಂಶಗಳು

  • ಯೋಜನೆ ಕಾರ್ಯರೂಪಕ್ಕೆ ಬಂದರೆ ರಾಜ್ಯದ ಮೊದಲ ತೇಲುವ ಸೋಲಾರ್ ಪಾರ್ಕ್ ಇದಾಗಲಿದೆ.
  • ಕಾಳಿನದಿಯ ಐದು ಜಲಾಶಯಗಳ ಪೈಕಿ ಕದ್ರಾ, ಬೊಮ್ಮನಳ್ಳಿಯ ಜಲಾಶಯದಲ್ಲಿಇವುಗಳಿಗೆ ಪೂರಕ ವಾತಾವರಣವಿದೆ.
  • ರಾಜ್ಯದಲ್ಲಿ ಸೌರಶಕ್ತಿ ಬಳಕೆ ಮಾಡಿ 270 ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ಸಮ್ಮತಿಸಿದ್ದರು. ಈ ಪೈಕಿ 100 ಮೆಗಾ ವ್ಯಾಟ್‍ ವಿದ್ಯುತ್‍ನ್ನು ನೀರಿನಲ್ಲಿ ತೇಲುವ ಸೌರಶಕ್ತಿಘಟಕಗಳ ಮೂಲಕ ಪಡೆಯಲು ಇಂಧನ ಇಲಾಖೆ ನಿರ್ಧರಿಸಿದೆ.

ಉದ್ದೇಶ

  • ‘ಕದ್ರಾ ಜಲಾಶಯದಲ್ಲಿತೇಲುವ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ಸೂಕ್ತ ವಾತಾವರಣವಿದೆ. ಉತ್ತಮ ಬಿಸಿಲು ಬೀಳುವ ಪ್ರದೇಶವೂ ಇದಾಗಿರುವ ಜತೆಗೆ ವಿಶಾಲವಾದ ಜಾಗದ ಲಭ್ಯತೆಯೂ ಭೂಸ್ವಾಧೀನದ ಅವಶ್ಯಕತೆಯೂ ಇಲ್ಲ ‘ಜಲಾಶಯ ವ್ಯಾಪ್ತಿಯ ನೂರಾರು ಹೆಕ್ಟೇರ್ ಪ್ರದೇಶ ನೀರು ಆವರಿಸಿಕೊಂಡಿರುವ ಕಾರಣ ಯಾವ ಬಳಕೆಗೂ ಇಲ್ಲ. ಇದೇ ಜಾಗದಲ್ಲಿ ತೇಲುವ ಸೌರ ವಿದ್ಯುತ್ ಉತ್ಪಾದನಾ ಘಟಕಗಳ ಸ್ಥಾಪಿಸಿದರೆ ವಿದ್ಯುತ್ ಉತ್ಪಾದನೆಗೆ ಪೂರಕವಾಗಲಿದೆ.

ಸೌರ ಪಾರ್ಕಗಳಿಗೆ  ಸಂಬಂಧಿಸಿದ  ಕೆಲವು ಸಂಗತಿಗಳು

ಸೌರ ಪಾರ್ಕಗಳಲ್ಲಿ ಎರಡು ವಿಧ

  • ಫೋಟೋ ವೋಲ್ಟಾಯಿಕ್ (ಭೂಮಿ  ಮೇಲೆ ಅಳವಡಿಸುವಂತಹದು)
  • ತೇಲುವ ಸೌರ ಪಾರ್ಕ್ (ನೀರಿನ  ಮೇಲೆ ಅಳವಡಿಸುವಂತಹದು)
  • ಭಾರತದ ಮೊದಲ ತೇಲುವ ಸೌರ ಪಾರ್ಕ್ (100 ಮೆಗಾ ವ್ಯಾಟ್‍) :ರಾಮಗುಂಡಂ ತೆಲಂಗಾಣ
  • ವಿಶ್ವದ ಅತ್ಯಂತ ದೊಡ್ಡ ತೇಲುವ ಸೌರ ಪಾರ್ಕ್ (600 ಮೆಗಾ ವ್ಯಾಟ್)   :ಮಧ್ಯಪ್ರದೇಶ ರಾಜ್ಯದ  ಖಾಂಡ್ವಾ ಜಿಲ್ಲೆಯ ಓಂಕಾಲೇಶ್ವರ ಆಣೆಕಟ್ಟಿನ ಹಿನ್ನೀರಿನಲ್ಲಿ ಅಳವಡಿಸಲಾಗಿದೆ
  • ಸೌರ ಶಕ್ತಿಯನ್ನು ಉತ್ಪಾದನೆ ಹೆಚ್ಚಿಸಲು ಕೇಸರಿ ಕ್ರಾಂತಿ ಎಂದು ಕರೆಯುತ್ತವೆ.

ಫೋಟೋ ವೋಲ್ಟಾಯಿಕ್

  • ಮೊದಲನೆಯ ಅತಿ ದೊಡ್ಡ ಫೋಟೋ ವೋಲ್ಟಾಯಿಕ್ ಸೌರ ಘಟಕ ರಾಜಸ್ತಾನದ ಬಾದ್ಲಾದಲ್ಲಿದೆ (2,245 ಮೆಗಾವ್ಯಾಟ್)
  • ಎರಡನೆಯ ಅತಿ ದೊಡ್ಡ ಫೋಟೋ ವೋಲ್ಟಾಯಿಕ ಸೌರ ಘಟಕ ಕರ್ನಾಟಕದ ಪಾವಗಡದಲ್ಲಿದೆ (ಸಾಮರ್ಥ್ಯ:2050 ಮೆಗಾವ್ಯಾಟ್)
  • ಕರ್ನಾಟಕದಲ್ಲಿ ಸೌರ ರೈತ ಯೋಜನೆಯನ್ನು ಜಾರಿಗೊಳಿಸಲಾಗಿದೆ

ಸೌರ ಶಕ್ತಿ ಹೆಚ್ಚಿಸಲು ಭಾರತ ಸರ್ಕಾರದ ಉಪಕ್ರಮಗಳು

ಪಿಎಂ ಕುಸುಮ ಯೋಜನೆ

  • ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ್ ಮಹಾಭಿಯಾನ್ ಯೋಜನೆಯು ಭಾರತದಲ್ಲಿನ ರೈತರಿಗೆ ಇಂಧನ ಭದ್ರತೆಯನ್ನು ಖಾತರಿಪಡಿಸುವ ಗುರಿಯನ್ನು ಹೊಂದಿದೆ, ಜೊತೆಗೆ ಪಳೆಯುಳಿಕೆ-ಇಂಧನವಲ್ಲದ ಮೂಲಗಳಿಂದ ವಿದ್ಯುತ್ ಶಕ್ತಿಯ ಸ್ಥಾಪಿತ ಸಾಮರ್ಥ್ಯದ ಪಾಲನ್ನು 40% ಗೆ ಹೆಚ್ಚಿಸುವ ಭಾರತದ ಬದ್ಧತೆಯನ್ನು ಗೌರವಿಸುತ್ತದೆ.
  • ಪ್ರಾರಂಭ :2019
  • ವೈಯಕ್ತಿಕ ರೈತರು/ ರೈತರ ಗುಂಪು/ ಸಹಕಾರಿಗಳು/ ಪಂಚಾಯತ್‌ಗಳು/ ರೈತ ಉತ್ಪಾದಕ ಸಂಸ್ಥೆಗಳು /ನೀರು ಬಳಕೆದಾರರ ಸಂಘಗಳು ಬಂಜರು/ ಪಾಳು ಭೂಮಿಯಲ್ಲಿ ಅಥವಾ ಸ್ಟಿಲ್ಟ್‌ಗಳ ಮೇಲೆ ಕೃಷಿಯೋಗ್ಯ ಭೂಮಿಯಲ್ಲಿ ಸೌರ ಫಲಕಗಳನ್ನು ಅಳವಡಿಸಿ ವಿದ್ಯುತನ್ನು ಉತ್ಪಾದಿಸುವುದು. ನೀರಾವರಿ ಅಗತ್ಯಗಳನ್ನು ಪೂರೈಸಲು ರೈತರು ಉತ್ಪಾದಿಸಿದ ಸೌರಶಕ್ತಿಯನ್ನು ಬಳಸಲು ಸಾಧ್ಯವಾಗುತ್ತದೆ ಮತ್ತು ಹೆಚ್ಚುವರಿ ಸೌರಶಕ್ತಿಯನ್ನು ಪೂರ್ವ-ನಿಗದಿತ ದರದಲ್ಲಿ ಡಿಸ್ಕಾಂಗಳಿಗೆ ಮಾರಾಟ ಮಾಡಬಹುದು.

ಅಟಲ್ ಜ್ಯೋತಿ ಯೋಜನೆ

  • ಭಾರತದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (MNRE) ಸೌರ ಬೀದಿ ದೀಪಗಳನ್ನು ಅಳವಡಿಸುವ   ಅಟಲ್ ಜ್ಯೋತಿ ಯೋಜನೆ (AJAY) ಅನ್ನು ಪ್ರಾರಂಭಿಸಿದೆ. ಇದು  MNRE ಸಚಿವಾಲಯದ, ಸರ್ಕಾರದ ಆಫ್-ಗ್ರಿಡ್ ಮತ್ತು ವಿಕೇಂದ್ರೀಕೃತ ಸೌರ ಅಪ್ಲಿಕೇಶನ್ ಯೋಜನೆಯಡಿಯಲ್ಲಿ ಉಪ ಯೋಜನೆಯಾಗಿದೆ.
  • ಹಂತ I ಅನ್ನು ಸೆಪ್ಟೆಂಬರ್ 2016- ಮಾರ್ಚ್ 2018 ರ ಅವಧಿಯಲ್ಲಿ ಅಳವಡಿಸಲಾಯಿತು.
  • MNRE ಬೀದಿ ದೀಪಗಳ ವೆಚ್ಚದಲ್ಲಿ 75% ಅನ್ನು ಒದಗಿಸುತ್ತದೆ ಮತ್ತು ಉಳಿದ 25% ಅನ್ನು ಸಂಸದ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಗಳಿಂದ (MPLADS) ನೀಡಲಾಗುತ್ತದೆ.

ಸೃಷ್ಟಿ (ಸೌರ ರೂಪಾಂತರಕ್ಕಾಗಿ ಸಸ್ಟೈನಬಲ್ ರೂಫ್‌ಟಾಪ್ ಇಂಪ್ಲಿಮೆಂಟೇಶನ್) ಯೋಜನೆ

  • ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಸಮನ್ವಯದಲ್ಲಿ ಕೇಂದ್ರ ಸರ್ಕಾರವು ಹೊಸ SRISTI ಯೋಜನೆಯನ್ನು ಪರಿಚಯಿಸಿದೆ. ಯೋಜನೆಯಡಿಯಲ್ಲಿ ದೇಶದೊಳಗೆ ಸೌರ ವಿದ್ಯುತ್ ಮೇಲ್ಛಾವಣಿ ಸ್ಥಾವರಗಳನ್ನು ಸ್ಥಾಪಿಸಲು ಫಲಾನುಭವಿಗೆ ಆರ್ಥಿಕ ಪ್ರೋತ್ಸಾಹವನ್ನು ನೀಡುವ ಒಂದು ರೀತಿಯ ಯೋಜನೆಯಾಗಿದೆ. ಪ್ರೋತ್ಸಾಹಧನವನ್ನು ಕೇಂದ್ರ ಸರ್ಕಾರ ನೀಡಲಿದೆ.
  • 2023-2024 ರ ಆರ್ಥಿಕ ವರ್ಷದವರೆಗೆ ಸೌರ ಮೇಲ್ಛಾವಣಿಗಳಿಂದ 40 GW ವಿದ್ಯುತ್ ಉತ್ಪಾದಿಸುವುದು ಈ ಯೋಜನೆಯ ಪ್ರಾಥಮಿಕ ಉದ್ದೇಶವಾಗಿದೆ.
  • ಸೋಲಾರ್ ರೂಫ್ ಟಾಪ್ ಇಂಡೆಕ್ಸ್ ಪ್ರಕಾರ ಮೇಲ್ಚಾವಣಿ ಸೌರ ಫಲಕಗಳನ್ನು ಅಳವಡಿಸುವಲ್ಲಿ ಕರ್ನಾಟಕವು ಮೊದಲನೇ ಸ್ಥಾನದಲ್ಲಿದೆ