Published on: September 27, 2023

ಪ್ರಜಾಧ್ವನಿ

ಪ್ರಜಾಧ್ವನಿ

ಸುದ್ದಿಯಲ್ಲಿ  ಏಕಿದೆ? ಸಾರ್ವಜನಿಕರು ಮತ್ತು ಶಾಸಕರು ಹೊತ್ತು ತರುವ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಜನಸ್ನೇಹಿ ಆಡಳಿತಕ್ಕೆ ಒತ್ತು ನೀಡಲು ಸರ್ಕಾರದ ಪ್ರಜಾಧ್ವನಿ ಆ್ಯಪ್​ ಅನ್ನು ಸಿದ್ಧಪಡಿಸಿದೆ.

ಮುಖ್ಯಾಂಶಗಳು

  • ಎಲ್ಲ ಸಚಿವರು ಜಿಲ್ಲಾಮಟ್ಟದಲ್ಲಿ ಜನತಾ ದರ್ಶನ ನಡೆಸಬೇಕೆಂದು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಜನತಾ ದರ್ಶನ ಆರಂಭಕ್ಕೆ ಮುನ್ನ ಪ್ರಜಾಧ್ವನಿ ಸಿದ್ಧ ಮಾಡಲಾಗಿದೆ.

ಏನಿದು ವ್ಯವಸ್ಥೆ?

  • ಸರ್ಕಾರದಲ್ಲಿ ಈಗ ಐಪಿಜಿಆರ್​ಎಸ್ ಎಂಬ ಆಪ್ ಇದ್ದರೆ, ಇನ್ನೊಂದೆಡೆ ಇ-ಆಫೀಸ್ ತಂತ್ರಾಂಶ ಪ್ರತ್ಯೇಕವಾಗಿದೆ. ಆದರೆ, ಪ್ರಜಾಧ್ವನಿ ಆಪ್ ಎರಡು ತಂತ್ರಾಂಶಗಳನ್ನು ಸೇರಿಸಿ ರೂಪಿಸಿರುವ ಹೈಬ್ರಿಡ್ ವ್ಯವಸ್ಥೆಯಾಗಿದೆ.
  • ಪ್ರಸ್ತುತ ಅರ್ಜಿ ಕೊಟ್ಟರೆ ಅದನ್ನು ಪಡೆದು ಉತ್ತರ ನೀಡುವ ವ್ಯವಸ್ಥೆ ಇದೆ. ದಾಖಲಾದ ಅರ್ಜಿಗಳಿಗೆ ಇಲಾಖೆ ಮುಖ್ಯಸ್ಥರು ಉತ್ತರದಾಯಿಯಾಗಿರುತ್ತಾರೆ.
  • ಸಚಿವರ ಜನತಾ ದರ್ಶನಕ್ಕೂ ಪರಿಹಾರ: ಸಚಿವರು ಜಿಲ್ಲೆಗಳಲ್ಲಿ ನಡೆಸುವ ಜನತಾದರ್ಶನದಲ್ಲಿ ಬರುವ ಅರ್ಜಿಗಳನ್ನು ಸಹ ಪ್ರಜಾಧ್ವನಿ ಆಪ್ ಮೂಲಕ ಆಯಾ ಇಲಾಖೆಗಳಿಗೆ ರವಾನೆ ಮಾಡಲಾಗುತ್ತದೆ.
  • ಪ್ರತ್ಯೇಕ ಅಧಿಕಾರಿ ನೇಮಕ: ಜನರಿಂದ ಎದುರಾಗುವ ಸಮಸ್ಯೆಗಳ ನಿರ್ವಹಣೆಗೆ ಈಗ ಪ್ರತ್ಯೇಕ ಅಧಿಕಾರಿಯನ್ನು ಸಿಎಂ ಸಚಿವಾಲಯದಲ್ಲಿ ನೇಮಕ ಮಾಡಲಾಗಿದೆ. ಒಟ್ಟು ಇಬ್ಬರು ಅಧಿಕಾರಿಗಳು ಜನರಿಂದ ಹಾಗೂ ಶಾಸಕರಿಂದ ಬರುವ ಅರ್ಜಿಗಳ ವಿಲೇವಾರಿ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.

ಉದ್ದೇಶ

  • ಜನತಾ ದರ್ಶನದಲ್ಲಿ ಬರುವ ಎಲ್ಲ ಅಹವಾಲುಗಳಿಗೆ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯ ಮೂಲಕವೇ ಪರಿಹಾರ ನೀಡುವುದು, ಅರ್ಜಿದಾರರಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳುವುದು ಒಟ್ಟಾರೆ ಉದ್ದೇಶ