Published on: November 24, 2022

ಕರ್ನಾಟಕದ ಮೊದಲ ಹಸಿರು ವಿಮಾನ ನಿಲ್ದಾಣ

ಕರ್ನಾಟಕದ ಮೊದಲ ಹಸಿರು ವಿಮಾನ ನಿಲ್ದಾಣ

ಸುದ್ದಿಯಲ್ಲಿ ಏಕಿದೆ?

ಹುಬ್ಬಳ್ಳಿ ಏರ್‌ಪೋರ್ಟ್‌ ರಾಜ್ಯದ ಮೊದಲ ಹಸಿರು ವಿಮಾನ ನಿಲ್ದಾಣವಾಗಿ ರೂಪುಗೊಂಡಿದೆ.

ಮುಖ್ಯಾಂಶಗಳು

  • ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಅಳವಡಿಸಿರುವ 8 ಮೆ.ವ್ಯಾ. ಗ್ರಿಡ್‌-ಸಂಪರ್ಕಿತ ಸೌರ ವಿದ್ಯುತ್‌ ಸ್ಥಾವರದಿಂದಾಗಿ ಏರ್‌ಪೋರ್ಟ್‌ ಶೇ.100ರಷ್ಟು ಹಸಿರು ವಿಮಾನ ನಿಲ್ದಾಣವಾಗಿದೆ.
  • ಈ ಸ್ಥಾವರದಿಂದ ಉತ್ಪತ್ತಿಯಾಗುವ ಸೌರಶಕ್ತಿಯನ್ನು ಹುಬ್ಬಳ್ಳಿಯ ಗ್ರಿಡ್‌ಗೆ ನೀಡಲಾಗುತ್ತಿದೆ.
  • ವಿಮಾನ ನಿಲ್ದಾಣದ 38 ಎಕರೆ ಪ್ರದೇಶದಲ್ಲಿ ಸೌರಶಕ್ತಿ ಘಟಕ ಸ್ಥಾಪಿಸಲಾಗಿದ್ದು, ಅಲ್ಲಿ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ.
  • 2030ರ ಒಳಗೆ ದೇಶದ ವಿದ್ಯುತ್ ಶಕ್ತಿಯ ಉತ್ಪಾದನೇ ಕನಿಷ್ಟ 50ರಷ್ಟು ನವೀಕರಿಸಬಹುದಾದ ಇಂಧನಗಳ ಮುಖಾಂತರ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ. ಅದರೆಡೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣ ಮೊದಲ ಹೆಜ್ಜೆ ಇಟ್ಟಿದೆ.

ಯಾವ ಯೋಜನೆಯಡಿ ಆಯ್ಕೆ?

  • ವಿಮಾನ ನಿಲ್ದಾಣ ಪ್ರಾಧಿಕಾರವೂ ಹುಬ್ಬಳ್ಳಿ ನಿಲ್ದಾಣವನ್ನು ಗ್ರೀನ್‌ ಎನರ್ಜಿ ಯೋಜನೆಯಡಿ ಆಯ್ಕೆ ಮಾಡಿಕೊಂಡಿತ್ತು.
  • ಒಡಂಬಡಿಕೆ: ತಾರಿಹಾಳದ ಎಲೆಕ್ಟ್ರಿಕಲ್‌ ಗ್ರಿಡ್‌ನೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ
  • ಪೂರೈಕೆ : ಇಲ್ಲಿ ಉತ್ಪಾದನೆಯಾಗುವ ವಿದ್ಯುತ್‌ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಮೈಸೂರು, ಕಲಬುರಗಿ ವಿಮಾನ ನಿಲ್ದಾಣಗಳಲ್ಲೂ ಬಳಕೆಯಾಗಲಿದೆ.

ಖಾಸಗೀಕರಣ

  • ಮೂಲಸೌಕರ್ಯ ಕ್ಷೇತ್ರಕ್ಕೆ ಆರ್ಥಿಕ ಸಂಪನ್ಮೂಲ ಹೊಂದಿಸಲು ಕೇಂದ್ರ ಸರಕಾರ ರೂಪಿಸಿರುವ ನ್ಯಾಷನಲ್‌ ಮಾನಿಟೈಸೇಶನ್‌ ಪೈಪ್‌ಲೈನ್‌(ಎನ್‌ಎಂಪಿ- ರಾಷ್ಟ್ರೀಯ ನಗದೀಕರಣ) ಯೋಜನೆಯಡಿ ಖಾಸಗಿಗೆ ವಹಿಸಿಕೊಡಲು ಹುಬ್ಬಳ್ಳಿ ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವನ್ನು ಗುರುತಿಸಲಾಗಿದೆ.
  • 2023-24ನೇ ಸಾಲಿಗೆ ಖಾಸಗೀಕರಣಕ್ಕೆ ನಿಗದಿಪಡಿಸಲಾಗಿದೆ.
  • ದೇಶದ 25 ವಿಮಾನ ನಿಲ್ದಾಣಗಳನ್ನು ಎನ್‌ಎಂಪಿ ಯೋಜನೆಗೊಳಪಡಿಸಿದ್ದು, ರಾಜ್ಯದ ಏಕೈಕ ಹುಬ್ಬಳ್ಳಿ ಏರ್‌ಪೋರ್ಟ್‌ನ್ನು ಖಾಸಗಿ ನಿರ್ವಹಣೆಗೆ ಆಯ್ಕೆ ಮಾಡಲಾಗಿದೆ.

ನಿಮಗಿದು ತಿಳಿದಿರಲಿ

  • ಹುಬ್ಬಳ್ಳಿ ಅಂತಾರಾಷ್ಟ್ರೀಯ ಮಟ್ಟದ ಏರ್‌ಪೋರ್ಟ್‌ ಕರ್ನಾಟಕದಲ್ಲೇ ಮೂರನೇ ಅತಿ ದೊಡ್ಡದು.

ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಯಾಣಿಕರ ದಟ್ಟಣೆ ಹೊಂದಿರುವ ಏರ್‌ಪೋರ್ಟ್‌ಗಳಲ್ಲೊಂದು ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಗುರುತಿಸಿದೆ.