Published on: October 12, 2021

ಕರ್ನಾಟಕ ಹೈಕೋರ್ಟ್ನ ನೂತನ ಮುಖ್ಯ ನ್ಯಾಯಮೂರ್ತಿ

ಕರ್ನಾಟಕ ಹೈಕೋರ್ಟ್ನ ನೂತನ ಮುಖ್ಯ ನ್ಯಾಯಮೂರ್ತಿ

ಸುದ್ಧಿಯಲ್ಲಿ ಏಕಿದೆ? ಅಲಹಾಬಾದ್ ಹೈಕೋರ್ಟ್ ನ ಹಿರಿಯ ನ್ಯಾಯಾಧೀಶ, ಜಸ್ಟೀಸ್ ರಿತು ರಾಜ್ ಅವಸ್ತಿ ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ.

  • ಕರ್ನಾಟಕದ ಹಿರಿಯ ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ಅವರನ್ನು ಗುಜರಾತ್‌ ಹೈಕೋರ್ಟ್‌ ಸಿಜೆಯಾಗಿ ನೇಮಿಸಿ ಕೇಂದ್ರ ಕಾನೂನು ಸಚಿವಾಲಯ ಆದೇಶ ಹೊರಡಿಸಿದೆ. ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಶಿಫಾರಸು ಆಧರಿಸಿ ಈ ನೇಮಕಗಳನ್ನು ಮಾಡಲಾಗಿದೆ. ಜೊತೆಗೆ ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ಸಿಜೆಯಾಗಿ ಕಾರ್ಯನಿರ್ವಹಿಸುತ್ತಿರುವ ನ್ಯಾ. ಸತೀಶ್‌ ಚಂದ್ರ ಶರ್ಮಾ ಅವರನ್ನು ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಗಿ ನೇಮಕ ಮಾಡಲಾಗಿದೆ.

ಹೊಸ ಸಿಜೆಯ ಪರಿಚಯ

  • ಅಲಹಾಬಾದ್‌ ಹೈಕೋರ್ಟ್‌ ನ ಹಿರಿಯ ನ್ಯಾಯಮೂರ್ತಿ ಆಗಿ ಸೇವೆ ಸಲ್ಲಿಸುತ್ತಿರುವ ರಿತು ರಾಜ್‌ ಅವಸ್ತಿ 1960ರ ಜು. 3ರಂದು ಜನಿಸಿದ್ದು, ಲಖನೌ ವಿಶ್ವವಿದ್ಯಾಲಯದಿಂದ 1986ರಲ್ಲಿ ಕಾನೂನು ಪದವಿ ಪಡೆದು, 1987ರಲ್ಲಿ ವಕೀಲರಾಗಿ ನೋಂದಾಯಿಸಿಕೊಂಡಿದ್ದರು. ಸಿವಿಲ್, ಶಿಕ್ಷಣ ಹಾಗೂ ಸೇವಾ ವಿಷಯಗಳಲ್ಲಿ ಹೆಚ್ಚಿನ ಪರಿಣಿತಿ ಹೊಂದಿದ್ದಾರೆ.
  • ಕೇಂದ್ರ ಸರಕಾರದ ಪರ ಸಹಾಯಕ ಸಾಲಿಸಿಟರ್‌ ಜನರಲ್‌ ಆಗಿಯೂ ಸೇವೆ ಸಲ್ಲಿಸಿದ್ದಾರೆ. 2009ರ ಏ. 13 ರಿಂದ ಅಲಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿ ಆಗಿ ಕಾರ್ಯನಿರ್ವಹಿಸುತ್ತಿರುವ ಅವರನ್ನು ಕರ್ನಾಟಕ ಹೈಕೋರ್ಟ್‌ ಸಿಜೆಯಾಗಿ ನೇಮಿಸಲು ಸುಪ್ರೀಂ ಕೋರ್ಟ್‌ ಕಳೆದ ತಿಂಗಳು ಶಿಫಾರಸು ಮಾಡಿತ್ತು. ನ್ಯಾ. ರಿತುರಾಜ್‌ ಅವಸ್ತಿ ತಮ್ಮ ಸೇವಾವಧಿ ಪೂರೈಸಿ 2022ರ ಜು.2 ರಂದು ನಿವೃತ್ತಿ ಹೊಂದಲಿದ್ದಾರೆ.