Published on: December 31, 2022

ಕಳಸಾ-ಬಂಡೂರಿ ಯೋಜನೆ

ಕಳಸಾ-ಬಂಡೂರಿ ಯೋಜನೆ

ಸುದ್ದಿಯಲ್ಲಿ ಏಕಿದೆ? ವಿಧಾನಸಭಾ ಚುನಾವಣಾ ಸನ್ನಿಹದಲ್ಲಿರುವಂತೆಯೇ ಉತ್ತರ ಕರ್ನಾಟಕ ಜನರ ಬಹು ದಿನಗಳ ಬೇಡಿಕೆಯಾಗಿದ್ದ ಕಳಸಾ- ಬಂಡೂರಿ ಯೋಜನೆಯ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಶಕ್ತಿ ಆಯೋಗ ಅನುಮತಿ ನೀಡಿದೆ.

ಮುಖ್ಯಾಂಶಗಳು

  • ಶ್ರೀ ಎಸ್.ಆರ್.ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಹಾದಾಯಿ ಯೋಜನೆಯನ್ನು 1988ರಲ್ಲಿ ಆರಂಭಿಸಿದ್ದರು.
  • ಆದರೇ ಆ ನಂತರ ಗೋವಾದಲ್ಲಿ ಬಂದ ಸರ್ಕಾರಗಳ ಈ ಯೋಜನೆಗೆ ವಿರೋಧವಿತ್ತು.
  • 2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಈ ಯೋಜನೆಗೆ ಬದ್ಧತೆ ತೋರಿತ್ತು
  • ಮೊದಲ ಕ್ಯಾಬಿನೆಟ್ ಸಭೆಯಲ್ಲಿ ರೂ. 500 ಕೋಟಿ ಅನುದಾನ ನೀಡಲಿದೆ.
  • ಮಹದಾಯಿ ನದಿ ತಿರುವು ಯೋಜನೆಗೆ ನಿಗದಿತ ಸಮಯಕ್ಕೆ ರೂ. 3000 ಕೋಟಿ ಬಿಡುಗಡೆ ಮಾಡಲಿದೆ.

ವಿಸ್ತೃತ ಯೋಜನಾ ವರದಿಯಲ್ಲಿ ಏನಿದೆ?

  • ಪರ್ಯಾಯ ಕಳಸಾ ಏತನೀರಾವರಿ ಯೋಜನೆ ಮತ್ತು ಪರ್ಯಾಯ ಬಂಡೂರಿ ಏತ ನೀರಾವರಿ ಯೋಜನೆ ಅಂಥ ಎರಡು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ
  • ಇದರಿಂದ ಸರ್ಕಾರಕ್ಕೆ 680 ಕೋಟಿ ರೂಪಾಯಿ ವೆಚ್ಚ ಹೊರೆ ಕಡಿಮೆಯಾಗಲಿದೆ
    ಈ ಎರಡು ಯೋಜನೆಗಳಿಗೆ ಅರಣ್ಯ ಪ್ರದೇಶ ಬಳಕೆ ಪ್ರಮಾಣ ಕಡಿಮೆಯಾಗಲಿದೆ ( ಹಾಗಾಗಿ ಕೇಂದ್ರ ಪರಿಸರ ಅರಣ್ಯ ಇಲಾಖೆ ಮತ್ತು ಗೋವಾ ತಗಾದೆಗೆ ಸೂಕ್ತ ಉತ್ತರ ಸಿಕ್ಕಂತಾಯಿತು)
  • ಕಾಲುವೆಗಳ ನಿರ್ಮಾಣದ ಮೂಲಕ ಮಹದಾಯಿ ನೀರನ್ನು ಮಲಪ್ರಭಾಕ್ಕೆ ತಿರುಗಿಸುವ ಬದಲಾಗಿ ಬೃಹತ್ ಪೈಪ್‌ಗಳ ಮೂಲಕ ನೀರು ಮಲಪ್ರಭಾಕ್ಕೆ ಹರಿಸುವ ಕುರಿತು ಹೊಸ ಡಿಪಿಆರ್‌ನಲ್ಲಿ ಪ್ರಸ್ತಾಪ (ಇದರಿಂದಾಗಿ ಕಳಸಾ ಮತ್ತು ಬಂಡೂರಿ ಎರಡೂ ಜಲಾಶಯಗಳ  ಎತ್ತರವೂ ತಗ್ಗಲಿದೆ)
  • ಬಳಿಕ 2018ರ ಮಹದಾಯಿ ನ್ಯಾಯಾಧೀಕರಣದ ಐತೀರ್ಪೀನ ಪ್ರಕಾರ ಕೇಂದ್ರ ಜಲ ಆಯೋಗವೂ ಮಹದಾಯಿ ನದಿಯಿಂದ ಕಳಸಾ ತಿರುವು ಯೋಜನೆ ಮೂಲಕ 1.72 ಟಿಎಂಸಿ ಮತ್ತು ಬಂಡೂರಿ ತಿರುವು ಯೋಜನೆಯ ಮೂಲಕ 2.18 ನೀರನ್ನು ಮಲಪ್ರಭಾಕ್ಕೆ ತಿರುಗಿಸಲು ಯೋಜನಾ ವರದಿ ಸಲ್ಲಿಸಲು ಸೂಚಿಸಿತು. ಅದರಂತೆ 2020ರಲ್ಲಿ ರಾಜ್ಯ ಸರ್ಕಾರ ಕೇಂದ್ರ ಜಲಶಕ್ತಿ ಇಲಾಖೆಗೆ ಡಿಪಿಆರ್ ಸಲ್ಲಿಸಿತು.

ಅಂಕಿ-ಅಂಶಗಳು ( ಪರಿಷ್ಕತ ಡಿಪಿಆರ್ ಪ್ರಕಾರ)

  • ಕಳಸಾ-ಬಂಡೂರಿ ಮೂಲಕ ಮಹದಾಯಿಯಿಂದ ಮಲಪ್ರಭಾಕ್ಕೆ ಹರಿಯುವ ಒಟ್ಟು ನೀರು 3.9 ಟಿಎಂಸಿ
    ಹಳೇ ಡಿಪಿಆರ್ ಪ್ರಕಾರ ಈ ಎರಡೂ ಯೋಜನೆಗಳಿಗೆ 1,675 ಕೋಟಿ ರೂಪಾಯಿ.
    ಪರಿಷ್ಕೃತ ಡಿಪಿಆರ್ ಪ್ರಕಾರ  ಯೋಜನಾ ವೆಚ್ಚ 1,096 ಕೋಟಿ ರೂಪಾಯಿ 579 ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ಉಳಿಕೆ ಅರಣ್ಯ ಬಳಕೆ ಪ್ರಮಾಣವೂ ೩೪೯ ಹೆಕ್ಟೇರ್‌ಗಳಿಂದ ಬರೀ 58 ಹೆಕ್ಟೇರಿಗೆ ಇಳಿಕೆ

ಕಳಸಾ-ಬಂಡೂರಿ ನಾಲಾ ಯೋಜನೆ

  • ಮಹದಾಯಿ ನದಿಯ ಉಪ ನದಿಗಳಾಗಿರುವ ಕಳಸಾ–ಬಂಡೂರಿಯ ಸುಮಾರು 7.56 ಟಿಎಂಸಿ ನೀರನ್ನು ಮಲಪ್ರಭಾ ನದಿಗೆ ತಿರುಗಿಸೋ ಯೋಜನೆಯಾಗಿದೆ.
  • ಮೇಲಿಂದ ಮೇಲೆ ಬರಗಾಲಕ್ಕೆ ತುತ್ತಾಗುತ್ತಿದ್ದ ಗದಗ ಜಿಲ್ಲೆಯ ನರಗುಂದ, ರೋಣ, ಧಾರವಾಡ ಜಿಲ್ಲೆಯ ನವಲಗುಂದ ಹಾಗೂ ಬೆಳಗಾವಿ ಜಿಲ್ಲೆಯ ಸವದತ್ತಿ, ಬೈಲಹೊಂಗಲ ತಾಲೂಕುಗಳಿಗೆ ಮತ್ತು ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಿಗೆ ಕುಡಿಯುವ ನೀರು ಪೂರೈಸುವುದಕ್ಕಾಗಿ ಕರ್ನಾಟಕ ಸರ್ಕಾರವು ಕೈಗೊಂಡ ಒಂದು ಯೋಜನೆಯಾಗಿದೆ.
  • ಎಸ್​​.ಎಂ.ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಈ ಯೋಜನೆಗೆ ಒಪ್ಪಿಗೆ ನೀಡಲಾಗಿತ್ತು. ಅಲ್ಲದೇ 2002ರಲ್ಲಿ ಈ ಯೋಜನೆಗೆ ಕೇಂದ್ರದಿಂದ ಕರ್ನಾಟಕ ಸರ್ಕಾರ ಕ್ಲಿಯರೆನ್ಸ್ ಕೂಡ ಪಡೆದುಕೊಂಡಿತ್ತು.

ಉದ್ದೇಶ

  • ಮಹಾದಾಯಿ ನದಿ ಕಣಿವೆಯ ಕಳಸಾ ಮತ್ತು ಬಂಡೂರಿ ಉಪನದಿಗಳಿಗೆ ಚಿಕ್ಕ ಅಣೆಕಟ್ಟೆ ಕಟ್ಟಿ ನೀರನ್ನು ಎತ್ತಿ ಕಾಲುವೆ ಮೂಲಕ ಸವದತ್ತಿ ಬಳಿಯ ಮಲಪ್ರಭಾ ನದಿಯ ರೇಣುಕಾ ಸಾಗರ(ನವಿಲು ತೀರ್ಥ) ಜಲಾಶಯಕ್ಕೆ ನೀರು ವರ್ಗಾಯಿಸುವುದೇ ಈ ಯೋಜನೆಯ ಉದ್ದೇಶ.
  • ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆಯಿಂದ ಹುಬ್ಬಳ್ಳಿ- ಧಾರವಾಡ, ಗದಗ ಸೇರಿ ಅನೇಕ ಪಟ್ಟಣಗಳ ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥವಾಗಲಿದೆ.

ವಿವಾದ

  • 2006ರಲ್ಲಿ ಬೆಳಗಾವಿಯ ಕಣಕುಂಬಿಯಲ್ಲಿ ಯೋಜನೆಯ ಆರಂಭಕ್ಕೆ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಭೂಮಿ ಪೂಜೆ ನೆರವೇರಿಸಿದ್ದರು. ಆದರೆ ಆ ನಂತರ ಬೆಳವಣಿಗೆಗಳಲ್ಲಿ ಗೋವಾ ಸರ್ಕಾರದಿಂದ ಯೋಜನೆಗೆ ಬಗ್ಗೆ ಆಕ್ಷೇಪಣೆ ಸಲ್ಲಿಕೆ ಮಾಡಿತ್ತು. ಪರಿಣಾಮ ಅಂದಿನ ಸರ್ಕಾರ ಯೋಜನೆಯ ಅನುಮೋದನೆಯನ್ನು ತಡೆಹಿಡಿದಿತ್ತು.
  • 2008 ರಲ್ಲಿ ಮಹದಾಯಿ ನ್ಯಾಯ ಮಂಡಳಿಯಿಂದ ಮಹದಾಯಿ ನೀರು ಹಂಚಿಕೆ ತೀರ್ಪು ಪ್ರಕಟವಾಗಿತ್ತು. ತೀರ್ಪಿನ ಅನ್ವಯ ಕಳಸಾ ನಾಲಾದಿಂದ 1.72 ಟಿಎಂಸಿ ಹಾಗೂ ಬಂಡೂರಿ ನಾಲಾದಿಂದ 2.18 ಟಿಎಸಿ ಅಡಿ ನೀರು ಅಂದರೇ, ಕರ್ನಾಟಕಕ್ಕೆ ಒಟ್ಟಾರೆ 5.5 ಟಿಎಂಸಿ ನೀರು ಹಂಚಿಕೆ ಮಾಡಲಾಗಿತ್ತು. ಅಲ್ಲದೇ 1.50 ಟಿಎಂಸಿ ಅಡಿ ನೀರು ಮಹದಾಯಿ ಜಲಾನಯನ ಪ್ರದೇಶದಲ್ಲಿ ಬಳಕೆಗೆ ಅನುಮತಿ ನೀಡಲಾಗಿತ್ತು. ಇದರ ಹೊರತಗಿಯೂ ಗೋವಾದ ಪದೇ ಪದೇ ವಿರೋಧದ ಕಾರಣ ಯೋಜನೆಗೆ ತಡೆಬಿದ್ದಿತ್ತು.

ನ್ಯಾಯಾಧಿಕರಣ :

  • ಗೋವಾ ಸರಕಾರ ಕೇಂದ್ರ ಜಲಸಂಪನ್ಮೂಲ ಸಚಿವರಿಗೆ ಜುಲೈ 2002ರಂದು ಪತ್ರ ಬರೆದು ನ್ಯಾಯಾಧಿಕರಣ ರಚಿಸುವಂತೆ ಕೇಳಿಕೊಂಡಿತು. ಕೇಂದ್ರ ಸರಕಾರ ನವೆಂಬರ್ 16, 2010ರಂದು ಮಹದಾಯಿ ಜಲವಿವಾದ ನ್ಯಾಯಾಧಿಕರಣ’ ರಚಿಸಿತು.

ಮಹಾದಾಯಿ ನದಿಪಾತ್ರ

  • ಮಹಾರಾಷ್ಟ್ರ, ಕರ್ನಾಟಕ, ಗೋವಾ ರಾಜ್ಯಗಳನ್ನೊಳಗೊಂಡ ಮಹಾದಾಯಿ ನದಿಪಾತ್ರದಲ್ಲಿ 2032 ಚದರ ಅಡಿ ಅಚ್ಚುಕಟ್ಟು ಪ್ರದೇಶವಿದೆ. ಇದರಲ್ಲಿ ಗೋವಾ 1580, ಕರ್ನಾಟಕ 375, ಮಹಾರಾಷ್ಟ್ರ 77 ಚಕಿಮೀ ಪಾಲು ಹೊಂದಿವೆ.

ಕಳಸಾ ಬಂಡೂರಿ

  • ಕಳಸಾ ಮತ್ತು ಬಂಡೂರಿ ಮಹದಾಯಿ ನದಿಯ ಉಪನದಿಗಳು. ಮಹದಾಯಿ ನದಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಪಶ್ಚಿಮ ಘಟ್ಟದಲ್ಲಿರುವ ಭೀಮಗಡ ಅರಣ್ಯ ಪ್ರದೇಶದಲ್ಲಿ ಹುಟ್ಟಿ ಕರ್ನಾಟಕದಲ್ಲಿ 22 ಕಿಲೋ ಮೀಟರ್ ಹರಿದು ಗೋವಾ ರಾಜ್ಯ ಪ್ರವೇಶಿಸಿ ಅಲ್ಲಿ 52 ಕಿ.ಮೀ ಹರಿದು ಪಣಜಿ ಬಳಿ ಅರಬ್ಬೀ ಸಮುದ್ರ ಸೇರುತ್ತದೆ. ಈ ನದಿಗೆ ಗೋವಾದಲ್ಲಿ ಮಾಂಡೋವಿ’ ಎಂದು ಹೆಸರು. ಮಹದಾಯಿ ನದಿಗೆ ಹಲತಾರಾ, ಕಳಸಾ, ಬಂಡೂರಿ, ಕಾರಂಜೋಳ, ಬೊಮ್ಮನರಿ, ದೂದ ಸಾಗರ ಹೀಗೆ ಅನೇಕ ಉಪನದಿಗಳಿಂದ ಕೂಡಿದ ನದಿ ಕಣಿವೆ ಆಗಿದೆ.

ಕಳಸಾ ನಾಲಾ ತಿರುವು:

  • ಕಳಸಾ ಹಳ್ಳವು ಕರ್ನಾಟಕದಲ್ಲಿ ಹುಟ್ಟಿ ದಕ್ಷಿಣಾಭಿಮುಖವಾಗಿ ಹರಿದು ಗೋವಾದಲ್ಲಿ ಮಹದಾಯಿ ನದಿಯನ್ನು ಸೇರುತ್ತದೆ. ಈ ಹಳ್ಳದಿಂದ 3.56 ಟಿಎಂಸಿ ನೀರನ್ನು ಪಡೆಯುವ ಉದ್ದೇಶದಿಂದ ಯೋಜನೆ ತಯಾರಿಸಲಾಗಿದೆ.
  • ಕಳಸಾ ಯೋಜನೆಗೆ ಎರಡು ಅಣೆಕಟ್ಟೆಗಳನ್ನು ನಿರ್ಮಿಸುವುದು. ಹುಬ್ಬಳ್ಳಿ-ದಾರವಾಡ ಅವಳಿ ನಗರಗಳಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ ಎಚ್.ಕೆ.ಪಾಟೀಲ್ 2000ರಲ್ಲಿ ಕಳಸಾ ಬಂಡೂರಿ ನಾಲಾ ಯೋಜನೆಯನ್ನು ರೂಪಿಸಿದ್ದರು.
    • (1) ಕಳಸಾ ಹಳ್ಳಕ್ಕೆ ಅಣೆಕಟ್ಟು ಹಾಗೂ 4.8 ಕಿ.ಮಿ. ಉದ್ದದ ಕಾಲುವೆ ನಿರ್ಮಾಣ.
    • (2) ಹಳತಾರ ಹಳ್ಳಕ್ಕೆ ಅಣೆಕಟ್ಟು ನಿರ್ಮಿಸಿ ಅಲ್ಲಿ ಸಂಗ್ರಹವಾದ ನೀರನ್ನು 5.5 ಕಿ.ಮೀ. ಉದ್ದದ ಕಾಲುವೆಯ ಮೂಲಕ ಕಳಸಾ ಅಣೆಕಟ್ಟೆಗೆ ಸಾಗಿಸುವುದು.

ಬಂಡೂರಿ ನಾಲಾ ತಿರುವು:

  • ಸಿಂಗಾರ ನಾಲಾ ಹಾಗೂ ವಾಟಿ ನಾಲಾಗಳಿಗೆ ಅಣೆಕಟ್ಟು ಕಟ್ಟಿ ಸಂಗ್ರಹವಾದ ನೀರನ್ನು ಬಂಡೂರಿ ಜಲಾಶಯಕ್ಕೆ ವರ್ಗಾಯಿಸುವುದು. ಇಲ್ಲಿ ಸಂಗ್ರಹವಾದ 4 ಟಿಎಂಸಿ ನೀರನ್ನು 5.15 ಕಿ.ಮೀ ಕಾಲುವೆ ಮೂಲಕ ಮಲಪ್ರಭಾ ನದಿಗೆ ವರ್ಗಾಯಿಸುವುದು.
  • ಬಂಡೂರ ನಾಲಾ ಯೋಜನೆಗೊಳಪಡುವ ಜಲಾನಯನ ಪ್ರದೇಶ 32.25 ಚ.ಕಿ.ಮೀ. ಇದರಿಂದ ಒಟ್ಟು 380 ಹೆಕ್ಟೇರ್ ಭೂಮಿ ಮುಳುಗಡೆ ಆಗಲಿದೆ. ಈ ಎರಡೂ ಯೋಜನೆಗಳಿಂದ ಒಟ್ಟು 7.56 ಟಿಎಂಸಿ ನೀರು ಲಭ್ಯವಾಗಲಿದೆ.

ಕಳಸಾ ಬಂಡೂರಿ ಯೋಜನೆಗೆ ಗೋವಾದ ವಿರೋಧವೇಕೆ?

  • ಗೋವಾದ ವಾದ ಪ್ರಕಾರ, ಮಹದಾಯಿ ನದಿ ನೀರಿನ ಕೊರತೆಯನ್ನು ಅನುಭವಿಸುತ್ತಿರುವ ಒಂದು ಕಣಿವೆ ಪ್ರದೇಶವಾಗಿದೆ. ಆದ್ದರಿಂದ ನೀರಿನ ಕೊರತೆ ಇರುವ ಕಣಿವೆಯಿಂದ ನೀರನ್ನು ಬೇರೆಡೆಗೆ ವರ್ಗಾಯಿಸುವುದು ಸರಿಯಲ್ಲ. ಮಹದಾಯಿ ಅಥವಾ ಮಾಂಡೋವಿ ನದಿ ಗೋವಾ ರಾಜ್ಯದ ಜೀವ ನದಿಯಾಗಿದೆ.
  • ಮಹದಾಯಿ ನದಿ ನೀರನ್ನು ಬೇರೆಡೆಗೆ ವರ್ಗಾಯಿಸಿದರೆ ಪಶ್ಚಿಮ ಘಟ್ಟದ ಪರಿಸರದ ಮೇಲೆ ತೀವ್ರ ಪರಿಣಾಮ ಉಂಟಾಗಿ ನದಿಯ ಉಗಮದ ಪ್ರದೇಶದ ಅರಣ್ಯ ನಾಶವಾಗಿ, ನದಿಯ ನೀರಿನ ಹರಿವಿಗೆ ಕೊರತೆಯಾಗುತ್ತದೆ ಎಂಬುದು ಗೋವಾದ ವಾದವಾಗಿದೆ.

ಅಧ್ಯಯನ ಮತ್ತು ಸಮೀಕ್ಷೆಗಳು

ಕೇಂದ್ರ ಸರಕಾರದ ಸಲಹೆಯಂತೆ ಕರ್ನಾಟಕ ಸರಕಾರ ಮಾಡಿಕೊಂಡ ಮನವಿ ಮೇರೆಗೆ ಮಹಾರಾಷ್ಟ್ರದ ನಾಗಪುರದಲ್ಲಿರುವ ನೀರಿ’ ಅಧ್ಯಯನ ನಡೆಸಿ ಮಹದಾಯಿ ತಿರುವು ಯೋಜನೆಯಿಂದ ಪರಿಸರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗುವುದಿಲ್ಲವೆಂದೂ ಮತ್ತು ಮಹದಾಯಿ ಕಣಿವೆ ನೀರಿನ ಕೊರತೆ ಇರುವ ಪ್ರದೇಶ ಅಲ್ಲವೇ ಅಲ್ಲವೆಂದೂ ತಿಳಿಸಿತು. ಅದರಂತೆ ರಾಷ್ಟ್ರೀಯ ನೀರಿನ ಅಭಿವೃದ್ಧಿ ಸಂಸ್ಥೆ ಹಾಗೂ ಕೇಂದ್ರ ಜಲ ಆಯೋಗಗಳು ಕೂಡಾ ಅಧ್ಯಯನ ನಡೆಸಿ ಗೋವಾದ ವಾದದಲ್ಲಿ ಹುರುಳಿಲ್ಲ ಎಂಬುದನ್ನು ತಿಳಿಸಿವೆ.