Published on: September 10, 2023

ಕಾಲಾ ಜೀರಾ ಅಕ್ಕಿ

ಕಾಲಾ ಜೀರಾ ಅಕ್ಕಿ

ಸುದ್ದಿಯಲ್ಲಿ ಏಕಿದೆ? ಅಕ್ಕಿಗಳ ರಾಜ ಎಂದೇ ಹೆಸರುವಾಸಿಯಾಗಿರುವ ಕೋರಾಪುಟ್ ಜಿಲ್ಲೆಯ ‘ಕಾಲಾ ಜೀರಾ ಅಕ್ಕಿ‘ಗೆ ಭೌಗೋಳಿಕ ಮಾನ್ಯತೆ (ಜಿಐ ಟ್ಯಾಗ್) ನೀಡಿರುವುದರ ಕುರಿತು ಎಂ.ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ (ಎಂಎಸ್ಎಸ್ಆರ್ಎಫ್) ಆಕ್ಷೇಪ ವ್ಯಕ್ತಡಿಸಿದೆ.

ಮುಖ್ಯಾಂಶಗಳು

  • ಖಾಸಗಿ ಸಂಸ್ಥೆ ‘ಜೈವಿಕ್ ಶ್ರೀ ಫಾರ್ಮರ್ಸ್ ಪ್ರೊಡ್ಯೂಸರ್ಸ್ ಕಂಪನಿ’ (ಜೆಎಸ್ಎಫ್ಪಿಸಿ) ಜಿಐ ಟ್ಯಾಗ್ಗಾಗಿ ಅರ್ಜಿ ಸಲ್ಲಿಸಿತ್ತು.

ಆಕ್ಷೇಪಕ್ಕೆ ಕಾರಣ

  • ಜಿಐ ಟ್ಯಾಗ್ನಿಂದ ಕಂಪನಿಯು ‘ಕಾಲಾ ಜೀರಾ ಅಕ್ಕಿ’ಯನ್ನು ಬೆಳೆಯಲು ಮತ್ತು ಮಾರಾಟ ಮಾಡಲು ವಿಶೇಷ ಹಕ್ಕುಗಳನ್ನು ಪಡೆಯುತ್ತದೆ. ಜಿಐ ಟ್ಯಾಗ್ನಿಂದ ಸಿಗುವ ಪ್ರಯೋಜನಗಳಿಂದ ಕಂಪನಿಯು ಸ್ಥಳೀಯ ರೈತರನ್ನು ಹೊರಗಿಡುವ ಸಾಧ್ಯತೆಯಿದೆ ಎಂದು ಎಂಎಸ್ಎಸ್ಆರ್ಎಫ್ ವಾದಿಸಿದೆ.
  • ಜಿಐ ಟ್ಯಾಗ್ಗಾಗಿ ಅರ್ಜಿಯನ್ನು ಸರ್ಕಾರಿ ಏಜೆನ್ಸಿಯಿಂದ ಮಾಡಬೇಕೇ ಹೊರತು ಯಾವುದೇ ಖಾಸಗಿ ಸಂಸ್ಥೆಯಿಂದಲ್ಲ. ಖಾಸಗಿ ಸಂಸ್ಥೆ ಜಿಐ ಟ್ಯಾಗ್ ಪಡೆದರೆ ಆ ಕಂಪನಿಯೇ ಉತ್ಪನ್ನದ ಏಕೈಕ ಫಲಾನುಭವಿಯಾಗಿಬಹುದು. ಇದರಿಂದ ಆ ಬೆಳೆಯನ್ನು ಬೆಳೆಯುವ ರೈತರಿಗೆ ತೊಂದರೆಯಾಗಬಹುದು.

ಕಾಲಾ ಜೀರಾ ಅಕ್ಕಿ

  • ಒಡಿಶಾ ರಾಜ್ಯದ ಕೋರಾಪುಟ್ ಜಿಲ್ಲೆಯ ವಿಶೇಷ ಧಾನ್ಯವಾಗಿದೆ.
  • ಕಾಲಾ ಜೀರಾದ ಭತ್ತವು ಕಪ್ಪು, ಆದರೆ ಅದರಿಂದ ಪಡೆದ ಅಕ್ಕಿ ಬಿಳಿಯಾಗಿರುತ್ತದೆ.
  • ಇದು ಎಕರೆಗೆ 5-10 ಕ್ವಿಂಟಾಲ್ ನಷ್ಟು ಇಳುವರಿಯನ್ನು ನೀಡುತ್ತದೆ
  • ಬೆಳೆಯ ಸಮಯ : 140 ರಿಂದ 155 ದಿನಗಳು