Published on: September 10, 2023

ಬಿಳಿ ಬಣ್ಣದ ಕಡವೆ (ಸಾಂಬಾರ್ ಜಿಂಕೆ)

ಬಿಳಿ ಬಣ್ಣದ ಕಡವೆ (ಸಾಂಬಾರ್ ಜಿಂಕೆ)

ಸುದ್ದಿಯಲ್ಲಿ ಏಕಿದೆ? ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಅಪರೂಪದ ಶ್ವೇತ ವರ್ಣದ ಕಡವೆ ಕಂಡು ಬಂದಿದೆ.

ಮುಖ್ಯಾಂಶಗಳು

  • ಈ ಅರಣ್ಯ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಬಿಳಿ ಕಡವೆ ಪತ್ತೆಯಾಗಿದೆ. 2014ರಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಿಳಿ ಬಣ್ಣದ ಕಡವೆ ಕಂಡುಬಂದಿತ್ತು.
  • ಈ ಅರಣ್ಯ ಪ್ರದೇಶದಲ್ಲಿ ಇದು ಮೊದಲನೆಯದು. ಆದರೆ, ಕರ್ನಾಟಕದ ಕಾಡುಗಳಲ್ಲಿ ಲ್ಯೂಸಿಸಮ್ ಒಂದು ಅನುವಂಶಿಕ ರೂಪಾಂತರವಾಗಿದೆ ಮತ್ತು ನೈಸರ್ಗಿಕವಾಗಿ ಸಂಭವಿಸುತ್ತದೆ’.

ಲ್ಯೂಸಿಸಮ್

  • ‘ಅಪರೂಪದ ಶ್ವೇತ ವರ್ಣದ ಸ್ಥಿತಿಯನ್ನು ಲ್ಯೂಸಿಸ್ಟಿಕ್ ಎಂದು ಗುರುತಿಸಲಾಗಿದೆ. ಪ್ರಾಣಿಗಳ ಚರ್ಮದಲ್ಲಿ ವರ್ಣದ್ರವ್ಯದ ಕೊರತೆ ಉಂಟಾಗಿ, ಚರ್ಮ ಬಿಳಿ ಅಥವಾ ಮಂದ ಬಣ್ಣಕ್ಕೆ ಬದಲಾಗುವ ವಿರಳ ಪ್ರಕ್ರಿಯೆಯನ್ನು ಲ್ಯೂಸಿಸಮ್ ಎಂದು ಕರೆಯಲಾಗುತ್ತದೆ.
  • ಇದು ಪ್ರಾಣಿಗಳ ಚರ್ಮದಲ್ಲಿ ಮೆಲನಿನ್ ಕೊರತೆಯಿಂದಾಗಿ ಉಂಟಾಗುವ ಅಲ್ಬಿನಿಸಂ ಸ್ಥಿತಿಗಿಂತ ಭಿನ್ನವಾಗಿರುತ್ತದೆ. ಅಲ್ಬಿನಿಸಂ ಸ್ಥಿತಿಯಲ್ಲಿ ಪ್ರಾಣಿಗಳ ಕಣ್ಣು ಗುಲಾಬಿ ಅಥವಾ ಕೆಂಪು ಬಣ್ಣಕ್ಕೆ ತಿರುಗಿರುತ್ತದೆ. ಆದರೆ ಲ್ಯೂಸಿಸಂನಲ್ಲಿ ಪ್ರಾಣಿಗಳ ಕಣ್ಣುಗಳು ಸಹಜ ಬಣ್ಣವನ್ನು ಹೊಂದಿರುತ್ತವೆ.

ಕಾವೇರಿ ವನ್ಯಜೀವಿ ಅಭಯಾರಣ್ಯ

  • ಅಭಯಾರಣ್ಯವು ಭಾರತದ ಕರ್ನಾಟಕ ರಾಜ್ಯದ ಮಂಡ್ಯ, ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಗಳಲ್ಲಿ ನೆಲೆಗೊಂಡಿರುವ ಸಂರಕ್ಷಿತ ಪ್ರದೇಶವಾಗಿದೆ.
  • ಕಾವೇರಿ ನದಿಯು ಅದರ ಮಧ್ಯದಲ್ಲಿ ಹಾದುಹೋಗುತ್ತದೆ.
  • ಸ್ಥಾಪನೆ: 14 ಜನವರಿ 1987
  • ನಿರ್ವಹಣೆ: ಭಾರತ ಸರ್ಕಾರ, ಭಾರತದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ