Published on: November 14, 2022

ಕಿಸಾನ್ ಸ್ವರಾಜ್ ಸಮ್ಮೇಳನ

ಕಿಸಾನ್ ಸ್ವರಾಜ್ ಸಮ್ಮೇಳನ

ಸುದ್ದಿಯಲ್ಲಿ ಏಕಿದೆ?

ಮೈಸೂರಿನಲ್ಲಿ ಮೂರು ದಿನಗಳ ಕಾಲ ನಡೆದ ಕಿಸಾನ ಸ್ವರಾಜ ಸಮೇಳನದಲ್ಲಿ ರೈತರ ಹಿತ ಕಾಪಾಡುವಂತೆ ಒತ್ತಾಯಿಸಿ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.

ಮುಖ್ಯಾಂಶಗಳು

  • ಕೃಷಿ ಭೂಮಿಯನ್ನು ಲಾಭಕ್ಕಾಗಿ ಬೇರೆ ಬೇರೆ ಉದ್ದೇಶಗಳಿಗಾಗಿ ಮಾರಾಟ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಲಾಯಿತು.
  • ದೇಶದ ವಿವಿಧ ಭಾಗದಿಂದ ಆಗಮಿಸಿದ್ದ ಸುಮಾರು ಎರಡು ಸಾವಿರಕ್ಕೂ ಹೆಚ್ಚು ರೈತರು, ಆದಿವಾಸಿಗಳು, ಬೀಜ ಸಂರಕ್ಷಕರು, ಸಮುದಾಯ ಸಂಘಟಕರು, ಕೃಷಿ ವಿಜ್ಞಾನಿಗಳು, ನೀತಿ ನಿರೂಪಕರೂ , ವಿದ್ಯಾರ್ಥಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
  • ಗುತ್ತಿಗೆ ಕೃಷಿ ಹೆಚ್ಚುತ್ತಿರುವ ಮತ್ತು ಕಾರ್ಪೊರೇಟ್ ಕೃಷಿ ವಿಸ್ತಾರಗೊಳ್ಳುತ್ತಿರುವ ಬಗ್ಗೆ ಸಮ್ಮೇಳನದಲ್ಲಿ ಆತಂಕ ವ್ಯಕ್ತಪಡಿಸಲಾಯಿತು.
  • ಸರ್ಕಾರವು ರೈತರ ಒಪ್ಪಿಗೆ ಪಡೆದೆ ರೈತರಿಗೆ ಸಂಬಂಧಪಟ್ಟ ನಿರ್ಣಯಗಳನ್ನು ತೆಗೆದುಕೊಳ್ಳಬೇಳು, ಕೃಷಿ ವೈವಿದ್ಯತೆಯನ್ನು ಮತ್ತು ಬೀಜ ಸ್ವಾವಲಂಬನೆಯನ್ನು ಪುನಶ್ಚೇತನಗೊಳಿಸಬೇಕು, ಎಲ್ಲರಿಗೂ ಸುರಕ್ಷಿತ ಮತ್ತು ಪರಿಪೂರ್ಣ ಆಹಾರ ದೊರೆಯುವಂತಾಗಬೇಕು ಎಂದು ಸಮ್ಮೇಳನವು ಆಗ್ರಹಿಸಿದೆ.
  • ಆಯೋಜಕರು: ಆಶಾ (ಅಲಯನ್ಸ್‌ ಫಾರ್‌ ಸಸ್ಟೈನಬಲ್ ಆ್ಯಂಡ್‌ ಹೊಲಿಸ್ಟಿಕ್‌ ಅಗ್ರಿಕಲ್ಚರ್‌) ಕಿಸಾನ್‌ ಸ್ವರಾಜ್‌ ಸಂಸ್ಥೆ
  • ನಿರ್ಣಯಗಳು : ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ಬೆಳೆ ಹಾನಿಗೆ ಯೋಗ್ಯ ಪರಿಹಾರ, ಬೆಳೆಗಳಿಗೆ  ವಿಮೆ, ಸಾಮಾಜಿಕ ಭದ್ರತೆಯನ್ನು ಒದಗಿಸುವುದು ಮತ್ತು ರೈತ ಗುಂಪುಗಳ ಮೇಲೆ ಬಂಡವಾಳ ಹೂಡಿಕೆ ಇತ್ಯಾದಿ