Published on: November 14, 2022

ಜಗತ್ತಿನ ಜನಸಂಖ್ಯೆ 8 ಶತಕೋಟಿ

ಜಗತ್ತಿನ ಜನಸಂಖ್ಯೆ 8 ಶತಕೋಟಿ

ಸುದ್ದಿಯಲ್ಲಿ ಏಕಿದೆ?

ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ ಜಾಗತಿಕ ಜನಸಂಖ್ಯೆಯು ನವೆಂಬರ್ ಮಧ್ಯದ ವೇಳೆಗೆ ಎಂಟು ಶತಕೋಟಿ ತಲುಪುತ್ತಿದೆ ಮತ್ತು ಮುಂಬರುವ ದಶಕಗಳಲ್ಲಿ ನಿಧಾನ ಗತಿಯಲ್ಲಿ ಮತ್ತು ಪ್ರಾದೇಶಿಕ ಅಸಮಾನತೆಗಳೊಂದಿಗೆ ಬೆಳೆಯುತ್ತಲೇ ಇರುತ್ತದೆ.

ಮುಖ್ಯಾಂಶಗಳು

  • 1950 ರಲ್ಲಿ ಇದ್ದ 2.5 ಶತಕೋಟಿ ಜಾಗತಿಕ ಜನಸಂಖ್ಯೆಗಿಂತ ಮೂರು ಪಟ್ಟು ಹೆಚ್ಚು ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.
  • ಆದಾಗ್ಯೂ, 1960 ರ ದಶಕದ ಆರಂಭದಲ್ಲಿ ಒಂದು ಉತ್ತುಂಗದ ನಂತರ, ವಿಶ್ವದ ಜನಸಂಖ್ಯೆ ಬೆಳವಣಿಗೆಯ ದರವು ದಿಢೀರ್ ಕಡಿಮೆಯಾಗಿದೆ.
  • ವಾರ್ಷಿಕ ಜನಸಂಖ್ಯೆ ಬೆಳವಣಿಗೆ ದರ 1962 ರಿಂದ 1965ರ ವರೆಗೆ ಗರಿಷ್ಠ ಶೇ. 2.1 ಇತ್ತು. ಅದು 2020 ರಲ್ಲಿ ಶೇಕಡಾ 1 ಕ್ಕಿಂತ ಕಡಿಮೆಯಾಗಿದೆ.
  • 2050ರ ವೇಳೆಗೆ ಆ ಅಂಕಿಅಂಶವು ಸುಮಾರು ಶೇ. 0.5ಕ್ಕೆ ಕುಸಿಯಬಹುದು. ಏಕೆಂದರೆ ಫಲವತ್ತತೆ ದರಗಳಲ್ಲಿನ ನಿರಂತರ ಕುಸಿತ ಜನಸಂಖ್ಯೆ ಬೆಳವಣಿಗೆ ದರ ಕಡಿಮೆಯಾಗಲು ಕಾರಣವಾಗಿದೆ.

ಚೀನಾವನ್ನು ಹಿಂದಿಕ್ಕಲಿದೆ ಭಾರತ

  • ವಿಶ್ವಸಂಸ್ಥೆಯ ಪ್ರಕಾರ, ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡು ದೇಶಗಳಾದ ಚೀನಾ ಮತ್ತು ಭಾರತ 2023ರ ಹೊತ್ತಿಗೆ ತಮ್ಮ ತಮ್ಮ ಸ್ಥಾನಗಳನ್ನು ಬದಲಾಯಿಸಿಕೊಳ್ಳಲಿವೆ.
  • 4 ಶತಕೋಟಿ ಜನಸಂಖ್ಯೆ ಹೊಂದಿರುವ ಚೀನಾ ಅಂತಿಮವಾಗಿ 2050ರ ವೇಳೆಗೆ 1.3 ಶತಕೋಟಿಗೆ ಕುಸಿಯಲು ಪ್ರಾರಂಭಿಸುತ್ತದೆ ಮತ್ತು ಶತಮಾನದ ಅಂತ್ಯದ ವೇಳೆಗೆ, ಚೀನಿ ಜನಸಂಖ್ಯೆಯು ಕೇವಲ 800 ದಶಲಕ್ಷಕ್ಕೆ ಇಳಿಯಬಹುದು ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.
  • ಭಾರತದ ಜನಸಂಖ್ಯೆಯು ಪ್ರಸ್ತುತ ಚೀನಾಕ್ಕಿಂತ ಸ್ವಲ್ಪ ಕಡಿಮೆ ಇದ್ದು, 2023ರಲ್ಲಿ ಅದರ ಉತ್ತರದ ನೆರೆಯ ದೇಶವನ್ನು ಮೀರಿಸುತ್ತದೆ ಮತ್ತು 2050ರ ವೇಳೆಗೆ 1.7 ಶತಕೋಟಿ ತಲುಪುವ ನಿರೀಕ್ಷೆ ಇದೆ.
  • ವಿಶ್ವಸಂಸ್ಥೆಯ ಪ್ರಕಾರ, ಅಮೆರಿಕ 2050ರ ವೇಳೆಗೆ ಜಗತ್ತಿನ ಮೂರನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಬೆಳೆಯಲಿದೆ.