Published on: November 6, 2021

ಕೊರೊನಾ ನಿರೋಧಕ ಮಾತ್ರೆ

ಕೊರೊನಾ ನಿರೋಧಕ ಮಾತ್ರೆ

ಸುದ್ಧಿಯಲ್ಲಿ ಏಕಿದೆ?  ಕೊರೊನಾ ವೈರಸ್‌ ನಿರೋಧಕ ಮಾತ್ರೆ ಮೊಲ್ನುಪಿರವಿರ್‌ಗೆ ಬ್ರಿಟನ್‌ ಅನುಮತಿ ನೀಡಿದ್ದು, ಜಗತ್ತಿನಲ್ಲೇ ಸೋಂಕಿನ ವಿರುದ್ಧ ಹೋರಾಡಲು ಮಾತ್ರೆಗಳಿಗೆ ಸಮ್ಮತಿ ಸೂಚಿಸಿದ ಮೊದಲ ರಾಷ್ಟ್ರ ಎಂಬ ಖ್ಯಾತಿಗೆ ಭಾಜನವಾಗಿದೆ.

  • ಅಮೆರಿಕ ಮೂಲದ ಮರ್ಕ್ ಹಾಗೂ ರಿಡ್ಜ್‌ಬ್ಯಾಕ್‌ ಬಯೋಥೆರಪ್ಯುಟಿಕ್ಸ್‌ ಕಂಪನಿಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ಕೋವಿಡ್‌ – 19 ನಿರೋಧಕ ಮಾತ್ರೆಗಳಿಗೆ ಬ್ರಿಟನ್‌ನ ಔಷಧಗಳು ಮತ್ತು ಆರೋಗ್ಯ ಉತ್ಪನ್ನಗಳ ನಿಯಂತ್ರಣ ಸಂಸ್ಥೆ (ಎಂಎಚ್‌ಆರ್‌ಎ) ಅನುಮೋದನೆ ನೀಡಿದೆ.
  • ಕೊರೊನಾ ಸೋಂಕು ದೃಢಪಟ್ಟವರು ಹಾಗೂ ಸೋಂಕಿನ ಲಕ್ಷಣ ಕಂಡು ಬಂದವರಿಗೆ ಐದು ದಿನಗಳ ಒಳಗೆ ಚಿಕಿತ್ಸೆಯ ಭಾಗವಾಗಿ ದಿನಕ್ಕೆ ಎರಡು ಬಾರಿ ಈ ಮಾತ್ರೆಗಳನ್ನು ನೀಡಲಾಗುತ್ತದೆ. ಮಾತ್ರೆಗಳನ್ನು ಪಡೆದ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಹಾಗೂ ಆರೋಗ್ಯ ಸ್ಥಿತಿ ಗಂಭೀರವಾಗಿ ಮೃತಪಡುವ ಅಪಾಯ ಇದರಿಂದ ಕಡಿಮೆಯಾಗುತ್ತದೆ