Published on: April 13, 2024

ಕ್ವಾಕ್ವರೇಲಿ ಸೈಮಂಡ್ಸ್(ಕ್ಯೂಎಸ್) ರ‍್ಯಾಂಕಿಂಗ್

ಕ್ವಾಕ್ವರೇಲಿ ಸೈಮಂಡ್ಸ್(ಕ್ಯೂಎಸ್) ರ‍್ಯಾಂಕಿಂಗ್

ಸುದ್ದಿಯಲ್ಲಿ ಏಕಿದೆ? ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಕುರಿತ ‘ಕ್ಯೂಎಸ್ ವರ್ಲ್ಡ್ ಯುನಿವರ್ಸಿಟಿ ರ‍್ಯಾಂಕಿಂಗ್ಸ್ ಬೈಸಬ್ಜೆಕ್ಟ್’(ವಿಷಯಗಳ ಆಧಾರದ ಮೇಲೆ) ಪಟ್ಟಿಯನ್ನು ಪ್ರಕಟಿಸಲಾಗಿದ್ದು, ವ್ಯವಹಾರ ಮತ್ತು ವ್ಯವಸ್ಥಾಪನಾ ಅಧ್ಯಯನಕ್ಕೆ ಸಂಬಂಧಿಸಿದ ಮೊದಲ 25 ಅಗ್ರ ಸಂಸ್ಥೆಗಳಲ್ಲಿ ಐಐಎಂ – ಅಹಮದಾಬಾದ್ ಸ್ಥಾನ ಪಡೆದಿದೆ. ಐಐಎಂ-ಬೆಂಗಳೂರು ಮತ್ತು ಐಐಎಂ-ಕಲ್ಕತ್ತಾ ಅಗ್ರ 50ರಲ್ಲಿ ಸ್ಥಾನ ಪಡೆದಿವೆ.

ಮುಖ್ಯಾಂಶಗಳು

  • ಉನ್ನತ ಶಿಕ್ಷಣ ವ್ಯವಸ್ಥೆಯ ವಿಶ್ಲೇಷಣೆ ನಡೆಸಿ, ರ‍್ಯಾಂಕಿಂಗ್ ನೀಡುವ ಲಂಡನ್ ಮೂಲದ ಕ್ವಾಕ್ವರೇಲಿ ಸೈಮಂಡ್ಸ್(ಕ್ಯೂಎಸ್) ಎಂಬ ಸಂಸ್ಥೆ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ.
  • ಭಾರತೀಯ ವಿಶ್ವವಿದ್ಯಾನಿಲಯಗಳ ಸ್ಥಿತಿ: ಎಲ್ಲಾ ವಿಷಯಗಳಾದ್ಯಂತ 424 ವಿಶ್ವವಿದ್ಯಾಲಯಗಳಲ್ಲಿ ಒಟ್ಟು 69 ಭಾರತೀಯ ವಿಶ್ವವಿದ್ಯಾಲಯಗಳು ಶ್ರೇಯಾಂಕದಲ್ಲಿ ಸ್ಥಾನ ಪಡೆದಿವೆ.
  • ಇದರೊಂದಿಗೆ, ಚೀನಾದ(101 )ನಂತರ ಭಾರತವು ಏಷ್ಯಾದಲ್ಲಿ ಎರಡನೇ ಅತಿ ಹೆಚ್ಚು ಪ್ರತಿನಿಧಿಸುವ ದೇಶವಾಯಿತು.
  • ಭಾರತದಲ್ಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಅತಿ ಹೆಚ್ಚು ರ‍್ಯಾಂಕ್ ಪಡೆದ ವಿಶ್ವವಿದ್ಯಾಲಯ ಸ್ಥಾನ ಪಡೆದಿದೆ. ಅಭಿವೃದ್ಧಿ ಅಧ್ಯಯನಕ್ಕೆ ಸಂಬಂಧಿಸಿದ ಜಾಗತಿಕ ಮಟ್ಟದ ರ‍್ಯಾಂಕಿಂಗ್ನಲ್ಲಿ ಈ ವಿ.ವಿ 20ನೇ ಸ್ಥಾನ ಪಡೆದಿದೆ.
  • ದಂತ ವೈದ್ಯಕೀಯ ಅಧ್ಯಯನಕ್ಕೆ ಸಂಬಂಧಿಸಿ, ಚೆನ್ನೈನ ಸವಿತಾ ವೈದ್ಯಕೀಯ ಮತ್ತು ತಾಂತ್ರಿಕ ವಿಜ್ಞಾನಗಳ ಸಂಸ್ಥೆ(ಎಸ್ಐಎಂಟಿಎಸ್) 24ನೇ ಸ್ಥಾನ ಪಡೆದಿದೆ.

ಸಂಶೋಧನೆ ಕ್ಷೇತ್ರದಲ್ಲಿ ಬೆಳವಣಿಗೆ

  • ‘ಕ್ಯೂಎಸ್’ ರ‍್ಯಾಂಕಿಂಗ್ ವರದಿಯ ಪ್ರಮುಖ ಅಂಶಗಳು ಸಂಶೋಧನೆಗೆ ಸಂಬಂಧಿಸಿ ಭಾರತವು ವಿಶ್ವದಲ್ಲಿಯೇ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತಿದೆ.
  • 2017ರಿಂದ 2022ರ ಅವಧಿಯಲ್ಲಿ ಸಂಶೋಧನೆ ಕ್ಷೇತ್ರದಲ್ಲಿನ ಬೆಳವಣಿಗೆ ಶೇ 54ರಷ್ಟು ಹೆಚ್ಚಳ ದಾಖಲಿಸಿದೆ ಸಂಶೋಧನಾ ವರದಿಗಳ ಪ್ರಕಟಣೆಗೆ ಸಂಬಂಧಿಸಿದಂತೆ, ಭಾರತವು ವಿಶ್ವದಲ್ಲಿಯೇ ನಾಲ್ಕನೇ ಸ್ಥಾನದಲ್ಲಿದೆ.
  • 2017ರಿಂದ 2022ರ ವರೆಗಿನ ಅವಧಿಯಲ್ಲಿ 13 ಲಕ್ಷ ಸಂಶೋಧನಾ ವರದಿಗಳು ಪ್ರಕಟವಾಗಿವೆ. ಚೀನಾ (45 ಲಕ್ಷ) ಹಾಗೂ ಅಮೆರಿಕ (44 ಲಕ್ಷ) ಮೊದಲ ಎರಡು ಸ್ಥಾನಗಳಲ್ಲಿವೆ.