Published on: April 12, 2024

ಚುಟುಕು ಸಮಾಚಾರ : 11 ಏಪ್ರಿಲ್ 2024

ಚುಟುಕು ಸಮಾಚಾರ : 11 ಏಪ್ರಿಲ್ 2024

  • ಕೇಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ) ವನ್ನು ದಕ್ಷಿಣ ಭಾರತದ ಪ್ರಮುಖ ವಾಯುಯಾನ ಕೇಂದ್ರವಾಗಿ(ಪ್ರೀಮಿಯರ್ ಏವಿಯೇಷನ್ ಹಬ್) ಆಗಿ ಅಭಿವೃದ್ಧಿಪಡಿಸಲು ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ಏರ್ ಇಂಡಿಯಾ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ.
  • ಬೆಂಗಳೂರು ಮೂಲದ ದೇಶದ ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪನಿ ವಿಪ್ರೊದ ಹೊಸ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ (ಸಿಇಒ) ಶ್ರೀನಿವಾಸ್ ಅಲಿಯಾಸ್ ಶ್ರೀನಿ ಪಲ್ಲಿಯಾ ನೇಮಕವಾಗಿದ್ದಾರೆ. ಅವರು ಅಮೆರಿಕಾಸ್ 1 (ವಿಪ್ರೊ ಒಡೆತನದ ಕಂಪನಿ) ಎಂಬ ಕಂಪನಿಗೂ ಈ ಮೊದಲು ಸಿಇಒ ಆಗಿದ್ದರು.
    • ವಿಪ್ರೋ: ವಿಪ್ರೋ ಲಿಮಿಟೆಡ್ ಮಾಹಿತಿ ತಂತ್ರಜ್ಞಾನ, ಸಲಹೆಗಾರ ಮತ್ತು ವ್ಯವಹಾರ ಪ್ರಕ್ರಿಯೆ ಸೇವೆಗಳನ್ನು ಒದಗಿಸುವ ಭಾರತೀಯ ಬಹುರಾಷ್ಟ್ರೀಯ ನಿಗಮವಾಗಿದೆ.
    • ಸ್ಥಾಪಕ: ಎಂ.ಎಚ್. ಹಶಮ್ ಪ್ರೇಮ್ಜಿ
    • ಮಾಲೀಕರು: ಅಜೀಂ ಪ್ರೇಮ್ಜಿ
    • ಕೇಂದ್ರ ಕಛೇರಿ: ಬೆಂಗಳೂರು
    • ಸ್ಥಾಪನೆ: 29 ಡಿಸೆಂಬರ್ 1945, ಭಾರತ
    • ಹಿಂದೆ: ವೆಸ್ಟರ್ನ್ ಇಂಡಿಯಾ ವೆಜಿಟೇಬಲ್ ಪ್ರಾಡಕ್ಟ್ಸ್ ಲಿಮಿಟೆಡ್ (1945-1977); ವಿಪ್ರೋ ಪ್ರಾಡಕ್ಟ್ಸ್ ಲಿಮಿಟೆಡ್ (1977-1982)
  • ಜಲವಿದ್ಯುತ್ ಉತ್ಪಾದನೆ ಮತ್ತು ಪ್ರಸರಣದಲ್ಲಿ ತೊಡಗಿರುವ ಭಾರತ ಸರ್ಕಾರ ಮತ್ತು ಹಿಮಾಚಲ ಪ್ರದೇಶ ಸರ್ಕಾರದ ಜಂಟಿ ಸಾರ್ವಜನಿಕ ವಲಯದ SJVN ಲಿಮಿಟೆಡ್, ನಿರ್ಮಾಣ ಉದ್ಯಮ ಅಭಿವೃದ್ಧಿ ಮಂಡಳಿ(CIDC) ಯು ಸ್ಥಾಪಿಸಿದ 15 ನೇ CIDC ವಿಶ್ವಕರ್ಮ ಪ್ರಶಸ್ತಿಗಳು 2024 ರಲ್ಲಿ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿದೆ. ಸತ್ಲುಜ್ ಜಲ ವಿದ್ಯುತ್ ನಿಗಮ್ ಎಂದು ಕರೆಯಲ್ಪಡುವ SJVN ಲಿಮಿಟೆಡ್ಗೆ ‘ಸಾಮಾಜಿಕ ಅಭಿವೃದ್ಧಿ ಮತ್ತು ಪ್ರಭಾವವನ್ನು ಸೃಷ್ಟಿಸಲು ಸಾಧನೆ ಪ್ರಶಸ್ತಿ’ ಮತ್ತು ‘ಪ್ರಗತಿ ಟ್ರೋಫಿಯಲ್ಲಿ CIDC ಪಾಲುದಾರರು’ ಪ್ರಶಸ್ತಿಯನ್ನು ನೀಡಲಾಗಿದೆ.
  • ಇತ್ತೀಚೆಗೆ, ಕೊಡೈಕೆನಾಲ್ ಸೌರ ವೀಕ್ಷಣಾಲಯವು ತನ್ನ 125 ನೇ ವಾರ್ಷಿಕೋತ್ಸವವನ್ನು ಆಚರಿಸಿತು. ಸೌರ ಚಟುವಟಿಕೆಯ ಬಗ್ಗೆ ನಮ್ಮ ತಿಳುವಳಿಕೆಯನ್ನು ಮತ್ತು ಭೂಮಿಯ ಹವಾಮಾನ ಮತ್ತು ಬಾಹ್ಯಾಕಾಶ ಹವಾಮಾನದ ಮೇಲೆ ಅದರ ಪ್ರಭಾವವನ್ನು ಮುಂದುವರೆಸುವಲ್ಲಿ ಇದು ನಿರ್ಣಾಯಕ ಪಾತ್ರವನ್ನು ವಹಿಸಿದೆ.ಕೊಡೈಕೆನಾಲ್ ಸೌರ ವೀಕ್ಷಣಾಲಯ(KoSO): ಒಡೆತನ ಮತ್ತು ನಿರ್ವಹಣೆ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್, ಸ್ಥಾಪನೆ: ಇದನ್ನು 1899 ರಲ್ಲಿ ಸ್ಥಾಪಿಸಲಾಯಿತು. ಇದು ಪಳನಿ ಬೆಟ್ಟಗಳ ದಕ್ಷಿಣ ತುದಿಯಲ್ಲಿದೆ.
  • ಐರ್ಲೆಂಡ್ ದೇಶದ ನೂತನ ಪ್ರಧಾನಿಯಾಗಿ ಸೈಮನ್ ಹ್ಯಾರಿಸ್ ಆಯ್ಕೆಯಾಗಿದ್ದಾರೆ. ಹ್ಯಾರಿಸ್ ಐರ್ಲೆಂಡ್ ದೇಶದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿಯಾಗಿದ್ದಾರೆ. ಪ್ರಧಾನಿ ಲಿಯೊವರಾಡ್ಕರ್ ಇತ್ತೀಚೆಗೆ ದಿಢೀರ್ ಪದತ್ಯಾಗ ಮಾಡಿದ್ದರು. ಆರೋಗ್ಯ ಮತ್ತು ಉನ್ನತ ಶಿಕ್ಷಣ ಇಲಾಖೆಯ ಸಚಿವರಾಗಿ ಕೆಲಸ ಮಾಡಿರುವ ಸೈಮನ್, ಕೋ ವಿಡ್ ಸಮಯದಲ್ಲಿ ಉತ್ತಮ ಕೆಲಸಮಾಡಿದ್ದರು.
  • ಸೃಷ್ಟಿಯ ಮೂಲ ಧಾತು ಹಿಗ್ಸ್ ಬೋಸಾನ್(ದೇವ ಕಣ) ಅನ್ನು ಪತ್ತೆ ಮಾಡಿದ ನೋಬೆಲ್ ಪುರಸ್ಕೃತ ವಿಜ್ಞಾನಿ ಪೀಟರ್ ಹಿಗ್ಸ್ ಸ್ಕಾಟ್ಲ್ಯಾಂಡ್ನ ಎಡಿನ್ಬರ್ಗ್ ನಿವಾಸದಲಿ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ಬಿಗ್ ಬ್ಯಾಂಗ್ ನಂತರ ಸೃಷ್ಟಿಯ ಮೂಲ ಎನ್ನಲಾದ ಹಿಗ್ಸ್ ಬಾಸನ್(ದೈ ವ ಕಣ) ಅಸ್ತಿತ್ವವನ್ನು ಅವರು ಪತ್ತೆ ಮಾಡಿದ್ದರು. ಈ `ಹಿಗ್ಸ್ ಬೋ ಸಾನ್ ಕಣದ ಅಸ್ತಿತ್ವವನ್ನು ಬ್ರಿಟನ್ ವಿಜ್ಞಾನಿ ಪೀಟರ್ ಹಿಗ್ಸ್ ಸೇರಿದಂತೆ ಇತರ ಆರು ಭೌತವಿಜ್ಞಾನಿಗಳು 1964ರಲ್ಲಿ ಮೊದಲ ಬಾರಿ ಸೈದ್ಧಾಂತಿಕವಾಗಿ ನಿರೂಪಿಸಿದ್ದರು. ಕಣ ಭೌತಶಾಸ್ತ್ರದಲ್ಲಿ ಭಾರತೀಯ ವಿಜ್ಞಾನಿ ಸತ್ಯೇಂದ್ರನಾಥ್ ಬೋಸ್ ಹಾಗೂ ಐನ್ಸ್ಟೀನ್ ಅವರು ಹಿಂದೆ ಮಂಡಿಸಿದ್ದ ಸಿದ್ಧಾಂತ ಪೀಟರ್ ಹಿಗ್ಸ್ ಅವರಿಗೆ ಪ್ರೇರಣೆಯಾಗಿತ್ತು. 1980ರಲ್ಲಿ ಮೊದಲ ಬಾರಿ ಪ್ರಾಯೋಗಿಕವಾಗಿ ಈ ಕಣದ ಇರುವಿಕೆಯನ್ನು ಸಾಬೀತುಪಡಿಸುವ ಯತ್ನ ಷಿಕಾಗೊದಲ್ಲಿ ನಡೆದಿತ್ತು. 2008ರ ನಂತರ `ಸಿಇಆರ್ಎನ್~ ಪ್ರಯೋಗಾಲಯದಲ್ಲಿ ಈ ಪ್ರಯತ್ನ ಮುಂದುವರಿಯಿತು