Published on: October 7, 2023

ಗೃಹ ಆರೋಗ್ಯ ಮತ್ತು ಆಶಾಕಿರಣ ಯೋಜನೆ

ಗೃಹ ಆರೋಗ್ಯ ಮತ್ತು ಆಶಾಕಿರಣ ಯೋಜನೆ

ಸುದ್ದಿಯಲ್ಲಿ ಏಕಿದೆ? ಜನರ ಆರೋಗ್ಯದ ಹಿತದೃಷ್ಟಿಯಿಂದ ಕರ್ನಾಟಕ  ರಾಜ್ಯದಲ್ಲಿ ಗೃಹ ಆರೋಗ್ಯ  ಮತ್ತು ಆಶಾಕಿರಣ ಎಂಬ ಎರಡು ಹೊಸ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ.

ಮುಖ್ಯಾಂಶಗಳು

  • ಸಾಂಕ್ರಾಮಿಕವಲ್ಲದ ರೋಗಗಳ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ಈ ಯೋಜನೆ ಜಾರಿಮಾಡಲಾಗುತ್ತಿದೆ.
  • ಮೊದಲ ಹಂತದಲ್ಲಿ ಎರಡೂ ಯೋಜನೆಗಳಿಗೆ ರಾಜ್ಯದ 16 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ.
  • ವೆಚ್ಚ:82 ಕೋಟಿ ರೂಪಾಯಿ
  • ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದಿಂದ ಔಷಧ ಖರೀದಿಸಿ, ವಿತರಿಸಲಾಗುವುದು.

ಗೃಹ ಆರೋಗ್ಯ’ ಯೋಜನೆ

  • ಯೋಜನೆಯಡಿ ಎಂಟು ಜಿಲ್ಲೆಗಳಲ್ಲಿ ಪ್ರತಿ ಮನೆಗೆ ಭೇಟಿ ನೀಡುವ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಪರೀಕ್ಷೆ ಮಾಡಲಿದ್ದಾರೆ. ಸಮಸ್ಯೆ ಎದುರಿಸುತ್ತಿರುವವರಿಗೆ ಯೋಜನೆಯಡಿ ಮೂರು ತಿಂಗಳಿಗೆ ಆಗುವಷ್ಟು ಮಾತ್ರೆಗಳನ್ನು ಒಳಗೊಂಡ ಔಷಧ ಪೆಟ್ಟಿಗೆ ವಿತರಿಸಲು ಆರೋಗ್ಯ ಇಲಾಖೆ ಯೋಜಿಸುತ್ತದೆ. ಮಧುಮೇಹ ಹಾಗೂ ಅಧಿಕ ರಕ್ತದೊತ್ತಡಕ್ಕೆ ತಲಾ ಮೂರು ಮಾದರಿಯ ಮಾತ್ರೆಗಳನ್ನು ಸರ್ಕಾರ ಗುರುತಿಸಿದೆ. ಆ ಮಾತ್ರೆಗಳನ್ನು ಮಾತ್ರ ನೀಡಲಾಗುವುದು.
  • ಯಾವೆಲ್ಲ ಜಿಲ್ಲೆಗಳಲ್ಲಿ ಜಾರಿ? ರಾಮನಗರ, ತುಮಕೂರು, ಬೆಳಗಾವಿ, ಗದಗ, ಬಳ್ಳಾರಿ, ಯಾದಗಿರಿ, ದಕ್ಷಿಣ ಕನ್ನಡ, ಮೈಸೂರು

ಆಶಾಕಿರಣ

  • ಯೋಜನೆಯಡಿ ಎಂಟು ಜಿಲ್ಲೆಗಳಲ್ಲಿ ಪ್ರತಿ ಮನೆಗೆ ಭೇಟಿ ನೀಡುವ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮನೆ ಸದಸ್ಯರ ಕಣ್ಣು ತಪಾಸಣೆ ನಡೆಸಲಿದ್ದಾರೆ. ಈ ಎಲ್ಲ ತಪಾಸಣೆಗಳು ಉಚಿತವಾಗಿರಲಿವೆ

ಮನೆ ಮನೆ ಆರೋಗ್ಯ ತಪಾಸಣೆ

  • ಮನೆ ಮನೆ ಆರೋಗ್ಯ ತಪಾಸಣೆ ವೇಳೆ ಸಮಸ್ಯೆ ದೃಢಪಟ್ಟಲ್ಲಿ ಹಾಗೂ ಈಗಾಗಲೇ ಸಮಸ್ಯೆ ಎದುರಿಸುತ್ತಿರುವವರಿಗೆ ಈ ಪೆಟ್ಟಿಗೆಗಳನ್ನು ಉಚಿತವಾಗಿ ವಿತರಿಸಲಾಗುವುದು.
  • ತಪಾಸಣಾ ತಂಡವು ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ತಲಾ 20 ಮನೆಗಳಿಗೆ ಭೇಟಿ ನೀಡಲಿದೆ. ಮನೆ ಮನೆ ಭೇಟಿ ವೇಳೆ ಬಾಯಿ, ಸ್ತನ ಹಾಗೂ ಗರ್ಭ ಕಂಠದ ಕ್ಯಾನ್ಸರ್ ಪತ್ತೆಗೂ ತಪಾಸಣೆ ನಡೆಸಲಾಗುವುದು. ಕ್ಯಾನ್ಸರ್ ದೃಢಪಟ್ಟಲ್ಲಿ ಚಿಕಿತ್ಸೆಗೆ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತದೆ. 30 ವರ್ಷ ಮೇಲ್ಪಟ್ಟವರು ಈ ಮಾತ್ರೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ

ತಪಾಸಣೆ ಬಗ್ಗೆ ತರಬೇತಿ:

  • ಮನೆ ಮನೆ ಆರೋಗ್ಯ ತಪಾಸಣೆಗೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯಾ ಧಿಕಾರಿ (ಡಿಎಚ್ಒ), ಜಿಲ್ಲಾ ಕಣ್ಗಾವಲು
  • ಅಧಿಕಾರಿಗಳಿಗೆ (ಡಿಎಸ್ಒ) ರಾಷ್ಟ್ರೀಯ ಆರೋಗ್ಯ ಅಭಿಯಾನದ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವ ದಲ್ಲಿ ತರಬೇತಿ ನೀಡಲಾಗುತ್ತದೆ.
  • ಇವರು ಜಿಲ್ಲೆಗಳಲ್ಲಿ ಸಭೆ ನಡೆಸಿ, ವೈದ್ಯಾಧಿಕಾರಿಗಳಿಗೆ ತರಬೇತಿಕೊಡಬೇಕಾಗುತ್ತದೆ. ಅವರು ಪ್ರಾಥಮಿಕ ಆರೋಗ್ಯ ಕೇಂದ್ರ ಗಳಡಿ ಮುಖ್ಯ ಆರೋಗ್ಯಾಧಿಕಾರಿ, ಸಮುದಾಯ ಆರೋಗ್ಯಾಧಿಕಾರಿ, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕರಿಗೆ ತರಬೇತಿ ನೀಡುತ್ತಾರೆ.

ಉದ್ದೇಶ

  • ‘ಅಧಿಕ ರಕ್ತದೊತ್ತಡ, ಮಧುಮೇಹ, ಕಿಡ್ನಿ ವೈಫಲ್ಯ, ಕ್ಯಾನ್ಸರ್‌ ಮುಂತಾದ ರೋಗ ಬಂದಿದ್ದರೂ ಲಕ್ಷಣಗಳು ಕಾಣಿಸಲ್ಲ. ಶೀಘ್ರ ಪತ್ತೆ ಮಾಡಿದರೆ ಮುಂದಾಗುವ ಅಪಾಯ ತಪ್ಪಿಸಬಹುದು.
  • ಪ್ರಾರಂಭಿಕ ಹಂತದಲ್ಲಿಯೇ ರೋಗ ಪತ್ತೆ ಮಾಡುವುದರಿಂದ ಮುಂದಾಗುವ ಅಪಾಯ ತಡೆಯಲು ಸಾಧ್ಯ