Published on: September 27, 2021

ಚಾಮರಾಜನಗರ ಜಿಲ್ಲೆಯಲ್ಲಿ ಮೂರು ಹುಲಿ ಅಭಯಾರಣ್ಯಗಳು!

ಚಾಮರಾಜನಗರ ಜಿಲ್ಲೆಯಲ್ಲಿ ಮೂರು ಹುಲಿ ಅಭಯಾರಣ್ಯಗಳು!

ಸುದ್ಧಿಯಲ್ಲಿ ಏಕಿದೆ?   ಚಾಮರಾಜನಗರವು ಮೂರು ಹುಲಿ ಅಭಯಾರಣ್ಯಗಳನ್ನು ಹೊಂದಿರುವ ದೇಶದ ಮೊದಲ ಜಿಲ್ಲೆಯಾಗಲಿದೆ.

  • ಸುಮಾರು ಶೇಕಡಾ 51 ರಷ್ಟು ಅರಣ್ಯವನ್ನು ಹೊಂದಿರುವ ಇದು ಈಗಾಗಲೇ ಬಂಡೀಪುರ ಮತ್ತು ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯದ ವನ್ಯಜೀವಿ ಧಾಮಗಳನ್ನು ಹೊಂದಿದೆ. ಇದಕ್ಕೆ ಎಂಎಂ ಹಿಲ್ಸ್ ಟೈಗರ್ ಪ್ರಾಜೆಕ್ಟ್ ಸೇರ್ಪಡೆಯಾಗಿದೆ. ಇದು 200 ಹುಲಿಗಳನ್ನು ಹೊಂದಿದೆ.
  • ಹೊಸ ಮೀಸಲು ಅರಣ್ಯ ಪ್ರದೇಶ ಗುಡ್ಡಗಾಡು ಪ್ರದೇಶ, ಶ್ರೀಮಂತ ಜೀವ ವೈವಿಧ್ಯತೆ ಮತ್ತು ಪಾಲಾರ್ ಮತ್ತು ಎಂಎಂ ಬೆಟ್ಟಗಳಲ್ಲಿ ಅಡೆತಡೆಯಿಲ್ಲದ ಪ್ರದೇಶಗಳನ್ನು ಹೊಂದಿದೆ. ಇದು 1,000 ಚದರ ಕಿಮೀ ಉದ್ದಕ್ಕೂ ಹರಡಿಕೊಂಡಿದೆ.
  • ಇನ್ನು ಕೆಲ ದಿನಗಳಲ್ಲಿ ಸರ್ಕಾರ ಮಲೆ ಮಹದೇಶ್ವರ ಬೆಟ್ಟಗಳನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಿದ್ದು, ಹೆಚ್ಚುವರಿಯಾಗಿ 10 ಕೋಟಿ ರೂ. ಅನುದಾನವನ್ನು ನೀಡಲಿದೆ.