Published on: January 12, 2024

ಚುಟುಕು ಸಮಾಚಾರ : 11 ಜನವರಿ 2024

ಚುಟುಕು ಸಮಾಚಾರ : 11 ಜನವರಿ 2024

  • UNESCO ವಿಶ್ವ ಪರಂಪರೆ ಸಮಿತಿಯ 46 ನೇ ಅಧಿವೇಶನದ ಅಧ್ಯಕ್ಷತೆ ಮತ್ತು ಆತಿಥ್ಯ ವಹಿಸಲು ಭಾರತವನ್ನು ಮೊದಲ ಬಾರಿಗೆ ಆಯ್ಕೆ ಮಾಡಲಾಗಿದೆ. UNESCO ವಿಶ್ವ ಪರಂಪರೆ ಸಮಿತಿಯ 46 ನೇ ಅಧಿವೇಶನವು 31 ಜುಲೈ 2024 ರಲ್ಲಿ ನವದೆಹಲಿಯಲ್ಲಿ ನಡೆಯಲಿದೆ.
  • ಇತ್ತೀಚೆಗೆ, 2002 ರ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಏಳು ಸದಸ್ಯರ ಹತ್ಯೆಯಲ್ಲಿ ಭಾಗಿಯಾಗಿರುವ 11 ಅಪರಾಧಿಗಳನ್ನು ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.