Published on: April 16, 2024

ಚುಟುಕು ಸಮಾಚಾರ : 16 ಏಪ್ರಿಲ್ 2024

ಚುಟುಕು ಸಮಾಚಾರ : 16 ಏಪ್ರಿಲ್ 2024

  • ಇತ್ತೀಚೆಗೆ, ಭಾರತದ ಸುಪ್ರೀಂ ಕೋರ್ಟ್ ತನ್ನ ಇತ್ತೀಚಿನ ತೀರ್ಪಿನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಯು ತಾನು ಹೊಂದಿರುವ ಪ್ರತಿಯೊಂದು ಚರ ಆಸ್ತಿಯನ್ನು ಘೋಷಿಸುವ ಅಗತ್ಯವಿಲ್ಲ ಎಂದು ತೀರ್ಪು ನೀಡಿದೆ. ಅಭ್ಯರ್ಥಿಗಳು ಕೂಡ ಖಾಸಗಿ ಹಕ್ಕನ್ನು ಹೊಂದಿದ್ದಾರೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.
  • ಭಾರತೀಯ ಸೇನೆಯ ಶುತ್ರುಪಾಳಯದ ಟ್ಯಾಂಕರ್ ಗಳನ್ನು ಹೊಡೆದುರುಳಿಸುವ ಕ್ಷಿಪಣಿ ಪರೀಕ್ಷೆ ನಡೆಸಲಾಗಿದೆ. ಯುದ್ಧಭೂಮಿಯಲ್ಲಿ ಯೋಧರು ಸುಲಭವಾಗಿ ಈ ಕ್ಷಿಪಣಿ (ಎಮ್ಪಿಎಟಿಜಿಎಮ್) ಯನ್ನು ಹೊತ್ತೊಯ್ಯಬಹುದಾಗಿದ್ದು, ಟ್ರೈಪಾಡ್ ಉಡಾವಣಾ ವ್ಯವಸ್ಥೆಯ ಸಹಾಯದಿಂದ ಉಡಾವಣೆ ಮಾಡಬಹುದಾಗಿದೆ. ಈ ಶಸ್ತ್ರ ವ್ಯವಸ್ಥೆಯನ್ನು ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಸೇಶನ್ (DRDO) ದೇಶೀಯವಾಗಿ ವಿನ್ಯಾಸಗೊಳಿಸಿದೆ. ರಾಜಸ್ಥಾನದ ಪೋಖ್ರಾನ್ ಫೀಲ್ಡ್ ಫೈರಿಂಗ್ ರೇಂಜ್ನಲ್ಲಿ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಲಾಯಿತು.
  • ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (AGEL) ಇತ್ತೀಚೆಗೆ ಗುಜರಾತ್ನ ಖಾವ್ಡಾ ಪ್ರದೇಶದಲ್ಲಿ ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಉದ್ಯಾನವನ್ನು ಸ್ಥಾಪಿಸಿದೆ. ಇದು ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಉದ್ಯಾನವಾಗಿದೆ. ಇದು ಗುಜರಾತ್ನ ಕಚ್ ಪ್ರದೇಶದ ಖಾವ್ಡಾದಲ್ಲಿ ನೆಲೆಗೊಂಡಿದೆ.