Published on: March 23, 2023

ಚುಟುಕು ಸಮಾಚಾರ – 23 ಮಾರ್ಚ್ 2023

ಚುಟುಕು ಸಮಾಚಾರ – 23 ಮಾರ್ಚ್ 2023

  • ದೇಶದಲ್ಲಿ ಮೊದಲ ಮಿಥೆನಾಲ್ ಮಿಶ್ರಿತ ಇಂಧನ ಆಧಾರಿತ ಬಸ್ಗಳ ಸಂಚಾರವನ್ನು ಕರ್ನಾಟಕದ ಬಿಎಂಟಿಸಿ ಆರಂಭಿಸಿದೆ. ಮಿಥೆನಾಲ್ ಮಿಶ್ರಿತ ಇಂಧನವನ್ನು(ಡೀಸೆಲ್) ಭಾರತೀಯ ತೈಲ ನಿಗಮ(ಐಒಸಿ) ಪೂರೈಸಲಿದೆ’. ಸಹಯೋಗ: ಅಶೋಕ್ ಲೆಲ್ಯಾಂ ಡ್ ಸಹಯೋಗದಲ್ಲಿ ಪ್ರಯೋಗವನ್ನು ಬಿಎಂಟಿಸಿ ಮಾಡಿದೆ.
  • ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಹೊಸದಾಗಿ ಬೆಂಗಳೂರಿನಿಂದ ರಾಜ್ಯದ ಐದು ನಗರಗಳಿಗೆ ಇವಿ ಪವರ್ ಪ್ಲಸ್ ಎಂಬ ಎಲೆಕ್ಟ್ರಿಕ್ ಬಸ್ ಸೇವೆಯನ್ನ ಆರಂಭಿಸಿದೆ. ಕೆಎಸ್ಆರ್ಟಿಸಿ ಭಾರತ ಸರ್ಕಾರದ “ಮೇಕ್ ಇನ್ ಇಂಡಿಯಾ” ವಿದ್ಯುತ್ ಬಸ್ ಫೇಮ್-2 ಯೋಜನೆ ಅಡಿಯಲ್ಲಿ 50 ಅಂತರ ನಗರ ಹವಾ ನಿಯಂತ್ರಿತ ವಿದ್ಯುತ್ ಚಾಲಿತ ಬಸ್ಸುಗಳನ್ನು ಕಾರ್ಯಾಚರಣೆಗೊಳಿಸಲು ಯೋಜಿಸಿದೆ. ಕಳೆದ ಕೆಲವು ದಿನಗಳ ಹಿಂದೆ ಯೂರೋಪಿಯನ್ ವಿನ್ಯಾಸದ ವೋಲ್ವೋ-9600s “ಅಂಬಾರಿ ಉತ್ಸವ” ವಾಹನವನ್ನು ಸಾರ್ವಜನಿಕ ಬಳಕೆಗಾಗಿ ಲೋಕಾರ್ಪಣೆ ಮಾಡಲಾಗಿತ್ತು.
  • ಬಾಡಿಗೆ ತಾಯಿ ವೈದ್ಯಕೀಯ ಪದ್ಧತಿಯನ್ನು ಈಗ ಹಸುಗಳ ಮೇಲೆಯೂ ಪ್ರಯೋಗಿಸಲಾಗಿದ್ದು, ಉತ್ತರ ಪ್ರದೇಶ ಹಸುಗಳಲ್ಲಿ ಬಾಡಿಗೆ ತಾಯ್ತನದ ಸಂಶೋಧನೆಯಿಂದ 26 ಆಕಳು ಕರುಗಳು ಜನ್ಮ ನೀಡಿವೆ.
  • ಸ್ವಾತಂತ್ರ್ಯ ಹೋರಾಟಗಾರರು, ದೇಶಭಕ್ತರಾದ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರನ್ನು ಬ್ರಿಟಿಷರು ನೇಣಿಗೇರಿಸಿದ ದಿನವಾದ ಮಾರ್ಚ್ 23ರಂದು ಅವರ ತ್ಯಾಗ ಬಲಿದಾನದ ಸ್ಮರಣೆಗಾಗಿ ‘ಬಲಿದಾನ ದಿವಸ’ (ಹುತ್ಮಾತರ ದಿನ) ಆಚರಿಸಲಾಗುತ್ತದೆ.
  • ವಿಶ್ವದ 10 ರಾಷ್ಟ್ರಗಳಲ್ಲಿರುವ ಅನಿವಾಸಿ ಭಾರತೀಯರು, ತಾವು ಬಳಸುವ ಎನ್ಆರ್ ಇ (Non-Resident External account) ಅಥವಾ ಎನ್ ಆರ್ ಒ (Non-Resident Ordinary account) ಮಾದರಿಯ ಬ್ಯಾಂಕ್ ಖಾತೆಗಳಿಗೆ ಜೋಡಿಸಲ್ಪಟ್ಟಿರುವ ಆ ದೇಶಗಳ ಮೊಬೈಲ್ ನಂಬರ್ ಗಳು ಅಥವಾ ಅಂತಾರಾಷ್ಟ್ರೀಯ ಮೊಬೈಲ್ ನಂಬರ್ ಗಳನ್ನು ಬಳಸಿ ಯುಪಿಐ ಅಡಿಯಲ್ಲಿ ನೋಂದಾಯಿಸಿಕೊಳ್ಳಬಹುದು. ಆ ನಂಬರ್ ಗಳನ್ನು ಬಳಸಿಯೇ ಹಣದ ವಹಿವಾಟು ನಡೆಸಬಹುದು ಎಂದು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ ಪಿಸಿಐ) ಸಂಸ್ಥೆಯು ಪ್ರಕಟಿಸಿದೆ.ಯುಎಇ, ಸಿಂಗಾಪುರ, ಆಸ್ಟ್ರೇಲಿಯಾ, ಕೆನಡಾ, ಹಾಂಕ್ ಕಾಂಗ್, ಒಮನ್, ಕತಾರ್, ಯುಎಸ್ಎ, ಸೌದಿ, ಯುನೈಟೆಡ್ ಕಿಂಗ್ ಡಮ್ ರಾಷ್ಟ್ರಗಳಲ್ಲಿರುವ ಅನಿವಾಸಿ ಭಾರತೀಯರಿಗೆ ಏ. 30ರಿಂದ ಈ ಸೌಲಭ್ಯ ಸಿಗಲಿದೆ.
  • ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವನ್ನು ಆಚರಿಸಲಾಗುತ್ತದೆ. ಥೀಮ್: ಈ ವರ್ಷ ವಿಶ್ವ ಜಲ ದಿನದ ವಿಷಯವು ‘ನೀರು ಮತ್ತು ನೈರ್ಮಲ್ಯ ಬಿಕ್ಕಟ್ಟನ್ನು ಪರಿಹರಿಸಲು ಬದಲಾವಣೆಯನ್ನು ವೇಗಗೊಳಿಸುವುದು’. ಉದ್ದೇಶ: ನೀರಿನ ಮಹತ್ವವನ್ನು ಜಗತ್ತಿಗೆ ತಿಳಿಸಲು ಮತ್ತು ಜಾಗತಿಕ ನೀರಿನ ಬಿಕ್ಕಟ್ಟಿನ ಬಗ್ಗೆ ಜಾಗೃತಿ ಮೂಡಿಸುವುದು.
  • “ನೀರಿಗಾಗಿ ಪಾಲುದಾರಿಕೆ ಮತ್ತು ಸಹಕಾರ” ವರದಿಯನ್ನು ವಿಶ್ವಸಂಸ್ಥೆ 2023 ಜಲ ಸಮ್ಮೇಳನದಲ್ಲಿ ಬಿಡುಗಡೆ ಮಾಡಲಾಗಿದೆ. ಏಷ್ಯಾದಲ್ಲಿ ಶೇ 80ರಷ್ಟು ಜನರು ಅಂತರ್ಜಲ ತೀರಾ ಕಡಿಮೆ ಇರುವ ಪ್ರದೇಶಗಳಲ್ಲಿ ವಾಸವಾಗಿದ್ದಾರೆ. ಮುಖ್ಯವಾಗಿ ಈಶಾನ್ಯ ಚೀನಾ, ಭಾರತ ಮತ್ತು ಪಾಕಿಸ್ತಾನಗಳಲ್ಲಿ ಅಂತರ್ಜಲ ಸರಿಯಾಗಿ ಲಭ್ಯವಾಗುತ್ತಿಲ್ಲ.