Published on: September 27, 2023

ಚುಟುಕು ಸಮಾಚಾರ : 25-26 ಸೆಪ್ಟೆಂಬರ್ 2023

ಚುಟುಕು ಸಮಾಚಾರ : 25-26 ಸೆಪ್ಟೆಂಬರ್ 2023

  • ಸಿಎಂ ಸಿದ್ದರಾಮಯ್ಯ ಅವರು ‘ನಮ್ಮ ಸ್ಮಾರಕ’ ಡಿಜಿಟಲ್ ವೇದಿಕೆ ಅನಾವರಣಗೊಳಿದರು. ಕರ್ನಾಟಕದಲ್ಲಿ ಸ್ಮಾರಕ ದತ್ತು ಹಾಗೂ ಸಂರಕ್ಷಣೆಗೆ ಸಾರ್ವಜನಿಕ ಸಹಭಾಗಿತ್ವವನ್ನು ಪ್ರೋತ್ಸಾಹಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.
  • ಸಾರ್ವಜನಿಕರು ಮತ್ತು ಶಾಸಕರು ಹೊತ್ತು ತರುವ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಜನಸ್ನೇಹಿ ಆಡಳಿತಕ್ಕೆ ಒತ್ತು ನೀಡಲು ಸರ್ಕಾರದ ಪ್ರಜಾಧ್ವನಿ ಆ್ಯಪ್ ಅನ್ನು ಸಿದ್ಧಪಡಿಸಿದೆ.ಜನತಾ ದರ್ಶನದಲ್ಲಿ ಬರುವ ಎಲ್ಲ ಅಹವಾಲುಗಳಿಗೆ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯ ಮೂಲಕವೇ ಪರಿಹಾರ ನೀಡುವುದು, ಅರ್ಜಿದಾರರಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳುವುದು ಒಟ್ಟಾರೆ ಉದ್ದೇಶ
  • ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ತೇಲುವ ಸೌರ ವಿದ್ಯುತ್ ಉತ್ಪಾದನಾ ಘಟಕ (ಸೋಲಾರ್ ಪಾರ್ಕ್) ಸ್ಥಾಪನೆಗೆ ಕರ್ನಾಟಕ ವಿದ್ಯುತ್ ನಿಗಮ (ಕೆ.ಪಿ.ಸಿ.ಎಲ್) ನಿರ್ಧರಿಸಿದೆ. ಯೋಜನೆ ಕಾರ್ಯರೂಪಕ್ಕೆ ಬಂದರೆ ರಾಜ್ಯದ ಮೊದಲ ತೇಲುವ ಸೋಲಾರ್ ಪಾರ್ಕ್ ಇದಾಗಲಿದೆ.
  • 18 ನೇ ಪೂರ್ವ ಏಷ್ಯಾ ಶೃಂಗಸಭೆಯು ಇಂಡೋನೇಷಿಯಾದ ರಾಜಧಾನಿ ಜಕಾರ್ತಾದಲ್ಲಿ ನಡೆಯಿತು. ಎಲ್ಲಿ ಆಸಿಯಾನ್ ಸಮ್ಮೇಳನ ಆಗುತ್ತದೆಯೋ ಅಲ್ಲಿಯೇ ಪೂರ್ವ ಏಷ್ಯಾ ಸಮ್ಮೇಳನ ನಡೆಯುತ್ತದೆ ಅಧ್ಯಕ್ಷತೆ : ಇಂಡೋನೇಷಿಯಾ ಅಧ್ಯಕ್ಷರು ಜೊಕೊ ವಿಡೋಡೋ ವಹಿಸಿದ್ದರು. ಸಮಾವೇಶದ ಅಗತ್ಯತ್ಯೆ ಇಂಡೋ ಫೆಸಿಫಿಕ್ ವಲಯದಲ್ಲಿ ಶಾಂತಿಯನ್ನು ತರುವುದು
  • ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯ ಕಾರ್ಪೊರೇಟ್ ಕೊಲ್ಯಾಟರಲ್ (Corporate Collateral) ರಾಷ್ಟ್ರೀಯ ಪ್ರಶಸ್ತಿಗಳ 9 ವಿಭಾಗಗಳಲ್ಲಿ ಕೆಎಸ್ಆರ್ಟಿಸಿ, 4 ವಿಭಾಗಗಳಲ್ಲಿ ಬಿಎಂಟಿಸಿ ಆಯ್ಕೆಯಾಗಿದ್ದು, ನವದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಕೆಎಸ್ಆರ್ಟಿಸಿ ವರ್ಷದ ಅತ್ಯುತ್ತಮ ಗ್ರಾಹಕ ಸ್ನೇಹಿ ಸಂಸ್ಥೆ, ಅತ್ಯುತ್ತಮ ವರ್ಷದ ಸೇವಾ ಉಪಕ್ರಮ, ಸಾಂಸ್ಥಿಕ ಹಾಗೂ ವ್ಯಾವಹಾರಿಕ ಸಂಪರ್ಕ ಉಪಕ್ರಮ ವಿಭಾಗಗಳಲ್ಲಿ ಡೈಮಂಡ್ ಪ್ರಶಸ್ತಿ, ಗ್ರಾಹಕ ಸೇವೆಯಲ್ಲಿ ಅತ್ಯುತ್ತಮ ತಾಂತ್ರಿಕತೆ ಬಳಕೆ, ವಿವಿಧತೆ ಹಾಗೂ ಸಮಾನತೆಯ ಉತ್ತಮ ಉಪಕ್ರಮ, ಅತ್ಯುತ್ತಮ ವರ್ಷದ ಉಪಕ್ರಮ ಉತ್ಪನ್ನಗಳಲ್ಲಿ ಬೆಳ್ಳಿ ಪ್ರಶಸ್ತಿ, ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮ, ಸಾರ್ವಜನಿಕ ಸಂಪರ್ಕ ಅಧ್ಯಯನಗಳಿಗೆ ಕಂಚಿನ ಪ್ರಶಸ್ತಿ ಹಾಗೂ ಪ್ರಾದೇಶಿಕ ಆಂತರಿಕ ನಿಯತಕಾಲಿಕ ಮುದ್ರಣಕ್ಕೆ ಸಮಾಧಾನಕರ ಪ್ರಶಸ್ತಿ ಪಡೆಯಿತು. ಬಿಎಂಟಿಸಿ ಸಾಂಸ್ಥಿಕ ಕೈಪಿಡಿಗೆ ಡೈಮಂಡ್ ಪ್ರಶಸ್ತಿ, ಗ್ರಾಹಕ ಸೇವೆಯಲ್ಲಿಅತ್ಯುತ್ತಮ ತಾಂತ್ರಿಕತೆ ಬಳಕೆಗೆ ಚಿನ್ನದ ಪ್ರಶಸ್ತಿ, ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮಕ್ಕೆ ಬೆಳ್ಳಿ ಪ್ರಶಸ್ತಿ, ವರ್ಷದ ಅತ್ಯುತ್ತಮ ಸೃಜನಶೀಲ ಜಾಹೀರಾತು ವಿಭಾಗದಲ್ಲಿ ಕಂಚಿನ ಪ್ರಶಸ್ತಿಪಡೆಯಿತು.
  • ಏಷ್ಯಾದ ಕ್ರೀಡಾಪಟುಗಳಿಗೆ ಸಾಮರ್ಥ್ಯ ತೋರಿಸಲು ವೇದಿಕೆಯಾಗಿರುವ ಏಷ್ಯನ್ ಕ್ರೀಡಾಕೂಟ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ. ಆಧುನಿಕ ಮತ್ತು ಪರಿಸರ ಸ್ನೇಹಿ ತಂತ್ರಜ್ಞಾನಗಳೊಂದಿಗೆ 19ನೇ ಆವೃತ್ತಿಯ ಏಷ್ಯನ್ ಕ್ರೀಡಾಕೂಟವನ್ನು ಪ್ರಾರಂಭಿಸಲಾಗಿದೆ.ಆತಿಥೇಯ ದೇಶ : ಚೀನಾ ಘೋಷವಾಕ್ಯ :‘ಹೃದಯದಿಂದ ಹೃದಯದ ಭವಿಷ್ಯ’
  • ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (ಎನ್ಎಂಸಿ) ಜಾಗತಿಕವಾಗಿ ವೈದ್ಯಕೀಯ ಶಿಕ್ಷಣದ ಗುಣಮಟ್ಟ ವೃದ್ಧಿಗೆ ಮೀಸಲಾಗಿರುವ ವೈದ್ಯಕೀಯ ಶಿಕ್ಷಣಕ್ಕಾಗಿ ವಿಶ್ವ ಒಕ್ಕೂಟದ (ಡಬ್ಲ್ಯುಎಫ್ಎಂಇ) ಅಧಿಕೃತ ಮಾನ್ಯತೆ ಸಿಕ್ಕಿದೆ.
  • ಕಾರ್ಗಿಲ್ ಯುದ್ಧದ ಸಮಯದಲ್ಲಿ ಯುದ್ಧಭೂಮಿಯಾಗಿದ್ದ ಕೌಬಾಲ್ ಗಲಿ-ಮುಷ್ಕೋ ಕಣಿವೆ ಈಗ ಪ್ರವಾಸಿಗರನ್ನು ಸ್ವಾಗತಿಸುತ್ತಿದೆ. ಈ ರೂಪಾಂತರವು ಭಾರತ ಮತ್ತು ಪಾಕಿಸ್ತಾನದ ನಡುವಿನ ನಿರಂತರ ಕದನ ವಿರಾಮಕ್ಕೆ ಕಾರಣವಾಗಿದ್ದು, ಈ ಪ್ರದೇಶದಲ್ಲಿ ಪ್ರವಾಸೋದ್ಯಮ-ಚಾಲಿತ ವಾಣಿಜ್ಯವು ಅಭಿವೃದ್ಧಿ ಹೊಂದುತ್ತದೆ ಎಂಬ ಭರವಸೆಯನ್ನು ಹುಟ್ಟುಹಾಕಿದೆ.
  • ಭಾರತೀಯ ನೌಕಾಪಡೆಯ ಸ್ಥಳೀಯವಾಗಿ ನಿರ್ಮಿಸಲಾದ ಯುದ್ಧನೌಕೆ INS ಸಹ್ಯಾದ್ರಿ, ಇಂಡೋ-ಪೆಸಿಫಿಕ್ನಲ್ಲಿ ನಿಯೋಜಿಸಲಾಗಿದೆ, ರಾಯಲ್ ಆಸ್ಟ್ರೇಲಿಯನ್ ನೇವಿ (RAN) ಮತ್ತು ಇಂಡೋನೇಷಿಯನ್ ನೌಕಾಪಡೆಯ ಹಡಗುಗಳು ಮತ್ತು ವಿಮಾನಗಳೊಂದಿಗೆ 2023 ರ ಸೆಪ್ಟೆಂಬರ್ ನಲ್ಲಿ ಮೊದಲ ತ್ರಿಪಕ್ಷೀಯ ಸಮುದ್ರ ಪಾಲುದಾರಿಕೆ ವ್ಯಾಯಾಮದಲ್ಲಿ ಭಾಗವಹಿಸಿತು.