Published on: July 28, 2023

ಚುಟುಕು ಸಮಾಚಾರ : 27 ಜುಲೈ 2023

ಚುಟುಕು ಸಮಾಚಾರ : 27 ಜುಲೈ 2023

  • ಸೌರ ನಗರಗಳ ಅಭಿವೃದ್ಧಿಗಾಗಿ ಕರ್ನಾಟಕ ಬೀದರ್ ಮತ್ತು ಹೊಸಪೇಟೆ ನಗರಗಳನ್ನು ಗುರುತಿಸಿದೆ.
  • ಮಂಗಳೂರು ರಿಫೈನರಿ ಮತ್ತು ಪೆಟ್ರೊಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ಕಂಪನಿಯು2022-23ನೇ ಸಾಲಿನಲ್ಲಿ, ಒಂದೇ ಸ್ಥಳದಲ್ಲಿ ತೈಲ ಸಂಸ್ಕರಣೆ ಮಾಡುವ ದೇಶದ ಸರ್ಕಾರಿ ಸ್ವಾಮ್ಯದ ರಿಫೈನರಿಗಳ ಪೈಕಿ ಅತಿದೊಡ್ಡ ರಿಫೈನರಿ ಎಂಬ ಹೆಗ್ಗಳಿಕೆ ಪಡೆದಿದೆ.
  • ಭಾರತ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿಕೂಟಕ್ಕೆ (I.N.D.I.A) ಸೇರಿದ ವಿಪಕ್ಷಗಳು ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಪ್ರಸ್ತಾಪವನ್ನು ಸಭಾಧ್ಯಕ್ಷರಿಗೆ ಒಪ್ಪಿಸಿವೆ. ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದ ಕುರಿತು ತುರ್ತು ಚರ್ಚೆಗಳ ಅಗತ್ಯವನ್ನು ಉಲ್ಲೇಖಿಸಿ ವಿಪಕ್ಷಗಳು ಈ ನಿರ್ಧಾರ ಕೈಗೊಂಡಿವೆ
  • ಪ್ರತಿ ವರ್ಷ ಜುಲೈ 26 ರಂದು ಮ್ಯಾಂಗ್ರೋವ್ ಪರಿಸರ ವ್ಯವಸ್ಥೆ ಸಂರಕ್ಷಣಾ ಅಂತರರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತದೆ.