Published on: August 5, 2023

ಚುಟುಕು ಸಮಾಚಾರ : 3-4 ಆಗಸ್ಟ್ 2023

ಚುಟುಕು ಸಮಾಚಾರ : 3-4 ಆಗಸ್ಟ್ 2023

  • ಕಿನ್ನಿಗೋಳಿಯ ತಾಳಿಪಾಡಿ ನೇಕಾರರ ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ನೇಕಾರರು (ಕೈಮಗ್ಗದ ಬಟ್ಟೆ) “ಉಡುಪಿ ಸೀರೆ”ಗಳಿಗೆ ಅಡಿಕೆ ಚೊಗರಿನ ಬಣ್ಣ ನೀಡುವ ಪ್ರಯೋಗದಲ್ಲಿ ತೊಡಗಿಸಿಕೊಂಡಿದ್ದು ಯಶ ಸಾಧಿಸಿದ್ದಾರೆ. ಉಡುಪಿ ಸೀರೆಗೆ 1995ರಲ್ಲಿ ಜಿಐ ಮಾನ್ಯತೆ ದೊರೆತಿದೆ
  • ಭಾರತದ ವಿವಿಧ ಪ್ರದೇಶಗಳ ಏಳು ಉತ್ಪನ್ನಗಳಿಗೆ ಭೌಗೋಳಿಕ ಸೂಚಕ (GI) ಟ್ಯಾಗ್ ನೀಡಿದೆ
    • ‘ಜಲೇಸರ್ ಧಾತು ಶಿಲ್ಪ’
    • ಗೋವಾದ ‘ಮಂಕುರಡ್ ಮಾವು’
    • ‘ಗೋವಾನ್ ಬೆಬಿಂಕಾ’
    • ರಾಜಸ್ಥಾನದ ನಾಲ್ಕು ಉತ್ಪನ್ನಗಳಿಗೆ GI ಟ್ಯಾಗ್ಗಳು:
      • ಉದಯಪುರ ಕೋಫ್ಟಗರಿ ಮೆಟಲ್ ಕ್ರಾಫ್ಟ್
      • ಬಿಕಾನೇರ್ ಕಾಶಿದಕರಿ ಕ್ರಾಫ್ಟ್
      • ಜೋಧಪುರ ಬಂಧೇಜ್ ಕ್ರಾಫ್ಟ್
      • ಬಿಕಾನೆರ್ ಉಸ್ತಾ ಕಲಾ ಕ್ರಾಫ್ಟ್
      • ಆಸ್ಟ್ರೇಲಿಯಾದ ಸ್ಟ್ರಾಟೆಜಿಕ್ ಕೊಕೊಸ್ ದ್ವೀಪಗಳು
    • ಇತ್ತೀಚೆಗೆ, ಭಾರತೀಯ ನೌಕಾಪಡೆಯ ಡೋರ್ನಿಯರ್ ಕಡಲ ಗಸ್ತು ವಿಮಾನ ಮತ್ತು ಭಾರತೀಯ ವಾಯುಪಡೆಯ C-130 ಸಾರಿಗೆ ವಿಮಾನವು ದಕ್ಷಿಣ ಹಿಂದೂ ಮಹಾಸಾಗರದಲ್ಲಿರುವ ಆಸ್ಟ್ರೇಲಿಯಾದ ಕೋಕೋಸ್ (ಕೀಲಿಂಗ್) ದ್ವೀಪಗಳಿಗೆ (CKI) ಭೇಟಿ ನೀಡಿತು.
    • ಭಾರತದಲ್ಲಿ ಶಿಕ್ಷಣ ಪಡೆಯುವ ವಿದೇಶಿ ವಿದ್ಯಾರ್ಥಿಗಳ ಪ್ರವೇಶ ಸರಳಗೊಳಿಸಲು ಮತ್ತು ಒಂದೇ ವೇದಿಕೆಯಡಿ ಎಲ್ಲ ಮಾಹಿತಿ ಒದಗಿಸುವ ಸ್ಟಡಿ ಇನ್ ಇಂಡಿಯಾ (ಎಸ್ಐಐ) ಪೋರ್ಟಲ್ ಅನ್ನು ಕೇಂದ್ರ ಸರ್ಕಾರ ಆರಂಭಿಸಿದೆ.
    • ಆಸ್ಟ್ರೇಲಿಯಾದ ಕಡಲತೀರದಲ್ಲಿ ಪತ್ತೆಯಾಗಿದ್ದ ಗುಮ್ಮಟ ಆಕಾರದ ನಿಗೂಢ ವಸ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ರಾಕೆಟ್ ಭಾಗ ಎಂದು ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆ (ಎಎಸ್ಎ) ಸ್ಪಷ್ಟಪಡಿಸಿದೆ.