Published on: December 31, 2022

ಚುಟುಕು ಸಮಾಚಾರ – 31 ಡಿಸೆಂಬರ್ 2022

ಚುಟುಕು ಸಮಾಚಾರ – 31 ಡಿಸೆಂಬರ್ 2022

  • ವಿಧಾನಸಭಾ ಚುನಾವಣಾ ಸನ್ನಿಹದಲ್ಲಿರುವಂತೆಯೇ ಉತ್ತರ ಕರ್ನಾಟಕ ಜನರ ಬಹು ದಿನಗಳ ಬೇಡಿಕೆಯಾಗಿದ್ದ ಕಳಸಾ- ಬಂಡೂರಿ ಯೋಜನೆಯ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಶಕ್ತಿ ಆಯೋಗ ಅನುಮತಿ ನೀಡಿದೆ.
  • ಡಿಸೆಂಬರ್ 29 ಕವಿ ಕುವೆಂಪು ಅವರ 118   ನೇ ಜನ್ಮ ದಿನಾಚರಣೆಯಾಗಿದ್ದು ಕರ್ನಾಟಕ ಸರ್ಕಾರ 2015 ರಿಂದ ಇವರ ಹುಟ್ಟು ಹಬ್ಬವನ್ನು  ವಿಶ್ವಮಾನವ ದಿನವನ್ನಾಗಿ ಆಚರಿಸುತ್ತಿದೆ.
  • ಛತ್ತೀಸ್ಗಢ ಪೊಲೀಸರ ಮಾದಕ ದ್ರವ್ಯ ಮತ್ತು ಅಕ್ರಮ ಮದ್ಯ ವಿರೋಧಿ ಅಭಿಯಾನ ‘ನಿಜಾತ್’ ಗೆ ಅಂತಾರಾಷ್ಟ್ರೀಯ ಮನ್ನಣೆ ದೊರೆತ್ತಿದ್ದು, ಇಂಟರ್ನ್ಯಾಶನಲ್ ಅಸೋಸಿಯೇಷನ್ ಆಫ್ ಚೀಫ್ಸ್ ಆಫ್ ಪೋಲೀಸ್ (IACP), ಪ್ರಶಸ್ತಿ ಲಭಿಸಿದೆ.
  • ಮಹಾರಾಷ್ಟ್ರ–ತೆಲಂಗಾಣ ಗಡಿ: ಮಹಾರಾಷ್ಟ್ರ ಮತ್ತು ತೆಲಂಗಾಣ ಗಡಿಯ 14 ವಿವಾದಿತ ಗ್ರಾಮಗಳಲ್ಲಿ ವಾಸಿಸುವ ಜನರು   ಎರಡೂ ರಾಜ್ಯಗಳು ಜಾರಿಗೊಳಿಸುವ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. 14 ಗ್ರಾಮಗಳೂ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಜಿವಾಟಿ ತಾಲ್ಲೂಕಿನಲ್ಲಿವೆ (ಮಹಾರಾಷ್ಟ್ರದ ನಕ್ಷೆಯ ಪ್ರಕಾರ). ರಾಜಕೀಯ ಸ್ಥಾನಮಾನ, ಮೂಲಸೌಕರ್ಯ ಸೇರಿದಂತೆ ಎಲ್ಲಾ ಪ್ರಯೋಜನಗಳನ್ನು ಇಲ್ಲಿನ ಗ್ರಾಮಸ್ಥರು ಎರಡೂ ರಾಜ್ಯಗಳಿಂದಲೂ ಪಡೆಯುತ್ತಿದ್ದಾರೆ. ‘ಈ ಗ್ರಾಮಗಳು ತಮ್ಮ ಪ್ರದೇಶದಲ್ಲಿವೆ ಎಂದು ಹಿಂದೆ ಆಂಧ್ರಪ್ರದೇಶ ಮತ್ತು ಈಗ ತೆಲಂಗಾಣವು (ವಿಭಜನೆಯ ನಂತರ) ಪ್ರತಿಪಾದಿಸುತ್ತಿದೆ. ಈ ವಿವಾದವು ಇನ್ನೂ ಬಗೆಹರಿದಿಲ್ಲ’
  • ಸಾರ್ವಕಾಲಿಕ ಶ್ರೇಷ್ಠ ಆಟಗಾರ ವಿಶ್ವ ಫುಟ್ಬಾಲ್ ರಂಗದಲ್ಲಿ ಕಪ್ಪು ಮುತ್ತು (Black Pearl) ಎಂದೇ ಖ್ಯಾತಿ ಗಳಿಸಿದ್ದ ಬ್ರೆಜಿಲ್ ಫುಟ್ ಬಾಲ್ ಆಟಗಾರ ಪೀಲೆ ತಮ್ಮ 82 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ನೇತೃತ್ವದಲ್ಲಿ ಬ್ರೆಜಿಲ್ ಫುಟ್ಬಾಲ್ ತಂಡ ಮೂರು ಬಾರಿ ವಿಶ್ವಕಪ್ ಗೆದ್ದಿತ್ತು.
  • ಮಹಿಳೆಯರು, ಬಾಲಕಿಯರ ಹಕ್ಕುಗಳ ವ್ಯವಸ್ಥಿತ ಉಲ್ಲಂಘನೆಯಾಗುತ್ತಿದೆ ಎಂಬ ಆರೋಪದಡಿ ಲಿಂಗ ಸಮಾನತೆ ಮತ್ತು ಮಹಿಳೆಯರ ಸಬಲೀಕರಣ ಹಕ್ಕುಗಳಿಗೆ ಹೋರಾಡುವ ಜಾಗತಿಕ ಸಮಿತಿಯಿಂದ ಇರಾನ್‌ ಅನ್ನು ವಿಶ್ವಸಂಸ್ಥೆ ಮಂಡಳಿಯು ಕೈಬಿಟ್ಟಿದೆ.ಅಮೆರಿಕ ಈ ಕುರಿತ ನಿರ್ಣಯವನ್ನು ಮಂಡಿಸಿತ್ತು. ವಿಶ್ವಸಂಸ್ಥೆ ಸಾಮಾಜಿಕ ಮತ್ತು ಆರ್ಥಿಕ ಮಂಡಳಿ (ಇಸಿಒಎಸ್‌ಒಸಿ) ಸದಸ್ಯ ಬಲ 54 ಆಗಿದೆ. ಇರಾನ್‌ ಕೈಬಿಡುವ ನಿರ್ಣಯದ ಪರ 29, ವಿರುದ್ಧವಾಗಿ 8 ರಾಷ್ಟ್ರಗಳು ಮತಹಾಕಿದವು. 16 ರಾಷ್ಟ್ರಗಳು ಮತದಾನದಿಂದ ಹೊರಗುಳಿದವು. ಇರಾನ್‌ ಸದಸ್ಯತ್ವ 2026ರವರೆಗೆ ಇತ್ತು.