Published on: September 6, 2023

ಚುಟುಕು ಸಮಾಚಾರ : 5 ಸೆಪ್ಟೆಂಬರ್ 2023

ಚುಟುಕು ಸಮಾಚಾರ : 5 ಸೆಪ್ಟೆಂಬರ್ 2023

  • ಕಾಮಕಾಜಿ ಬಿ 2 ಬಿ ಮೀಡಿಯಾ ಪ್ರತಿಷ್ಠಾಪಿಸಿರುವ 15ನೇ ಆವೃತ್ತಿಯ ಎಕ್ಸಪ್ರೆಸ್ ಲಾಜಿಸ್ಟಿಕ್ ಹಾಗೂ ಸಪ್ಲೈ ಚೈನ್ ಲೀಡರ್ಶಿಪ್ ಪ್ರಶಸ್ತಿಗೆ ಕೆಎಸ್ಆರ್ಟಿಸಿ ಆಯ್ಕೆಯಾಗಿದೆ.   ಅತ್ಯುತ್ತಮ ಉದ್ಯೋಗದಾತ ಹಾಗೂ ಅತ್ಯುತ್ತಮ ಸುರಕ್ಷಾ ಉಪಕ್ರಮ ಅನುಷ್ಠಾನ ವರ್ಗಗಳಲ್ಲಿ ಕೆಎಸ್ಆರ್ಟಿಸಿ  ಆಯ್ಕೆಯಾಗಿದೆ ಇತ್ತೀಚೆಗಷ್ಟೇ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರಾಂಡ್ ಪ್ರಶಸ್ತಿಯನ್ನು ಕೆಎಸ್ಆರ್ಟಿಸಿ ಪಡೆದಿತ್ತು. ವಿ ಕನೆಕ್ಟ್ ಇಂಡಿಯಾ ಮೀಡಿಯಾ ಆ್ಯಂಡ್ ರಿಸರ್ಚ್ ನೀಡುವ ‘ಏಷ್ಯಾ ಬೆಸ್ಟ್ ಕ್ವಾಲಿಟಿ’ ಪ್ರಶಸ್ತಿಗೂ ಆಯ್ಕೆಯಾಗಿತ್ತು.
  • ಗುಜರಾತ್ನ ಕಕ್ರಾಪಾರ್ ನಲ್ಲಿ ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 700 MW ಪರಮಾಣು ವಿದ್ಯುತ್ ಸ್ಥಾವರ ಘಟಕ -3 ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
  • ವಿಶ್ವದ ಅಗ್ರ ಬ್ಯಾಂಕರ್ಗಳ ಪಟ್ಟಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಅಮೆರಿಕ ಮೂಲದ ನಿಯತಕಾಲಿಕ ಗ್ಲೋಬಲ್ ಫೈನಾನ್ಸ್ ಅವರನ್ನು ಜಾಗತಿಕ ಮಟ್ಟದ ಉನ್ನತ ಕೇಂದ್ರೀಯ ಬ್ಯಾಂಕರ್ ಎಂದು ಪಟ್ಟಿಮಾಡಿದ್ದು ಎ+ ರೇಟಿಂಗ್ ನೀಡಿದೆ.
  • ಸ್ಮಾರಕಗಳ ರಕ್ಷಣೆಗಾಗಿ ಕಾರ್ಪೊರೇಟ್ ಭಾಗಿದಾರರ ಸಹಭಾಗಿತ್ವ ಪಡೆಯುವ ಉದ್ದೇಶದಿಂದ ಭಾರತೀಯ ಪುರಾತತ್ವ ಇಲಾಖೆಯು (ಎಎಸ್ಐ) ‘ಅಡಾಪ್ಟ್ ಎ ಹೆರಿಟೇಜ್ 2.0’ ಆ್ಯಪ್ ಮತ್ತು ಇ-ಪರ್ಮಿಷನ್ ಪೋರ್ಟಲ್ ಅನ್ನು ಬಿಡುಗಡೆಮಾಡಿದೆ. ಇದು, 2017ರಲ್ಲಿ ಪ್ರಕಟಿಸಿದ್ದ ಯೋಜನೆಯ ಪರಿಷ್ಕೃತ ರೂಪವಾಗಿದೆ. ‘ಇಂಡಿಯನ್ ಹೆರಿಟೇಜ್’ ಹೆಸರಿನ ಬಳಕೆದಾರರ ಸ್ನೇಹಿಯಾಗಿರುವ ಈ ಮೊಬೈಲ್ ಆ್ಯಪ್ ನ್ನು ಸಹ ಬಿಡುಗಡೆ ಮಾಡಿತು.
  • ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಷನ್ ಏಜೆನ್ಸಿ (ಜಕ್ಸಾ), ಚಂದ್ರನ ಧ್ರುವ ಅನ್ವೇಷಣಾ ಯೋಜನೆ (ಲುಪೆಕ್ಸ್) ಅಥವಾ ಚಂದ್ರಯಾನ- 4ರ ಉಡಾವಣೆಯಲ್ಲಿ ಇಸ್ರೋ ಜತೆಗೂಡಿದೆ. ಲುಪೆಕ್ಸ್‌ನ ಪ್ರಾಥಮಿಕ ಗುರಿ ಚಂದ್ರನ ಧ್ರುವ ಪ್ರದೇಶದಲ್ಲಿ ನೀರಿನ ಅಸ್ತಿತ್ವ ಹಾಗೂ ಅದರ ಬಳಕೆ ಸಾಧ್ಯತೆಗಳನ್ನು ಸ್ಪಷ್ಟಪಡಿಸಿಕೊಳ್ಳುವುದು. ಚಂದ್ರಯಾನ-3ರ ರೋವರ್ ದಕ್ಷಿಣ ಧ್ರುವದ ರಚನೆ, ಖನಿಜ ಮತ್ತು ನೀರಿನ ಲಭ್ಯತೆಯ ಕುರಿತಾದ ಮಾಹಿತಿಗಳನ್ನು ಕಲೆ ಹಾಕಿ ಭೂಮಿಗೆ ರವಾನಿಸಲಿದೆ. ಈ ಅಧ್ಯಯನವನ್ನು ಮತ್ತಷ್ಟು ಆಳವಾಗಿ ನಡೆಸುವುದು ಚಂದ್ರಯಾನ- 4ರ ಉದ್ದೇಶ. ಜಪಾನ್ ಸಂಸ್ಥೆಯು ರೋವರ್ ಅಭಿವೃದ್ಧಿಪಡಿಸಿದರೆ, ಇಸ್ರೋ ಲ್ಯಾಂಡರ್ ಅಭಿವೃದ್ಧಿಪಡಿಸುತ್ತಿದೆ. ಈ ರೋವರ್ ಇಸ್ರೋ ಮತ್ತು ಜಕ್ಸಾದ ಸಾಧನಗಳು ಮಾತ್ರವಲ್ಲದೆ, ಅಮೆರಿಕದ ನಾಸಾ ಹಾಗೂ ಯುರೋಪ್ ಬಾಹ್ಯಾಕಾಶ ಸಂಸ್ಥೆಯ ಉಪಕರಣಗಳನ್ನೂ ಸಾಗಿಸಲಿದೆ. 2025 ಅಥವಾ 2026ರಲ್ಲಿ ಚಂದ್ರಯಾನ-4 ಉಡಾವಣೆಗೊಳ್ಳುವ ಸಾಧ್ಯತೆ ಇದೆ.
  • ಇನ್ಫೋಸಿಸ್‌ನ ಹೊಸ ಬ್ರಾಂಡ್ ಅಂಬಾಸಿಡರ್ ಆಗಿ ಖ್ಯಾತ ಟೆನಿಸ್ ಆಟಗಾರ ರಾಫೆಲ್ ನಡಾಲ್ ನೇಮಕಗೊಂಡಿದ್ದಾರೆ. ಮೂರು ವರ್ಷಗಳ ಪಾಲುದಾರಿಕೆಯ ಭಾಗವಾಗಿ ಅವರನ್ನು ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ನಡಾಲ್ ಸಂಸ್ಥೆಯ ಬ್ರ್ಯಾಂಡ್ ಮತ್ತು ಇನ್ಫೋಸಿಸ್‌ನ ಡಿಜಿಟಲ್ ಇನ್ನೋವೇಶನ್‌ಗೆ ರಾಯಭಾರಿಯಾಗಿರುತ್ತಾರೆ. ಟೆನಿಸ್‌ನೊಂದಿಗೆ ದೀರ್ಘಾವಧಿಯ ಸಂಬಂಧವನ್ನು ಹೊಂದಿರುವ ಇನ್ಫೋಸಿಸ್‌ನಂತಹ ಡಿಜಿಟಲ್ ಸೇವಾ ಸಂಸ್ಥೆಯೊಂದಿಗೆ ನಡಾಲ್‌ ಅವರ ಮೊದಲ ಸಹಯೋಗ ಇದಾಗಿದೆ. ಸಹಯೋಗದ ಭಾಗವಾಗಿ ಇನ್ಫೋಸಿಸ್ ಮತ್ತು ನಡಾಲ್ ಅವರ ಕೋಚಿಂಗ್ ತಂಡವು ಕೃತಕ ಬುದ್ಧಿಮತ್ತೆ (ಎಐ)-ಚಾಲಿತ ಪಂದ್ಯ ವಿಶ್ಲೇಷಣೆ ಸಾಧನವನ್ನು ಅಭಿವೃದ್ಧಿಪಡಿಸುತ್ತಿದೆ.
  • ಇದೇ ಮೊದಲ ಬಾರಿಗೆ ಉತ್ತರಾಖಂಡದ ಹಲ್ಡ್ವಾನಿ ಅರಣ್ಯ ಪ್ರದೇಶದ ಆರೋಮ್ಯಾಟಿಕ್ ಗಾರ್ಡನ್ನಲ್ಲಿ ಫಿಲಿಪ್ಪೀನ್ಸ್ ಮೂಲದ ಸುಗಂಧಿತ ‘ಯಿಲಾಂಗ್–ಯಿಲಾಂಗ್’ ಹೂವು ಅರಳಿದೆ. ಇದನ್ನು ‘ಸುಗಂಧ ದ್ರವ್ಯಗಳ ರಾಣಿ’ ಎಂದೂ ಕರೆಯುತ್ತಾರೆ. ಯಿಲಾಂಗ್–ಯಿಲಾಂಗ್ (Ylang-ylang)ಅನ್ನು ವೈಜ್ಞಾನಿಕವಾಗಿ ಕೆನಂಗಾ ಒಡೊರಾಟಾ (Cananga odorata) ಎಂದು ಕರೆಯಲಾಗುತ್ತದೆ, ಆರ್ದ್ರ, ತಗ್ಗು ಉಷ್ಣವಲಯ ಅಥವಾ ತೇವಾಂಶವುಳ್ಳ ಕಣಿವೆಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇದನ್ನು ಸಾರಭೂತ ತೈಲಗಳಿಗೆ ಮತ್ತು ಸುಗಂಧ ದ್ರವ್ಯ ಉದ್ಯಮದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಸ್ಥಳೀಯರ ಕೃಷಿಗೆ ಆದಾಯದ ತರುವಂಥದ್ದಾಗಿದೆ.