Published on: September 6, 2023

‘ಅಡಾಪ್ಟ್ ಎ ಹೆರಿಟೇಜ್ 2.0’ ಕಾರ್ಯಕ್ರಮ

‘ಅಡಾಪ್ಟ್ ಎ ಹೆರಿಟೇಜ್ 2.0’ ಕಾರ್ಯಕ್ರಮ

ಸುದ್ದಿಯಲ್ಲಿ ಏಕಿದೆ? ಸ್ಮಾರಕಗಳ ರಕ್ಷಣೆಗಾಗಿ ಕಾರ್ಪೊರೇಟ್ ಭಾಗಿದಾರರ ಸಹಭಾಗಿತ್ವ ಪಡೆಯುವ ಉದ್ದೇಶದಿಂದ ಭಾರತೀಯ ಪುರಾತತ್ವ ಇಲಾಖೆಯು (ಎಎಸ್ಐ) ‘ಅಡಾಪ್ಟ್ ಎ ಹೆರಿಟೇಜ್ 2.0’ ಕಾರ್ಯಕ್ರಮವನ್ನು ಅನಾವರಗೊಳಿಸಿತು ಮತ್ತು ಇ-ಪರ್ಮಿಷನ್ ಪೋರ್ಟಲ್ ಅನ್ನು ಬಿಡುಗಡೆಮಾಡಿದೆ. ಇದು, 2017ರಲ್ಲಿ ಪ್ರಕಟಿಸಿದ್ದ ಯೋಜನೆಯ ಪರಿಷ್ಕೃತ ರೂಪವಾಗಿದೆ.

ಮುಖ್ಯಾಂಶಗಳು

  • ‘ಇಂಡಿಯನ್ ಹೆರಿಟೇಜ್’ ಹೆಸರಿನ ಬಳಕೆದಾರರ ಸ್ನೇಹಿಯಾಗಿರುವ ಈ ಮೊಬೈಲ್ ಆ್ಯಪ್ ನ್ನು ಸಹ ಬಿಡುಗಡೆ ಮಾಡಿತು. ಎಎಸ್ಐ ಪರಿಮಿತಿಯಲ್ಲಿ ದೇಶದಾದ್ಯಂತ 3,697 ಸ್ಮಾರಕಗಳಿವೆ. ಈ ಸ್ಮಾರಕಗಳು ದೇಶದ ಶ್ರೀಮಂತ, ಸಾಂಸ್ಕೃತಿಕ ಪರಂಪರೆಯ ಅಭಿವ್ಯಕ್ತಿಯಾಗಿವೆ.
  • ಕಾರ್ಪೊರೇಟ್ ಸಂಸ್ಥೆಗಳ ಸಾಂಸ್ಥಿಕ(ಸಾಮಾಜಿಕ ಹೊಣೆಗಾರಿಕೆ)ಸಿಎಸ್ಆರ್ ನಿಧಿ ಬಳಸಿಕೊಂಡು ಪಾರಂಪರಿಕ ತಾಣಗಳಲ್ಲಿನ ಸೌಕರ್ಯಗಳನ್ನು ಸುಧಾರಿಸುವಲ್ಲಿ ಕಾರ್ಪೊರೇಟ್ ಮಧ್ಯಸ್ಥಗಾರರ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಸುಲಭಗೊಳಿಸಲು ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ .

ಇ-ಪರ್ಮಿಷನ್ ಪೋರ್ಟಲ್

  • ಈ ಪೋರ್ಟಲ್ ಸ್ಮಾರಕಗಳ ಮೇಲಿನ ಛಾಯಾಗ್ರಹಣ, ಚಿತ್ರೀಕರಣ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಅನುಮತಿಗಳನ್ನು ಪಡೆದುಕೊಳ್ಳಲು , ಈ ಚಟುವಟಿಕೆಗಳಲ್ಲಿ ಒಳಗೊಂಡಿರುವ ಕಾರ್ಯಾಚರಣೆಯ ಮತ್ತು ವ್ಯವಸ್ಥಾಪನಾ ಅಡಚಣೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ.

‘ಇಂಡಿಯನ್ ಹೆರಿಟೇಜ್’ ಆ್ಯಪ್

  • ದೇಶದ ವಿವಿಧ ಐತಿಹಾಸಿಕ ಸ್ಮಾರಕಗಳ ವಿವರಗಳನ್ನು ಒಳಗೊಂಡಿದೆ.ಈ ನವೀನ ಅಪ್ಲಿಕೇಶನ್ ಭಾರತದ ಶ್ರೀಮಂತ ಪರಂಪರೆಯ ಸ್ಮಾರಕಗಳ ಡಿಜಿಟಲ್ ಪ್ರದರ್ಶನವಾಗಿ ಕಾರ್ಯನಿರ್ವಹಿಸುತ್ತದೆ. ಇದು ಛಾಯಾಚಿತ್ರಗಳು, ಲಭ್ಯವಿರುವ ಸಾರ್ವಜನಿಕ ಸೌಕರ್ಯಗಳ ಪಟ್ಟಿ, ಜಿಯೋ-ಟ್ಯಾಗ್ ಮಾಡಲಾದ ಸ್ಥಳಗಳು ಮತ್ತು ನಾಗರಿಕರಿಗೆ ಪ್ರತಿಕ್ರಿಯೆ ಕಾರ್ಯವಿಧಾನದ ಜೊತೆಗೆ ಸ್ಮಾರಕಗಳ ರಾಜ್ಯವಾರು ವಿವರಗಳನ್ನು ಒದಗಿಸುತ್ತದೆ .

ಉದ್ದೇಶ

  • ಭಾರತದ ಹೇರಳವಾದ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವ ಮತ್ತು ಪ್ರದರ್ಶಿಸುವ ಗುರಿಯನ್ನು ಹೊಂದಿದೆ. ದೇಶದ ಆರ್ಥಿಕತೆ ಪ್ರಗತಿಯನ್ನು ಬಿಂಬಿಸುವಲ್ಲಿಯೂ ಗಣನೀಯ ಪಾತ್ರವಹಿಸಲಿವೆ. ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಕಾರ್ಪೊರೇಟ್ ಭಾಗಿದಾರರ ಜೊತೆಗೆ ಸಹಭಾಗಿತ್ವ ಹೊಂದಲು ಒತ್ತು ನೀಡಲಿದೆ. ಸ್ಮಾರಕಗಳನ್ನು ಮುಂದಿನ ಪೀಳಿಗೆಗೆ ಉಳಿಸಲು ದತ್ತು ಪಡೆಯುವ ಮೂಲಕ ನೆರವಾಗಬಹುದಾಗಿದೆ.