Published on: June 10, 2023

ಚುಟುಕು ಸಮಾಚಾರ : 9 ಜೂನ್ 2023

ಚುಟುಕು ಸಮಾಚಾರ : 9 ಜೂನ್ 2023

  • ಸುಮಾರು 5 ಸಾವಿರ ವರ್ಷದ ಹಿಂದಿನ ಶಿಲಾಯುಗದ ಆಕರ್ಷಕ ನಿಲುವುಗಲ್ಲು ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಬೊಮ್ಮನಹಳ್ಳಿ ಗ್ರಾಮದಲ್ಲಿ ಪತ್ತೆಯಾಗಿದ್ದು, ಇದೊಂದು ಶಿಲಾಯುಗದ ಸಂಸ್ಕೃತಿ ಎಂದು ಇತಿಹಾಸ ತಜ್ಞರು ಬಣ್ಣಿಸಿದ್ದಾರೆ.
  • ಭಾರತೀಯ ನೌಕಾಪಡೆ ಮತ್ತು DRDO ದೇಶೀಯವಾಗಿ ಅಭಿವೃದ್ಧಿಪಡಿಸಿದ ಟಾರ್ಪೆಡೋ ವರುಣಾಸ್ತ್ರ ಪ್ರಯೋಗವನ್ನು ಪಶ್ಚಿಮ ಕರಾವಳಿಯ ಸಮುದ್ರದಲ್ಲಿ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ನಡೆಸಲಾಯಿತು.
  • ವಿದ್ಯುತ್ ಸಚಿವಾಲಯ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಜಂಟಿಯಾಗಿ ವಿದ್ಯುತ್ ವಲಯದಲ್ಲಿ ಉದಯೋನ್ಮುಖ ತಂತ್ರಜ್ಞಾನಗಳನ್ನು ತ್ವರಿತವಾಗಿ ಗುರುತಿಸಲು ಮತ್ತು ಭಾರತದ ಒಳಗೆ ಮತ್ತು ಹೊರಗೆ ನಿಯೋಜನೆಗಾಗಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಲು “ಮಿಷನ್ ಆನ್ ಅಡ್ವಾನ್ಸ್ಡ್ ಅಂಡ್ ಹೈ-ಇಂಪ್ಯಾಕ್ಟ್ ರಿಸರ್ಚ್ (MAHIR)” ರಾಷ್ಟ್ರೀಯ ಮಿಷನ್ ಅನ್ನು ಪ್ರಾರಂಭಿಸಿದೆ.
  • ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಬಿಪರ್ಜಾಯ್ ಚಂಡಮಾರುತ ತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಿದೆ. ಚಂಡಮಾರುತಕ್ಕೆ ಬಿಪರ್ಜಾಯ್ ಎಂಬ ಹೆಸರನ್ನು ಬಾಂಗ್ಲಾ ದೇಶ ಸೂಚಿಸಿದೆ.